ನವದೆಹಲಿ:ಒಂದು ಜೀವಕ್ಕೆ ಮತ್ತೊಂದು ಜೀವವೇ ಆಸರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮಾನವ ಒಂಟಿಯಾಗಿ ಬಾಳಲಾರ. ಹೀಗಾಗಿ ಆತನಿಂಗೊಂದು ಸಂಗಾತಿ ಬೇಕೇ ಬೇಕು. ಅದಕ್ಕಾಗಿಯೇ ಮದುವೆ ಎಂಬ ಸಂಪರ್ಕಕೊಂಡಿ ಹುಟ್ಟಿಕೊಂಡಿತೇನೋ?
ಹಿಂದೆ ಎರಡನೇ ಮದುವೆ ಅಂದರೆ ಒಂದು ರೀತಿಯಲ್ಲಿ ನೋಡುತ್ತಿದ್ದರು. ಇದೀಗ ಕಾಲ ಬದಲಾಗಿದೆ. ವಯಸ್ಸಿನ ಅಂತರವಿಲ್ಲದೆ, ಕುಟುಂಬವೇ ಮುಂದೆ ನಿಂತು ಮದುವೆ ಮಾಡುವ ಕಾಲ ಇದಾಗಿದೆ. ಇದೇ ರೀತಿಯಲ್ಲಿ ಮಗಳೊಬ್ಬಳು ತನ್ನ ತಂದೆಗೆ ಮರು ಮದುವೆ ಮಾಡಿದ್ದು, ಆ ಬಗ್ಗೆ ಆಕೆ ಮಾಡಿರುವ ಕಾಮೆಂಟ್​ ಇದೀಗ ಭಾರಿ ವೈರಲ್​ ಆಗಿದೆ.
71 ವಯಸ್ಸಿನ ಹಿರಿಯ ಜೀವಕ್ಕೆ ಆಸರೆಯಾಗಿದ್ದ ಪತ್ನಿ ತೀರಿ ಹೋಗಿ 5 ವರ್ಷಗಳು ಕಳೆದಿವೆ. ಒಂಟಿಯಾಗಿದ್ದ ಜೀವಕ್ಕೆ ಮಗಳೇ ಆಸೆರೆಯಾಗಿದ್ದಳು. ಆದರೆ, ಕೆಲಸದ ಹಿನ್ನೆಲೆಯಲ್ಲಿ ತಂದೆ ಆರೈಕೆ ಸಾದ್ಯವಾಗುತ್ತಿರಲಿಲ್ಲ. ಹೀಗಾಗಿ ತಂದೆಗೆ ಮರು ಮದುವೆ ಮಾಡಲು ಮಗಳು ಆದಿತಿ ನಿರ್ಧರಿಸಿದಳು. ಆರಂಭದಲ್ಲಿ ಮರು ಮದುವೆ ಬೇಡವೆನ್ನುತ್ತಿದ್ದ ತಂದೆ ಕೊನೆಯಲ್ಲಿ ಒಪ್ಪಿಕೊಂಡನು. ಕೊನೆಗೆ ವಿಧವೆಯೊಬ್ಬಳನು ಹುಡುಕಿ ತನ್ನ ತಂದೆಗೆ ಆದಿತಿ ಇದೇ ತಿಂಗಳ 27ರಂದು ಮಡುವೆ ಮಾಡಿದಳು.
ಇದರ ಬೆನ್ನಲ್ಲೇ ತಂದೆಯ ಮದುವೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿರುವ ಆದಿತಿ, ಮರು ಮದುವೆ ಕುರಿತು ನಮ್ಮ ದೇಶದಲ್ಲಿ ನಿರ್ಧಿಷ್ಟ ಕಾನೂನುಗಳಿಲ್ಲ. ನನ್ನ ತಂದೆಯೊಂದಿಗೆ ಕೆಲವು ಮಹಿಳೆಯರು ಮಲಗಿದ್ದನ್ನು ನಾನು ನೋಡಿದೆ. ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದರ ಬಗ್ಗೆ ತಿಳಿದಿದ್ದೆ. ಕೊನೆಗೂ ನನ್ನ ತಂದೆ ಮರು ಮದುವೆ ಆಗಿದ್ದಾರೆ. ಸಮಾಜ ಅವರನ್ನು ಆಶೀರ್ವದಿಸುತ್ತದೋ? ಇಲ್ಲವೋ? ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ತಂದೆ ಒಂಟಿಯಾಗಿ ಇರುವುದು ನನಗೆ ಇಷ್ಟವಿಲ್ಲ ಎಂದು ಆದಿತಿ ಬರೆದುಕೊಂಡಿದ್ದಾಳೆ.
ಆದಿತಿ ಪೋಸ್ಟ್​ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ನೆಟ್ಟಿಗರು ಶುಭ ಕೋರಿದ್ದಾರೆ. ನೀವು ತೆಗೆದುಕೊಂಡು ನಿರ್ಧಾರ ಉತ್ತಮವಾದದ್ದು ಎಂದು ಆದಿತಿಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.(ಏಜೆನ್ಸೀಸ್​)
ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ: 6 ತಿಂಗಳಿಂದ ಮುಚ್ಚಿಟ್ಟಿದ್ದ ರಹಸ್ಯ ಬಯಲು!
ತಂಗಿಯ ಜತೆ ಮಂಚದಲ್ಲಿ ಚಕ್ಕಂದ- ನಾಲ್ಕನೇ ಗಂಡನಿಂದ ‘ಡ್ರಗ್ಸ್‌ ರಾಣಿ’ಯ ದುರಂತ ಅಂತ್ಯ!
ಪ್ರಖ್ಯಾತ ಆ್ಯಂಕರ್​ ಪತಿಗ್ಯಾಕೆ ಬಂತು ಈ ದುರ್ಬುದ್ಧಿ? ನಂಬಿದ ಮಹಿಳೆಗೆ ಈ ರೀತಿ ಮಾಡಿದ್ದು ಸರಿನಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + six =
Remember me
