ನವದೆಹಲಿ:ಬಾಲಕನೊಬ್ಬ ಮ್ಯಾಜಿಕ್​ ಟ್ರಿಕ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಜೂನ್​ 9ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಇದುವರೆಗೂ 128 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಸಾಹಿಲ್​ ಆಜಾಮ್​ ಎಂಬುವರು ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಯಾವುದೇ ಅಡಿಬರಹವನ್ನು ನೀಡಿಲ್ಲ. ವಿಡಿಯೋ ಮೇಲೆ ಮಾತ್ರ “ಪ್ರತಿಭಾವಂತ ವಿದ್ಯಾರ್ಥಿ” ಎಂದು ಬರೆಯಲಾಗಿದೆ.
ವಿಡಿಯೋದಲ್ಲಿ ಏನಿದೆ?ಶಾಲಾ ಕೊಠಡಿ ಒಳಗೆ ಬಾಲಕನ ಸುತ್ತ ಇರುವ ಆತನ ಸ್ನೇಹಿತರು ತುಂಬಾ ಉತ್ಸಾಹದಿಂದ ಮ್ಯಾಜಿಕ್​ ಟ್ರಿಕ್​ ನೋಡುತ್ತಿದ್ದಾರೆ. ಎರಡು ಕೈಗಳಲ್ಲಿ ಒಂದೊಂದು ಕಲ್ಲು ಹಿಡಿದಿರುವ ಬಾಲಕ ಯಾರಿಗೂ ಗೊತ್ತಾಗದಂತೆ ಎರಡು ಕೈಯಲ್ಲಿ ಇರುವ ಕಲ್ಲನ್ನು ಒಂದೇ ಕೈಗೆ ವರ್ಗಾಯಿಸುತ್ತಾನೆ.
ವಿಡಿಯೋ ನೋಡಿದ ನೆಟ್ಟಿಗರ ಬಾಲಕನ ಮ್ಯಾಜಿಕ್​ ಕೌಶಲ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದು ವೇಗದ ಮ್ಯಾಜಿಕ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಆತನ ಕೂದಲು ನೋಡಿದರೆ, ಈತ ಭಾರತದ ಜಸ್ಟಿನ್​ ಬೈಬರ್​ ರೀತಿ ಕಾಣುತ್ತಿದ್ದಾನೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದು, ನಾನು ಈ ಮ್ಯಾಜಿಕ್​ ಟ್ರಿಕ್​ ಅನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಆ ಪುಟ್ಟ ಜಾದೂಗಾರನಿಗೆ ನನ್ನ ನಮಸ್ಕಾರಗಳು ಎಂದಿದ್ದಾರೆ.
ಕೇವಲ 128 ಮಿಲಿಯನ್​ ವೀಕ್ಷಣೆ ಮಾತ್ರವಲ್ಲ, ಶಿಖರ್​ ಧವನ್​ ಸೇರಿದಂತೆ 6 ಮಿಲಿಯನ್​ಗೂ ಅಧಿಕ ಮಂದಿ ವಿಡಿಯೋಗೆ ಲೈಕ್ಸ್​ ಮಾಡಿದ್ದಾರೆ. ಈ ಮ್ಯಾಜಿಕ್​ ಟ್ರಿಕ್​ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ವಿಡಿಯೋ ಮಾತ್ರ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಬಾಲಕನ ಮ್ಯಾಜಿಕ್​ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮಾಡುವುದನ್ನು ಮರೆಯಬೇಡಿ.(ಏಜೆನ್ಸೀಸ್​)

A post shared by Sahil Saifi (@sahil.aazam)

PHOTOS| ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ನಟಿ ಮಾಳವಿಕಾರ ಮಾದಕ ಫೋಟೋಗಳು!

ಕೂಡಲೇ ದೇಶದ ಜನರ ಬಳಿ ಕ್ಷಮೆ ಕೇಳಿ, ಈವರೆಗೂ ಏನಾಗಿದೆ ಅದಕ್ಕೆ ನೀವೇ ಹೊಣೆ: ನೂಪುರ್​ಗೆ ಸುಪ್ರೀಂ ತರಾಟೆ

ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
