ಮುಂಬೈ:ಕಳೆದ 12 ತಿಂಗಳಿಂದ ಬಾಲಿವುಡ್​ ಇಂಡಸ್ಟ್ರಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ)ದ ಕಣ್ಗಾವಲಿನಲ್ಲಿದೆ. ಬಾಲಿವುಡ್​ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಮಾದಕ ಜಾಲದ ನಂಟು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ಈ ಎಲ್ಲ ಬೆಳವಣಿಗೆಯಿಂದ ಬಾಲಿವುಡ್​ ಸೆಲೆಬ್ರಿಟಿಗಳಲ್ಲಿ ಭಯ ಶುರುವಾಗಿದೆ. ಯಾವಾಗ? ಯಾರು? ದಾಳಿ ಮಾಡುತ್ತಾರೆಂಬ ಆತಂಕವಿದೆ. ಅದರಲ್ಲೂ ಇತ್ತೀಚೆಗೆ ಮಾದಕ ಜಾಲ ನಂಟು ಬಾಲಿವುಡ್​ಗೂ ಬೆಸೆದುಕೊಂಡಿರುವುದರಿಂದ ಯುವ ಕಲಾವಿದರಲ್ಲಿ ಆತಂಕ ಆವರಿಸಿದೆ. ಶಾರುಖ್​ ಪುತ್ರ ಆರ್ಯನ್​ ಖಾನ್ ಬಂಧನವಾದ ಬಳಿಕ ಬಾಲಿವುಡ್​ ಬೆದರಿ ಹೋಗಿದೆ. ನಿನ್ನೆಯಷ್ಟೇ ಶಾರುಖ್​ ಮನೆ ಮೇಲೂ ದಾಳಿಯಾಗಿದೆ. ಇದರಿಂದಾಗಿ ಬಾಲಿವುಡ್​ ಮಂದಿ ತುಂಬಾ ಹೆದರಿದ್ದಾರೆ. ಸಾರಾ ಅಲಿ ಖಾನ್​ಗೂ ಇದೇ ಭಯ ಕಾಡುತ್ತಿರಬಹುದು. ಹೀಗಂತ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ​
ನಿನ್ನೆಯಷ್ಟೇ (ಅ.22) ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಾ ಅವರು ಟ್ವೀಟ್​ ಮಾಡುವ ಮೂಲಕ ಅಮಿತ್​ ಷಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಆದರೆ, ಇದು ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದೆ.
ಎನ್​ಸಿಬಿ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಯೋಚನೆ ಮಾಡಬೇಡಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದೊಂದು ಹೊಸ ದಾರಿ ಎಂದು ಸಮಾಜವಾದಿ ಪಕ್ಷದ ನಾಯಕ ಅಲಿ ಖಾನ್​ ಮಹ್ಮೂದಬಾದ್​ ವ್ಯಂಗ್ಯವಾಡಿದ್ದಾರೆ. ಹೀಗೇ ಅನೇಕರು ಸಾರಾ ಅಲಿಖಾನ್​ ಅವರನ್ನು ಟ್ರೋಲ್​ ಮಾಡಿದ್ದಾರೆ.(ಏಜೆನ್ಸೀಸ್​)
Is this a new way of marking yourself safe like people do on Facebook whenever there’s a calamity of some sort?pic.twitter.com/HPF0bT5Axw
— Ali Khan Mahmudabad (@Mahmudabad)October 22, 2021

Thank-you naam hat jayega list se.🙏https://t.co/hvmd0EAwxh
— Shadab (@farzeeiqbal)October 22, 2021

ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಶಾಕಿಂಗ್​ ನ್ಯೂಸ್ ಕೊಟ್ಟ​ ಎಡಿಜಿಪಿ ಅಲೋಕ್​ ಕುಮಾರ್..!​

ಶಾಲಾಧ್ಯಕ್ಷನನ್ನು ನಂಬಿ ಕಾರಿನಲ್ಲಿ ಹೋದ ಶಿಕ್ಷಕಿಗೆ ಕಾದಿತ್ತು ಶಾಕ್​! ಮೊದಲೇ ಹಳ್ಳ ತೋಡಿದ್ದ ಕಿರಾತಕ

ಯುವತಿಗೆ ಲೈಂಗಿಕ ಕಿರುಕುಳ: ವಕೀಲ ಕೆ.ಎಸ್​.ಎನ್​. ರಾಜೇಶ್​ ಸನ್ನದು ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + four =
Remember me
