ಕೋಲ್ಕತ:ಪಿಕ್​ ಪಾಕೆಟ್​ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಕೋಲ್ಕತ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ (ಮಾರ್ಚ್​ 12) ನಡೆದ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳದಲ್ಲಿ ರೂಪಾ ದತ್ತ ಪಿಕ್​ ಪಾಕೆಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕೋಲ್ಕತದ ಬಿಧನ್​ನಗರ ಉತ್ತರ ಪೊಲೀಸ್​ ಠಾಣೆಯ ಪ್ರಕಾರ ಮಹಿಳೆಯೊಬ್ಬಳು ಕಸದ ಬುಟ್ಟಿಗೆ ಬ್ಯಾಗ್​ ಎಸೆಯುವುದನ್ನು ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್​ ಸಿಬ್ಬಂದಿ ನೋಡಿದ್ದಾರೆ. ತಕ್ಷಣ ಅನುಮಾನಗೊಂಡು ಮಹಿಳೆಯನ್ನು ವಿಚಾರಿಸಿದಾಗ ಆಕೆ ನಟಿ ರೂಪಾ ದತ್ತ ಎಂಬುದು ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಆಕೆಯ ಬ್ಯಾಗ್​ನಲ್ಲಿ ಅನೇಕ ಪಾಕೆಟ್​ ಇರುವುದು ಕಂಡುಬಂದಿತ್ತು. ಒಟ್ಟು 75 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ರೂಪಾ ದತ್ತ ಅವರನ್ನು ಪಿಕ್​ ಪಾಕೆಟ್​ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಕೆಲ ವರ್ಷಗಳ ಹಿಂದೆ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಸುಳ್ಳು ಆರೋಪ ಮಾಡಿ ರೂಪಾ ದತ್ತ ಸುದ್ದಿಯಾಗಿದ್ದರು. ಕಶ್ಯಪ್​ ಅವರು ಫೇಸ್​ಬುಕ್​ ಮೂಲಕ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ರೂಪಾ, ಅನುರಾಗ್ ಹೆಸರಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಚಾಟ್​ ಮಾಡುತ್ತಿದ್ದಳು ಎಂಬುದು ತಂದನಂತರದಲ್ಲಿ ವಿಚಾರಣೆಯ ಬಳಿಕ ಗೊತ್ತಾಯಿತು. ಚಾಟ್​ ಮಾಡಿದ್ದ ಸ್ಕ್ರೀನ್​ಶಾಟ್​ ಅನ್ನು ಸಹ ರೂಪಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಅನುರಾಗ್​ ಕಶ್ಯಪ್​ ಬದಲಾಗಿ ಅನುರಾಗ್​ ಸಫಾರ್​ ಹೆಸರಿತ್ತು.
ರೂಪಾ ಅವರ ಟ್ವಿಟರ್ ಬಯೋ ಹೇಳುವ ಪ್ರಕಾರ ಜೈ ಮಾ ವೈಷ್ಣೋದೇವಿಯಂತಹ ಟಿವಿ ಶೋಗಳಲ್ಲಿ ಅವರು ಭಾಗವಹಿಸಿದ್ದಾರೆ.(ಏಜೆನ್ಸೀಸ್​)
ಸಮಂತಾ ತೊಟ್ಟ ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​ ಬೆಲೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ!

ಮೈಸೂರು ವಿಶ್ವವಿದ್ಯಾಲಯದಿಂದ ನಟ ಪುನೀತ್​​ ರಾಜ್​ಕುಮಾರ್​ಗೆ ಗೌರವ ಡಾಕ್ಟರೇಟ್ ಘೋಷಣೆ​

ರಹಸ್ಯವಾಗಿ ಮದ್ವೆಯಾದ ನಯನತಾರಾ-ವಿಘ್ನೇಶ್ ಶಿವನ್​: ದೇವಸ್ಥಾನದಲ್ಲೇ ಹೊರಬಿತ್ತು ಮಹತ್ವದ ಸುಳಿವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 8 =
Remember me
