ನವದೆಹಲಿ:ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​ ಮೇಲಿರುವ ಸೆಕ್ಸ್ ಎಂಬ ಪದವನ್ನು ಬದಲಾಯಿಸುವಂತೆ​ ದೆಹಲಿ ಆರ್​ಟಿಒಗೆ ದೆಹಲಿ ಮಹಿಳಾ ಆಯೋಗ ನೋಟಿಸ್​ ಹೊರಡಿಸಿದೆ. ಇತ್ತೀಚೆಗಷ್ಟೇ ಸ್ಕೂಟಿಯನ್ನು ಖರೀದಿಸಿದ ಯುವತಿಯೊಬ್ಬಳು ತನ್ನ ವಾಹನದ ನೋಂದಣಿ ಸಂಖ್ಯೆಯ ಮೇಲೆ ‘ಸೆಕ್ಸ್​’ ಎಂಬ ಪದವನ್ನು ಹೊಂದಿರುವ ನಂಬರ್​ ಹಂಚಿಕೆ ಸರಣಿಯನ್ನು ನೋಡಿ ಮಹಿಳಾ ಆಯೋಗದ ಗಮನಕ್ಕೆ ತಂದಿದ್ದಳು.
ಈ ನಂಬರ್​ ಸರಣಿಯನ್ನು ಹಂಚಿಕೆ ಮಾಡಿದ್ದರಿಂದ ನಾನು ತೀವ್ರ ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇನೆ. ಪ್ರತಿದಿನ ಅನೇಕರು ನನ್ನನ್ನು ರೇಗಿಸುತ್ತಿದ್ದಾರೆ. ವಾಹನವಿದ್ದರೂ ಎಲ್ಲಿಯೂ ಓಡಾಡದಂತಹ ಪರಿಸ್ಥಿತಿ ಎದುರಿಸುತ್ತಿದ್ದೇನೆ. ನಂಬರ್​ ಪ್ಲೇಟ್​ ನೋಡಿದವರೆಲ್ಲ ನನ್ನನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಆರ್​ಟಿಒ ಮಾಡಿರುವ ಎಡವಟ್ಟನಿಂದ ಇದೀಗ ನಾನು ಮಾನಸಿಕ ಸಂಕಟ ಅನುಭವಿಸುವಂತಾಗಿದೆ ಎಂದು ಮಹಿಳಾ ಆಯೋಗದ ಮುಂದೆ ಯುವತಿ ನೋವು ತೋಡಿಕೊಂಡಿದ್ದಾಳೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗ ದೆಹಲಿ ಸಾರಿಗೆ ಇಲಾಖೆಗೆ ನೋಟಿಸ್​ ಹೊರಡಿಸಿದ್ದು, ತಕ್ಷಣ ನಂಬರ್​ ಸರಣಿಯನ್ನು ಬದಲಾಯಿಸುವಂತೆ ಹೇಳಿದೆ.
ಈ ಬಗ್ಗೆ ಮಾತನಾಡಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​​, ‘ಸೆಕ್ಸ್​’ ಎಂಬ ಪದವನ್ನು ಹೊಂದಿರುವ ನಂಬರ್​ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ಸಾರಿಗೆ ಇಲಾಖೆಯನ್ನು ಕೇಳಿದ್ದೇನೆ. ಯುವತಿ ವಿಚಾರದಲ್ಲಿ ಜನರು ತುಂಬಾ ಕ್ಷುಲ್ಲಕವಾಗಿರುವುದು ತುಂಬಾ ದುರದೃಷ್ಟಕರ ಸಂಗತಿಯಾಗಿದೆ. ಯುವತಿ ತುಂಬಾ ಕಿರುಕುಳವನ್ನು ಎದುರಿಸುತ್ತಿದ್ದಾಳೆ. ನಾಲ್ಕು ದಿನಗಳ ಒಳಗೆ ಈ ಸಮಸ್ಯೆಯನ್ನು ಬಗೆಹರಿಸಲು ಆರ್​ಟಿಒಗೆ ಸಮಯ ನೀಡಿದ್ದೇನೆಂದು ಹೇಳಿದ್ದಾರೆ.
ದೆಹಲಿಗೆ ಡಿಎಲ್ ನಂತರ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ, ನಂತರ ವಾಹನದ ಪ್ರಕಾರಕ್ಕೆ ಒಂದು ಅಕ್ಷರ, ನಂತರ ಇತ್ತೀಚಿನ ಸರಣಿಯನ್ನು ಸೂಚಿಸುವ 2 ಅಕ್ಷರಗಳು, ನಂತರ ಆ ಸರಣಿಯಲ್ಲಿ 4 ಅಂಕಿಗಳ ಅನನ್ಯ ಸಂಖ್ಯೆ. ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ‘S’ ಅಕ್ಷರದಿಂದ ಸೂಚಿಸಲಾಗುತ್ತದೆ.‘
ದೆಹಲಿಯ ನಂಬರ್ ಪ್ಲೇಟ್‌ಗಳು ಈ ಕೆಳಗಿನ ಸಂಪ್ರದಾಯವನ್ನು ಅನುಸರಿಸುತ್ತವೆದೆಹಲಿಗೆ DL ನಂತರ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ಇರುತ್ತದೆ. ನಂತರ ವಾಹನದ ಪ್ರಕಾರವನ್ನು ಅನುಸರಿಸಿ ಒಂದು ಪದ ಇರುತ್ತದೆ. ಬಳಿಕ ಇತ್ತೀಚಿನ ಸರಣಿಯನ್ನು ಸೂಚಿಸುವ 2 ಅಕ್ಷರಗಳನ್ನು ನೀಡಲಾಗುತ್ತದೆ. ಆ ಸರಣಿಯಲ್ಲಿ 4 ಅಂಕಿಗಳ ಅನನ್ಯ ಸಂಖ್ಯೆಯು ಅನುಸರಿಸುತ್ತದೆ. ಅಂದಹಾಗೆ ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ‘S’ ಅಕ್ಷರದಿಂದ ಸೂಚಿಸಲಾಗುತ್ತದೆ. ಆದ್ದರಿಂದ, ಒಂದು ವಿಶಿಷ್ಟವಾದ ನಂಬರ್ ಪ್ಲೇಟ್ ಹೀಗಿರುತ್ತದೆ. DL 2 C AD 1234. ದೆಹಲಿಗೆ DL, 2 ಪೂರ್ವ ಜಿಲ್ಲೆಗೆ, C ಫಾರ್ ಕಾರ್ ಅಥವಾ ದ್ವಿಚಕ್ರ ವಾಹನಗಳಿಗೆ S, ಸಂಖ್ಯೆ ನಂತರದ ಸಂಖ್ಯೆಯ ಸರಣಿಗೆ AD ಎಂದು ಸೂಚಿಸಲಾಗುತ್ತದೆ. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ‘ಎಸ್’ ಅಕ್ಷರದ ನಂತರ ‘ಇಎಕ್ಸ್’ ಅಕ್ಷರವಿದೆ.(ಏಜೆನ್ಸೀಸ್​)
ಅಮೇಠಿಯಲ್ಲಿ ಉತ್ಪಾದನೆಯಾಗಲಿದೆ ಎಕೆ-203 ಗನ್: ಮೂರು ಫುಟ್ಬಾಲ್ ಮೈದಾನದಷ್ಟು ದೂರ ಸಿಡಿಯುವ ಸಾಮರ್ಥ್ಯ…
ಮೂರು ದಿನ ಹೊಳೆಯಲಿವೆ ಗುರು, ಶುಕ್ರ, ಶನಿ..
ಮಕ್ಕಳಿಗೂ ಒಮಿಕ್ರಾನ್ ಕಂಟಕ: ಹತ್ತು ದಿನದಲ್ಲಿ ರಾಜ್ಯದ 576 ಚಿಣ್ಣರಿಗೆ ಕೋವಿಡ್ ಸೋಂಕು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 3 =
Remember me
