ತಿರುವನಂತಪುರಂ:ಸಿನಿಮಾ ನಟಿಯರ ಪ್ರತಿಯೊಂದು ಚಲನವಲನಗಳ ಮೇಲೆ ನೆಟ್ಟಿಗರು ಕಣ್ಣಿಟ್ಟಿರುತ್ತಾರೆ. ಯಾವಾಗ ನಟಿಯರು ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೋ ಆಗ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಾರೆ. ಸಿನಿಮಾದಲ್ಲಾದರೆ ಓಕೆ. ಆದರೆ, ಇತ್ತೀಚೆಗೆ ಸಿನಿಮಾದಿಂದಾಚೆಗೂ ನಟಿಯರು ತುಂಬಾ ಬೋಲ್ಡ್​ ಆಗಿ ಕಾಣಿಕೊಳ್ಳಲಯ ಬಯಸುತ್ತಿದ್ದಾರೆ. ಹೀಗೆ ಮಾಡುವಾಗ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುತ್ತಾರೆ.
ಇದೀಗ ಅದೇ ರೀತಿಯ ಎಡವಟ್ಟನ್ನು ಮಲಯಾಳಂ ನಟಿ ಸಾನಿಯಾ ಅಯ್ಯಪ್ಪನ್​ ಮಾಡಿಕೊಂಡಿದ್ದಾರೆ. ಹೊರಗಡೆ ಹಸಿರು ಹಾಸಿನ ಮಧ್ಯೆ ಬಿಕಿನಿಯಲ್ಲಿ ನಿಂತು ಸ್ನಾನ ಮಾಡಿರುವ ಸಾನಿಯಾ, ಅದರ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ವೈರಲ್​ ಆಗಿದ್ದು, ಹೊರಗಡೆ ಸ್ನಾನ ಮಾಡುವುದು ನಾಚಿಕೆ ಮತ್ತು ಕೆರಳಿಸುವಂಥದ್ದಾಗಿ. ಈ ರೀತಿಯ ವಿಡಿಯೋಗಳನ್ನು ಹರಿಬಿಟ್ಟರೆ ಕೀಟಲೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದಿದ್ದಾರೆ. ನೆಟ್ಟಿಗರ ಕಾಮೆಂಟ್​ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ, ನಿಜವಾದ ನಾಚಿಕೆಯ ಬಗ್ಗೆ ನೀವು ಏನಾದರೂ ಹೇಳಬಹುದೇ? ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ಸಾನಿಯಾ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಿತರಾಗಿರುವ ನೆಟ್ಟಿಗರು ಇಂತಹ ಅರೆಬೆತ್ತಲೆ ವೀಡಿಯೊಗಳನ್ನು ಹಂಚಿಕೊಳ್ಳಲು ಅವರಿಗೆ ನಾಚಿಕೆಯಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಸಾನಿಯಾ ಅಭಿನಯದ ಕ್ವೀನ್ ಮತ್ತು ಲೂಸಿಫರ್ ಚಿತ್ರಗಳು ವಿಶೇಷ ಮನ್ನಣೆ ತಂದುಕೊಟ್ಟಿದೆ. ದುಲ್ಕರ್ ಸಲ್ಮಾನ್​ ಜೊತೆ ‘ಸೆಲ್ಯೂಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.(ಏಜೆನ್ಸೀಸ್​)
A post shared by Saniya Iyappan (@_saniya_iyappan_)

ನೋವಿಗೆ ನಗುವೇ ಮುಲಾಮು; ‘ಲವ್ ಮಾಕ್ಟೇಲ್ 2’ಗೆ ಹರಸಿದ ರವಿಚಂದ್ರನ್

ರಾಮ್ ಚರಣ್ ಜತೆ ರಶ್ಮಿಕಾ?; ದಿಶಾ ಬದಲು ನಟಿಸುವ ಸಾಧ್ಯತೆ

ಗ್ರಾಹಕ ವಸ್ತುಗಳು ಶೇ.5 ತುಟ್ಟಿ?: ಕಚ್ಚಾವಸ್ತು, ಉತ್ಪಾದನಾ ವೆಚ್ಚ ಹೆಚ್ಚಳ; ಬೆಲೆ ಏರಿಕೆಗೆ ಕಂಪನಿಗಳ ಚಿಂತನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + 5 =
Remember me
