ನವದೆಹಲಿ:ಮಹಿಳಾ ಹಾಸ್ಟೆಲ್​ನ ಸೆಕ್ಯುರಿಟಿ ಗಾರ್ಡ್​ ವಿದ್ಯಾರ್ಥಿನಿಯರನ್ನು ಥಳಿಸುವ ಮತ್ತು ಕಿರುಕುಳ ನೀಡುತ್ತಿರುವ ಆಘಾತಕಾರಿ ದೃಶ್ಯ ಹಾಸ್ಟೆಲ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಕರೋಲ್​ ಬಾಘ್​ನಲ್ಲಿ ನಡೆದಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಧ್ಯ ಪ್ರವೇಶಿಸಿರುವ ದೆಹಲಿ ಮಹಿಳಾ ಆಯೋಗ ಆದಷ್ಟು ಬೇಗ ವರದಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ವಿವರಣೆಗೆ ಬರುವುದಾದರೆ, ದೆಹಲಿಯಲ್ಲಿರುವ ಗೋಲ್ಡ್ಸ್​ ವಿಲ್ಲಾ ಪೇಯಿಂಗ್​ ಗೆಸ್ಟ್​ ಹಾಸ್ಟೆಲ್​ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ, ವಿದ್ಯಾರ್ಥಿನಿಯರ ಗುಂಪು ನಡೆದುಕೊಂಡು ಬರುತ್ತಿರುತ್ತಾರೆ. ಕೆಲವೇ ಕ್ಷಣಗಳಲ್ಲಿ ಭಯ ಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಇದೇ ಸಮಯದಲ್ಲಿ ಸೆಕ್ಯುರಿಟಿ ಗಾರ್ಡ್​ ವಿದ್ಯಾರ್ಥಿನಿಯೊಬ್ಬಳನ್ನು ಹಿಂದಿನಿಂದ ತಬ್ಬಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ದೃಶ್ಯದಲ್ಲಿದೆ. ವಿದ್ಯಾರ್ಥಿನಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಆತ ಬಿಡದೇ ವಿದ್ಯಾರ್ಥಿನಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇದೇ ಸಮಯದಲ್ಲಿ ಈ ಘಟನೆ ಬಗ್ಗೆ ದೂರು ನೀಡಿದರೂ ಹಾಸ್ಟೆಲ್​ನ ಮಾಲೀಕ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೆಕ್ಯುರಿಟಿ ನಡೆದುಕೊಂಡಿರುವ ರೀತಿಯನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ಸದ್ಯ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ದೆಹಲಿ ಮಹಿಳಾ ಆಯೋಗದ ಗಮನಕ್ಕೂ ಬಂದಿದ್ದು, ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.(ಏಜೆನ್ಸೀಸ್​)
करोल बाग में चल रहे एक PG hostel में सिक्योरिटी गार्ड ने नशे की हालत में लड़कियों के साथ छेड़खानी और मारपीट की. हमें ट्विटर के जरिए शिकायत मिली, मामले की गंभीरता को देखते हुए पुलिस को नोटिस जारी किया है. मामले में कड़ी कार्यवाही सुनिश्चित करेंगे।pic.twitter.com/6smwjfqEJB
— Swati Maliwal (@SwatiJaiHind)August 16, 2022

ಕಾಬೂಲ್​ ಮದರಸಾ ಒಳಗೆ ಭಾರಿ ಸ್ಫೋಟ: 20 ಮಂದಿ ದುರ್ಮರಣ, 40ಕ್ಕೂ ಹೆಚ್ಚ ಜನರ ಸ್ಥಿತಿ ಗಂಭೀರ

ಪತ್ನಿಯನ್ನು ಮತ್ತೊಬ್ಬಳಿಗೆ ಹೋಲಿಸ್ತೀರಾ, ನಾನುಂದುಕೊಂಡಂತೆ ನೀನಿಲ್ಲ ಅಂತೀರಾ? ಹೈಕೋರ್ಟ್​ ನೀಡಿದೆ ಈ ಮಹತ್ವದ ತೀರ್ಪು

ಥಾಯ್ಲೆಂಡ್​ ವಿಮಾನದಲ್ಲಾದ ಅತ್ಯಂತ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ ಮಲಯಾಳಿ ಬ್ಯೂಟಿ ನಜ್ರಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 5 =
Remember me
