ನವದೆಹಲಿ:ಬ್ಯಾಟಿಂಗ್​ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಮಗಳು ಸಾರಾ ತೆಂಡೂಲ್ಕರ್​ ಮತ್ತು ಟೀಮ್​​ ಇಂಡಿಯಾ ಹಾಗೂ ಕೋಲ್ಕತ ತಂಡದ ಆಟಗಾರ ಶುಭ್​ಮನ್​ ಗಿಲ್​ ನಡುವೆ ಲವ್​ ಇದೆ ಎಂಬ ವಿಚಾರ ಬಹಳ ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಕೆಲವೊಮ್ಮೆ ಒಟ್ಟಿಗೆ ಸಹ ಕಾಣಿಸಿಕೊಂಡಿದ್ದಾರೆ.
ಅಚ್ಚರಿಯೆಂದರೆ ಗೂಗಲ್​ನಲ್ಲಿ ಶುಭ್​ಮನ್​ ಗಿಲ್​ ಪತ್ನಿಯ ಹೆಸರು ಸರ್ಚ್​ ಮಾಡಿದ್ರೆ ಸಾರಾ ತೆಂಡೂಲ್ಕರ್​ ಹೆಸರು ಕಂಪ್ಯೂಟರ್​ ಅಥವಾ ಮೊಬೈಲ್​ ಪರದೆಯ ಮೇಲೆ ತೋರುತ್ತದೆ. ಶುಭ್​ಮನ್​ ಮತ್ತು ಸಾರಾ ಹೆಸರು ಹೆಚ್ಚಾಗಿ ಚರ್ಚೆಯಾಗುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿ, ಡೇಟಿಂಗ್​ ಕೂಡ ನಡೆಸುತ್ತಿದ್ದಾರೆಂಬ ಸುದ್ದಿಯಾಗಿದೆ. ಶುಭ್​ಮನ್​, ಸಚಿನ್​ ಅಳಿಯನಾಗ್ತಾರೆ ಎಂಬ ಚರ್ಚೆಯು ನಡೆದಿದೆ.

ಹಿಂದೆ ಒಮ್ಮೆ ಸಾರಾ, ಶುಭ್​ಮನ್​ ಫೀಲ್ಡಿಂಗ್​ ಮಾಡುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಹೃದಯದ ಎಮೋಜಿ ಹಾಕಿದ್ದರು. ಅದರ ಬೆನ್ನಲ್ಲೇ ಪೋಸ್ಟ್​ ಡಿಲೀಟ್​ ಮಾಡಿದ್ದರೂ ಸಹ ಸ್ಕ್ರೀನ್​ಶಾಟ್​ ಹರಿದಾಡಿತ್ತು. ಇದಕ್ಕೂ ಮುಂಚೆ ಶುಭ್​ಮನ್ ಹೊಸ​ ರೇಂಜ್​ ರೋವರ್​ ಕಾರು ಖರೀದಿಸಿದ್ದಾಗ ಸಾರಾ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಇರುವು ಖಚಿತವಾಗಿತ್ತು.
ಆದರೆ, ಇದೀಗ ಇಬ್ಬರ ಲವ್​ ಬ್ರೇಕಪ್​ ಆಗಿದೆ ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತಹ ಫೋಟೋವೊಂದನ್ನು ಶುಭ್​ಮನ್​ ಗಿಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಶುಭ್​ಮನ್​ ಟೀಶರ್ಟ್​ ಧರಿಸಿದ್ದು, ಅದರ ಹಿಂದೆ “ದೇವತೆಗಳೊಂದಿಗೆ ಪ್ರೀತಿಯಲ್ಲಿ ಬೀಳಬೇಡಿ” ಎಂದು ಬರೆಯಲಾಗಿದೆ.

A post shared by Ꮪhubman Gill (@shubmangill)

ಶುಭ್​ಮನ್​ ಈ ಫೋಟೋ ಶೇರ್​ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇಬ್ಬರ ನಡುವೆ ಲವ್​ ಬ್ರೇಕಪ್​ ಆಗಿದೆಯೇ ಎಂದು ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಸಾರಾ ತೆಂಡೂಲ್ಕರ್​ ನಿಮಗೆ ಕೈ ಕೊಟ್ರಾ ಸಹೋದರಾ? ಎಂದು ಪ್ರಶ್ನಿಸಿದ್ದಾರೆ. ಸಾಕಷ್ಟು ಪ್ರಶ್ನೆಗಳು ಹರಿದುಬಂದಿದ್ದು, ಶುಭ್​ಮನ್​ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಶುಭ್​ಮನ್​ ಪ್ರೇಮ ವೈಫಲ್ಯದ ನೋವಿನಲ್ಲಿರಬೇಕೆಂದು ನೆಟ್ಟಿಗರು ಭಾವಿಸಿದ್ದಾರೆ. ಇದಕ್ಕೆಲ್ಲ ಶುಭ್​ಮನ್​ ಸ್ಪಷ್ಟನೆ ನೀಡುತ್ತಾರಾ ಎಂದು ನೆಟ್ಟಿಗರು ಕಾದು ಕುಳಿತಿದ್ದಾರೆ.(ಏಜೆನ್ಸೀಸ್​)
ಸಚಿನ್​ ಮಗಳನ್ನು ಮದುವೆಯಾದ್ರಾ ಶುಭ್​ಮನ್​ ಗಿಲ್​?: ಹೌದು ಎನ್ನುತ್ತಿದೆ ಗೂಗಲ್​..!

ಜನರಿಗೆ ಚಿರು-ಪುನೀತ್​ ಸಾವು ಕಲಿಸಿದ ಪಾಠವೇನು? ಮೇಘನಾ ರಾಜ್​ ಹೇಳಿದ್ದು ಹೀಗೆ…

ರಾಜ್​ ಕುಟುಂಬ ರಾಜಕೀಯದಿಂದ ದೂರ ಉಳಿದಿದ್ದೇಕೆ? ರಾಜ್​ ನಿರ್ಧಾರಕ್ಕೆ ಕಾರಣವಾದ 1978ರ ಘಟನೆ ಇದು!

ಪುನೀತ್​ ಸಾವಲ್ಲೂ ಲಾಭ ಹುಡುಕುವ ‘ರಣಹದ್ದುಗಳು’: ಜಾಹೀರಾತಿನ ವಿರುದ್ಧ ಭಾರಿ ಆಕ್ರೋಶ

‘ಅಪ್ಪು’ ಅಗಲಿಕೆ ನೋವಿನಲ್ಲೇ ನ.10ರಂದು ಮಗಳ ಮದುವೆ… ಭಾವುಕರಾದ ಕುಮಾರ್ ಬಂಗಾರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
