ಹೈದರಾಬಾದ್​:ಆನ್​ಲೈನ್​ ಶಾಪಿಂಗ್​ ಮಾಡಿದ ಯುವತಿಯೊಬ್ಬಳು ಕೊರಿಯರ್​ ಕಂಪನಿಯಿಂದ ಬಾಕಿ 300 ರೂಪಾಯಿ ಪಡೆಯಲು ಹೋಗಿ 1.90 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ಹಣ ಕಳೆದುಕೊಂಡ ಯುವತಿ ಇದೀಗ ಸೈಬರ್​ ಕ್ರೈಂ ಪೊಲೀಸ್​ ಠಾಣೆಯ ಮೆಟ್ಟಿಲು ಹೇರಿದ್ದಾಳೆ.
ಉಷಾ ರಾಣಿ ಎಂಬಾಕೆ ಆನ್​ಲೈನ್​ನಲ್ಲಿ ಕೆಲವು ಪದಾರ್ಥಗಳನ್ನ ಬುಕ್​ ಮಾಡಿದ್ದಳು. ಆ ವಸ್ತುಗಳನ್ನು ಕೊರಿಯರ್​ ಕಂಪನಿಯೊಂದು ಡೆಲಿವರಿ ಮಾಡಿತು. ಈ ವೇಳೆ ಡೆಲಿವರಿ ಬಾಯ್​, ಉಷಾರಾಣಿಗೆ ಬಾಕಿ 300 ರೂಪಾಯಿ ಕೊಡದೇ ಹಿಂದಿರುಗಿದ.
ಇದಾದ ಬಳಿಕ ಉಷಾರಾಣಿ ಡೆಲಿವರಿ ಬಾಯ್​ಗೆ ಕರೆ ಮಾಡಿದ್ದಾಳೆ. ಆದರೆ, ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕಸ್ಟಮರ್​ ಕೇರ್​ಗೆ ಕರೆ ಮಾಡಿ ದೂರು ನೀಡಿದ್ದಾಳೆ. ಬಳಿಕ ಕಂಪನಿಯ ಓರ್ವ ವ್ಯಕ್ತಿ ಉಷಾರಾಣಿಗೆ ಅರ್ಜಿಯೊಂದನ್ನು ಕಳುಹಿಸಿ ಇದನ್ನು ಭರ್ತಿ ಮಾಡಿ ಕಳುಹಿಸಿ ನಿಮ್ಮ ಹಣ ಹಿಂದಿರುಗುತ್ತದೆ ಎಂಬ ಭರವಸೆ ನೀಡಿದ್ದಾರೆ.
ಅವರು ಹೇಳಿದಂತೆ ಉಷಾರಾಣಿ ಅರ್ಜಿ ಭರ್ತಿ ಮಾಡಿ ಕಳುಹಿಸಿದ್ದಾರೆ. ಆದರೆ, 300 ರೂ. ಬಾಕಿ ಹಣದ ಬದಲು ಆಕೆಯ ಖಾತೆಯಲ್ಲಿದ್ದ 91 ಸಾವಿರ ಹಣವನ್ನು ಪ್ರಾರಂಭದಲ್ಲಿ ಎಗರಿಸಿದ್ದಾರೆ. ಬಳಿಕ ಉಷಾರಾಣಿ ಮತ್ತೆ ಕರೆ ಮಾಡಿದಾಗ ತಪ್ಪಾಗಿ ಭರ್ತಿ ಮಾಡಿದ್ದರಿಂದ ಈ ಪ್ರಮಾದ ಆಗಿದೆ ಮತ್ತೊಮ್ಮೆ ಭರ್ತಿ ಮಾಡಿ ಕಳುಹಿಸಿ ಎಂದಿದ್ದಾರೆ.
ಇದಾದ ಬಳಿಕ ಎರಡನೇ ಬಾರಿ ಭರ್ತಿ ಮಾಡಿ ಕಳುಹಿಸಿದಾಗಲೂ ಮತ್ತೆ 99 ಸಾವಿರ ಹಣವನ್ನು ಖಾತೆಯಿಂದ ಎಗರಿಸಿದ್ದಾರೆ. ಯಾವಾಗ ತಾನು ಮೋಸ ಹೋಗಿದ್ದೇನೆ ಎಂದು ತಿಳಿಯಿತೋ ಉಷಾರಾಣಿ ತಕ್ಷಣ ಬಂಜಾರ ಹಿಲ್ಸ್​ನ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.(ಏಜೆನ್ಸೀಸ್​)
ಬರ್ತಡೇ ಪಾರ್ಟಿಗೆ ಹೊರಟ ಹುಡುಗಿ ಮೇಲೆ ಗ್ಯಾಂಗ್​ರೇಪ್: ಫ್ರೆಂಡ್ಸ್​ ಬಳಿ ಸಹಾಯ ಕೇಳಿದವಳಿಗೆ ಕಾದಿತ್ತು ಆಘಾತ​

ಯೋಗಿ ಆದಿತ್ಯನಾಥ್​ ಹುಟ್ಟುಹಬ್ಬದಂದು ಪ್ರಧಾನಿ ಮೋದಿ ಶುಭಕೋರದಿರಲು ಇದೇ ಕಾರಣನಾ?

ಸಿಎಂ ಬದಲಾವಣೆ : ದೆಹಲಿಯಲ್ಲಾದ ಚರ್ಚೆ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
