ಚೆನ್ನೈ:ತಮ್ಮ ಮಗನ ಜತೆ ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರನನ್ನು ಹೋಲಿಕೆ ಮಾಡಿ ಟ್ರೋಲ್​ ಮಾಡುತ್ತಿರುವ ಬಗ್ಗೆ ನಟ ಮಾಧವನ್​ ಪ್ರತಿಕ್ರಿಯಿಸಿದ್ದಾರೆ. ಶಾರುಖ್​ ಕೂಡ ಓರ್ವ ತಂದೆಯಾಗಿರುವುದರಿಂದ ಅವರ ಮಗನ ಬಗ್ಗೆ ಮಾತನಾಡುವಾಗ ಅವರ ಮನಸ್ಸಿಗೂ ನೋವಾಗುತ್ತದೆ ಎಂದಿದ್ದಾರೆ.
ಸ್ವಿಮ್ಮಿಂಗ್​ನಲ್ಲಿ ಆರ್​. ಮಾಧವನ್​ ಪುತ್ರ ವೇದಾಂತ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇತ್ತೀಚೆಗೆ​ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಧವನ್​, ಪಾಲಕರಾಗಿ ತಾವು ಅನುಸರಿಸುತ್ತಿರುವ ತಂತ್ರಗಳ ಬಗ್ಗೆ ಹೇಳಿಕೊಂಡರು. ಅಲ್ಲದೆ, ಐಷಾರಾಮಿ ಜೀವನ ಹೊರತಾಗಿ ತಮ್ಮ ಮಗನನ್ನು ಹೇಗೆ ಬೆಳೆಸುತ್ತಿದ್ದಾರೆಂದು ವಿವರಿಸಿದರು.
ನಟ ಕಮ್ ನಿರ್ದೇಶಕರಾಗಿರುವ ಮಾಧವನ್​ ತಮ್ಮ ಮಗನನ್ನು ಜೀವನದಲ್ಲಿ ಬೆಳೆಸಿರುವ ರೀತಿ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶಾರುಖ್ ಖಾನ್ ಮಗ ಆರ್ಯನ್‌ ಬೆಳವಣಿಗೆಯನ್ನು ಹೋಲಿಸಿ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಈ ಬಗ್ಗೆ ಮಾಧವನ್​ ಅವರನ್ನು ಪ್ರಶ್ನಿಸಲಾಯಿತು.
ನಾನು ಇದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇಲ್ಲಿ ನಾವು ತಂದೆಯ (ಶಾರುಖ್) ಬಗ್ಗೆ ಮಾತನಾಡುತ್ತಿದ್ದೇವೆ. ಅವರ ಮಗ ಅಥವಾ ಮಗು ಏನು ಅನುಭವಿಸುತ್ತಾನೆಯೋ ಅದು ತಂದೆಗೆ ತುಂಬಾ ನೋವಿನಿಂದ ಕೂಡಿರುತ್ತದೆ. ಯಾರನ್ನಾದರೂ ನೋಯಿಸುತ್ತಿದ್ದೀರಿ ಮತ್ತು ಎಷ್ಟು ನೋಯಿಸುತ್ತಿರುವಿರಿ ಎಂಬುದನ್ನು ಅರಿತುಕೊಳ್ಳದೆಯೇ ಅದನ್ನು ಸುದ್ದಿ ಅಥವಾ ಮೀಮ್ಸ್​ ಮಾಡಿಬಿಡುತ್ತೇವೆ. ಆದರೆ, ಆ ನೋವಿನ ಬೆಂಕಿಗೆ ಇನ್ನಷ್ಟು ತಪ್ಪ ಸುರಿಯಲು ನನಗೆ ಇಷ್ಟವಿಲ್ಲ. ಪ್ರತಿಯೊಬ್ಬ ತಂದೆಯು ತಮ್ಮ ಮಗುವಿನ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಮಗ ಅಥವಾ ಮಗುವಿನ ಸಂಕಟವನ್ನು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾಧವನ್​ ಹೇಳಿದ್ದಾರೆ.(ಏಜೆನ್ಸೀಸ್​)
PHOTOS| ಎಲ್ಲ ಓಕೆ ದೇವಸ್ಥಾನದಲ್ಲಿ ಇದೆಲ್ಲಾ ಯಾಕೆ? ದೀಪ್ತಿ ಸುನೈನಾ ಅವತಾರಕ್ಕೆ ನೆಟ್ಟಿಗರ ಆಕ್ರೋಶ!

ಅಯೋಧ್ಯಾ ಘಾಟ್​​ನಲ್ಲಿ ಪತ್ನಿಗೆ ಮುತ್ತಿಟ್ಟು ಕೆಟ್ಟ ಪತಿ! ಜನರ ಗುಂಪಿಂದ ಹಿಗ್ಗಾಮುಗ್ಗಾ ಥಳಿತ, ವಿಡಿಯೋ ವೈರಲ್​

ಕ್ಯಾಮೆರಾ ಕಂಡೊಡನೆ ಕಾಲ್ಕಿತ್ತ ಶಾರುಖ್​ ಪುತ್ರಿ: ಸಿಕ್ಕಾಪಟ್ಟೆ ಟ್ರೋಲ್​ ಆಯ್ತು ಸುಹಾನಾಳ​ ಹಾಟ್ ಲುಕ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
