ನಲ್ಗೊಂಡ:ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂಬಿಸಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಕಿಲಾಡಿ ಲೇಡಿಯನ್ನು ನಲ್ಗೊಂಡ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಆರೋಪಿಯನ್ನು ತೆಲಂಗಾಣದ ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಪಂತಂಗಿ ಮಹೇಶ್ವರಿ ಅಲಿಯಾಸ್​ ಧರಣಿ ರೆಡ್ಡಿ ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿರುವ ಮಹೇಶ್ವರಿ, ಅನೇಕ ಯುವಕರಿಗೆ ಮದುವೆ ಹೆಸರಿನಲ್ಲಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ.
ಇತ್ತೀಗೆಚೆ ಈಕೆ ಹೈದರಾಬಾದ್​​ನ ಕೊಂಪಲ್ಲಿ ಮೂಲದ ವೆಂಕಟೇಶ್​ ಎಂಬಾತನನ್ನು ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಆತನೊಂದಿಗೆ ಅಶ್ಲೀಲ ವಿಡಿಯೋ ಚಾಟ್​ ಮಾಡಿದ್ದ ಈಕೆ ಅದನ್ನು ರೆಕಾರ್ಡ್​ ಮಾಡಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟು, ಹಣವನ್ನು ಪಡೆದುಕೊಂಡಿದ್ದಳು. ಇನ್ನೊಂದೆಡೆ ಯುವಕರಿಗೆ ಮಾತ್ರವಲ್ಲದೆ ಅನೇಕ ಯುವತಿಯರಿಗೆ ಈಕೆ ವಂಚಿಸಿದ್ದಾಳೆ. ಸೂಕ್ತ ವರನನ್ನು ಹುಡುಕಿಕೊಡುತ್ತೇನೆಂದು ಹೇಳಿ, ಅವರಿಂದ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ.
ಫೇಸ್​ಬುಕ್​ ಪ್ರೊಫೈಲ್​ನಲ್ಲಿ ಫೋಟೋ ಬದಲಾಯಿಸಿ ಕಿಲಾಡಿ ಲೇಡಿ ವಂಚನೆ ಮಾಡುತ್ತಿದ್ದಳು. ಇತ್ತೀಚೆಗೆ ಈಕೆ 11.70 ಲಕ್ಷ ರೂ. ಅನ್ನು ಪಡೆದುಕೊಂಡಿದ್ದಳು. ಇವಳಿಂದ ಡಜನ್​ಗೂ ಅಧಿಕ ಮಂದಿ ಮೋಸ ಹೋಗಿದ್ದಾರೆ.
ಮಹೇಶ್ವರಿ ನಲ್ಗೊಂಡ ಪೊಲೀಸ್​ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಆಕೆಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈಕೆಯ ವಿರುದ್ಧ ಕುಕಟಪಲ್ಲಿ, ಘಾಟ್ಕೇಸರ್​, ಖಮ್ಮಮ್​, ಸತ್ತುಪಲ್ಲಿ ಮತ್ತು ವೆನ್ಸುನ್​ ಸೇರಿದಂತೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿವೆ. ಇದೀಗ ನಲ್ಗೊಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಶಿಕ್ಷೆ ಅನುಭವಿಸುತ್ತಿದ್ದಾಳೆ.(ಏಜೆನ್ಸೀಸ್​)
ಚಾಮರಾಜನಗರದಲ್ಲಿ ಆಕ್ಸಿಜನ್​ ಸಿಗದೆ ಕರೊನಾ ರೋಗಿಗಳ ಸಾವು: ಮೈಸೂರು ಡಿಸಿ ವಿರುದ್ಧ ಗಂಭೀರ ಆರೋಪ
ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇
ಬದಲಾವಣೆಗೆ ಹೊಂದಿಕೊಳ್ಳೋನೇ ಮಹಾಶೂರ! ನಿಮ್ಮ ಬ್ರ್ಯಾಂಡ್ ನೀವೇ ಸೃಷ್ಟಿಸಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 1 =
Remember me
