ರಾಂಚಿ:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಬಡ ವೃದ್ಧನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಈ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಇಲ್ಲಿನ ವೃದ್ಧರೊಬ್ಬರ ಬ್ಯಾಂಕ್​ ಖಾತೆಗೆ ಬರೋಬ್ಬರಿ 75 ಕೋಟಿ ರೂಪಾಯಿ ಹಣ ಡೆಪಾಸಿಟ್​ ಆಗಿದೆ. ಈ ವಿಚಾರ ತಿಳಿದ ವೃದ್ಧನಿಗೆ ಏನು ಮಾಡಬೇಕೆಂದು ದಿಕ್ಕು ತೋಚದೇ ಕಂಗಾಲಾಗಿದ್ದಾರೆ.
ವೃದ್ಧನ ಹೆಸರು ಪುಲೊರೈ. ಈತ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಡುಮ್ಕ ಜಿಲ್ಲೆ ಜಾರ್ಮುಂಡಿ ವಲಯದ ಸಾಗರ ಗ್ರಾಮದಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಿದ್ದಾರೆ. ಕೃಷಿ ಮಾಡಿಕೊಂಡು ಕುಟುಂಬ ಜೀವನ ಸಾಗಿಸುತ್ತಿದೆ. ಅಚ್ಚರಿಯೇನೆಂದರೆ, ಪುಲೊರೈ ಅವರ ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ ಖಾತೆಗೆ 75 ಕೋಟಿ ರೂ. ಜಮೆ ಆಗಿದೆ. ಪಿಂಚಣಿ ಹಣ ತೆಗೆದುಕೊಳ್ಳಲು ಹೋದಾಗ ಈ ವಿಚಾರ ತಿಳಿದ ವೃದ್ಧನಿಗೆ ಶಾಕ್​ ಆಗಿದೆ.
ತನ್ನ ಖಾತೆಯಿಂದ ವೃದ್ಧ 10 ಸಾವಿರ ರೂಪಾಯಿ ಡ್ರಾ ಮಾಡಿದ. ಆದರೆ, ಖಾತೆಯಲ್ಲಿ ಇನ್ನು 75.28 ಕೋಟಿ ರೂಪಾಯಿ ಬ್ಯಾಲೆನ್ಸ್​ ಇತ್ತು. ಅದು ಹೇಗೆ ಬಂತ್ತೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ. ಮಂಗಳವಾರ ಮತ್ತೆ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದಾಗ 75 ಕೋಟಿ ರೂ. ಬದಲಾಗಿ 5 ಕೋಟಿ ರೂ. ಅಕೌಂಟ್​ನಲ್ಲಿತ್ತು. ಈಗಲೂ ಸಹ ಐದು ಕೋಟಿ ರೂ. ಹಾಗೇ ಇದೆ.
ಉಳಿದ 75 ಕೋಟಿ ರೂ. ಏನಾಯ್ತು ತಿಳಿದಿಲ್ಲ ಎಂದು ವೃದ್ಧ ಹೇಳಿದ್ದಾರೆ. ಇದೀಗ ವೃದ್ಧನ ವಿಚಾರ ತಿಳಿದ ಅನೇಕರು ಆತನನ್ನು ಭೇಟಿ ಮಾಡಲು ಸಾಲು ಸಾಲಾಗಿ ಬರುತ್ತಿದ್ದಾರೆ. ಇತ್ತ ಭಯಭೀತನಾಗಿರುವ ವೃದ್ಧ ಇಷ್ಟೊಂದು ಹಣ ಖಾತೆಗೆ ಬಂದಿರುವುದನ್ನು ನೋಡಿದರೆ ಏನಾದರೂ ಸಂಭವಿಸುತ್ತಾ ಎಂಬ ಆತಂಕದಲ್ಲಿದ್ದಾರೆ. ಸರಿಯಾಗಿ ನಿದ್ದೆ ಕೂಡ ಬರುತ್ತಿಲ್ಲ. ಏನು ನಡೆಯುತ್ತಿದೆ ಎಂಬ ಗೊಂದಲದಲ್ಲಿದ್ದಾರೆ. ಆದಾಗ್ಯೂ ವೃದ್ಧ ತನ್ನ ಕೆಲಸವನ್ನು ಮುಂದುವರಿಸಿದ್ದಾರೆ. ಹಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್​ ಅಧಿಕಾರಿಗಳು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.(ಏಜೆನ್ಸೀಸ್​)
ತಂದೆ ಮಾತಿಗೆ ಮಗನ ಬೆಂಬಲ: ಟಾಲಿವುಡ್​ನಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸುತ್ತಾ ನಾಗಚೈತನ್ಯ ಹೇಳಿಕೆ

ಸೈನಾ ನೆಹ್ವಾಲ್​ ಬಳಿ ಕ್ಷಮೆಯಾಚಿಸಿದ್ರೂ ಮುಗಿಯದ ವಿವಾದ: ತೀವ್ರ ಟೀಕೆಯ ಬಳಿಕ ಸಿದ್ಧಾರ್ಥ್​ಗೆ ಮತ್ತೊಂದು ಶಾಕ್​!

ಶೂನ್ಯ ಕೋವಿಡ್​ ನಿಯಮ: ಚೀನಾ ಜನರ ಸದ್ಯದ ಪರಿಸ್ಥಿತಿ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ..!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:fourteen + six =
Remember me
