ಪಟನಾ:ಸಣ್ಣ ವಿಚಾರಕ್ಕೆ ಫೋನ್​ ಕಾಲ್​ನಲ್ಲಿ ಕಿತ್ತಾಡಿಕೊಂಡ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ. ಬಿಹಾರದ ಮುಜಾಫರ್​ಪುರದಲ್ಲಿ ಪ್ರೇಯಸಿ ನೇಣಿಗೆ ಶರಣಾದರೆ, ಪ್ರಿಯಕರ ರಾಜಸ್ಥಾನದ ಜೈಪುರದಲ್ಲಿ ಎಂಟು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ.
ಮೃತ ಪ್ರೇಮಿಗಳನ್ನು ಅಂಜಲಿ ಜೈಸ್ವಾಲ್​ (23) ಮತ್ತು ವಿವೇಕ್​ ಕುಮಾರ್​ (26) ಎಂದು ಗುರುತಿಸಲಾಗಿದೆ. ಮುಜಾಫರ್​ಪುರದ ನಿವಾಸಿ ಅಂಜಲಿ ಮತ್ತು ನೀಮ್​ ಚೌಕ್​ ಶಂಕರಪುರಿ ನಿವಾಸಿ ವಿವೇಕ್​ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು 9ನೇ ತರಗತಿಯಿಂದಲೂ ಲವ್​ ಮಾಡುತ್ತಿದ್ದರು. ಸುಮಾರು 10 ವರ್ಷಗಳವರೆಗೂ ಇಬ್ಬರ ನಡುವೆ ಯಾವುದೇ ಗಲಾಟೆಗಳು ನಡೆದಿರಲಿಲ್ಲ. ಎಲ್ಲವು ಸರಿಯಾಗಿ ಸಾಗುತ್ತಿತ್ತು.
ನಾಲ್ಕು ವರ್ಷಗಳ ಹಿಂದೆ ವಿವೇಕ್​ ಜೈಪುರಕ್ಕೆ ಇಂಜಿನಿಯರಿಂಗ್​ ಮಾಡಲೆಂದು ತೆರಳಿದ್ದ. ಇಬ್ಬರು ದೂರ ದೂರ ಆದರೂ ಪರಸ್ಪರ ಸಂಪರ್ಕದಲ್ಲಿದ್ದರು. ಇತ್ತ ಅಂಜಲಿ ಚಾರ್ಟೆಡ್​ ಅಕೌಂಟೆಂಟ್​ಗೆ ಸಿದ್ಧತೆ ನಡೆಸುತ್ತಿದ್ದಳು. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಬಿರುಕು ಮೂಡಿತ್ತು. ಇಬ್ಬರ ನಡುವಿನ ಬಿರುಕು ದೊಡ್ಡದಾದಾಗ ಇಬ್ಬರ ಕಾಮನ್​ ಫ್ರೆಂಡ್​ ಬಿರುಕನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದನು.
ಮೂವರು ಕೂಡ ಕಾನ್ಫರೆನ್ಸ್​ ಕಾಲ್ ಮೂಲಕ ಮಾತನಾಡಿದ್ದರು.​ ಈ ವೇಳೆ ಅಂಜಲಿ ಮತ್ತು ವಿವೇಕ್​ ನಡುವೆ ದಿಢೀರ್​ ಜಗಳವಾಗಿದೆ. ಅದು ತಾರಕಕ್ಕೇರಿದೆ. ಈ ವೇಳೆ ವಿವೇಕ್​ ತಕ್ಷಣ ಕರೆ ಕಡಿತಗೊಳಿಸಿದ್ದಾನೆ. ಅಲ್ಲದೆ, ಮೊಬೈಲ್ ಅನ್ನು ಸ್ವಿಚ್​ ಆಫ್​ ಸಹ ಮಾಡಿದ್ದಾನೆ. ಇದಾದ ಮಾರನೇ ದಿನ ಅಂದರೆ, ಗುರುವಾರ ಬೆಳಗ್ಗೆ ಫೋನ್​ ಸ್ವಿಚ್​ ಆನ್​ ಮಾಡಿದಾಗ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವಿವೇಕ್​ಗೆ ಗೊತ್ತಾಗಿದೆ. ತಕ್ಷಣ ವಿವೇಕ್​ಗೆ ಭಾರೀ ಆಘಾತವಾಗಿದ್ದು, ಅಂಜಲಿ ಸಾವಿನಿಂದ ಹೊರಬರಲಾಗದೇ 8ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಜಾಫರ್‌ಪುರ ಪೊಲೀಸರು ಅಂಜಲಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮತ್ತೊಂದೆಡೆ, ವಿವೇಕ್ ಸಾವಿನ ನಂತರ ಅವರ ಪ್ರೀತಿಪಾತ್ರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ವಿವೇಕ್ ಕುಟುಂಬ ಜೈಪುರಕ್ಕೆ ತೆರಳಿದೆ. ವಿವೇಕ್ ಚಿಕ್ಕಪ್ಪನ ಪ್ರಕಾರ, ಮೂರು ವರ್ಷಗಳಿಂದ ಇಬ್ಬರ ಪ್ರೇಮ ಪ್ರಕರಣದ ಬಗ್ಗೆ ಅವರಿಗೆ ತಿಳಿದಿತ್ತಂತೆ. ಆದರೆ ಅಂತಹ ದುರಂತ ಅಂತ್ಯವನ್ನು ಊಹಿಸಲು ಸಹ ಸಾಧ್ಯವಾಗಲಿಲ್ಲ. ಅಂಜಲಿಯನ್ನು ಸೊಸೆಯನ್ನಾಗಿ ಸ್ವೀಕರಿಸಲು ನಾವು ರೆಡಿಯಾಗಿದ್ದೆವು, ಆದರೆ, ಅಷ್ಟರಲ್ಲಿ ದುರಂತ ನಡೆದು ಹೋಗಿದೆ ಎಂದು ಕಂಬನಿ ಮಿಡಿದಿದ್ದಾರೆ.(ಏಜೆನ್ಸೀಸ್​)
ಮನೆ ಪಾರ್ಟಿಯಲ್ಲಿ ಅಲೋಕ್-ಅದ್ವಿಕಾ

ಆನ್​ಲೈನ್ ಮತದಾನಕ್ಕೆ ಚಿಂತನೆ; ಕಡ್ಡಾಯ ಮತದಾನ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದ ರಿಜಿಜು

https://www.vijayavani.net/%e0%b2%a6%e0%b3%83%e0%b2%b6%e0%b3%8d%e0%b2%af%e0%b2%b5%e0%b3%88%e0%b2%ad%e0%b3%8a%e0%b3%95%e0%b2%97%e0%b2%a6%e0%b3%8a%e0%b2%b3%e0%b2%97%e0%b3%86-%e0%b2%85%e0%b2%ac%e0%b3%8d%e0%b2%ac%e0%b2%b0%e0%b2%a6/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − nine =
Remember me
