ಚೆನ್ನೈ:ಕೆಲಸ ಕೊಡಿಸುವುದಾಗಿ ನಂಬಿಸಿ ತ್ರಿಪುರಾ ರಾಜ್ಯದ ನಾಲ್ವರು ಹೆಣ್ಣು ಮಕ್ಕಳನ್ನು ಕರೆತಂದು ಅವರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಭಾನುವಾರ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.
ತ್ರಿಪುರಾದ ಶಿವಜಾಲಾ ಏರಿಯಾದಿಂದ ಹೆಣ್ಣು ಮಕ್ಕಳನ್ನು ಬೆಂಗಳೂರು ಮತ್ತು ಚೆನ್ನೈಗೆ ಆರೋಪಿಗಳು ರವಾನಿಸಿದ್ದಾರೆ. ಮೊದಲು ನಾಲ್ವರು ಹೆಣ್ಣುಮಕ್ಕಳನ್ನು ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಎಂದು ಹೇಳಿ ಕಳುಹಿಸಲಾಗುತ್ತದೆ. ಆದರೆ, ಅವರನ್ನು ಚೆನ್ನೈಗೆ ಸ್ಥಳಾಂತರಿಸಲಾಗುತ್ತದೆ. ನಂತರ ಅವರನ್ನು ಜನವರಿ 17ರಂದು ಚೆನ್ನೈನ ಉಪನಗರ ಕೆಲಂಬಕ್ಕಮ್​ನ ಪದೂರ್​ನಲ್ಲಿನ ಮನೆಯೊಂದರಲ್ಲಿ ಬಂಧಿಸಿ ಇಲಾಗುತ್ತದೆ. ಬಳಿಕ ಅಲಾಉದ್ದೀನ್​, ಮೋಯಿದ್ದೀನ್​, ಅನ್ವರ್​ ಮತ್ತು ಹುಸೇನ್​ ಎಂಬ ಕಿರಾತಕರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ.
ಜ.26ರಂದು ಹೆಣ್ಣುಮಕ್ಕಳನ್ನು ಕೆಲ ರೆಸಾರ್ಟ್​ಗೆ ಸಾಗಿಸುವಾಗ ಮಾರ್ಗ ಮಧ್ಯೆ 16 ವರ್ಷದ ಹುಡುಗಿಯೊಬ್ಬಳು ಹೇಗೋ ಎಸ್ಕೇಪ್​ ಆಗುತ್ತಾಳೆ. ಆಕೆ ಪೊಲೀಸ್​ ಗಸ್ತು ವಾಹನವನ್ನು ಕಂಡು ನಡೆದಿದ್ದನ್ನು ವಿವರಿಸುತ್ತಾಳೆ. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುತ್ತಾರೆ. ಆದರೆ, ಆರೋಪಿಗಳನ್ನು ಸ್ಥಳದಿಂದ ಎಸ್ಕೇಪ್​ ಆಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ರಕ್ಷಣೆಯಾಗಿರುವ ನಾಲ್ವರು ಹುಡುಗಿಯರನ್ನು ತ್ರಿಪುರಾಗೆ ವಾಪಸ್​ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)
20ಕ್ಕಿಳಿದ 50ರ ಖುಷ್ಬೂ! 15 ಕೆಜಿ ಭಾರ ಇಳಿಸಿದ ನಟಿಯ ಫೋಟೋಗಳು ವೈರಲ್…

40 ಕೋಟಿ ರೂ. ಬೆಲೆಯ ಬಟ್ಟೆ ತೊಟ್ಟ ಭೂಲೋಕದ ಊರ್ವಶಿ!

‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: ‘ಅದೂ ಅಲ್ಲ, ಇದೂ ಅಲ್ಲ’ ಎಂದು ‘ಆರ್​ಆರ್​ಆರ್’​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − six =
Remember me
