ಶಹಜಹಾನಪುರ:ರೈಲು ಬರುವ ಸಮಯದಲ್ಲಿ ಕ್ರಾಸಿಂಗ್​ ಗೇಟ್​ ಮುಚ್ಚದ ಪರಿಣಾಮ ಕೆಲ ವಾಹನಗಳಿಗೆ ರೈಲು ಡಿಕ್ಕಿಯಾಗಿ ಐದು ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ (ಗ್ರಾಮಾಂತರ) ಸಂಜೀವ್​ ಬಜ್ಪಾಯ್​, ಲಖನೌ-ಚಂಡೀಗಢದ ಸೂಪರ್​ಫಾಸ್ಟ್​ ವಾಹನಗಳಿಗೆ ಡಿಕ್ಕಿಯಾಗಿ ಹಳಿತಪ್ಪಿತು. ಇದರಿಂದ ಟ್ರಾಫಿಕ್​ ಜಾಮ್​ ಉಂಟಾಗಿದ್ದಲ್ಲದೆ, ಎರಡು ದಿಕ್ಕಿನ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:ಫನ್​ ಬಕೆಟ್​ ಭಾರ್ಗವನೊಂದಿಗಿನ ಸಂಬಂಧ ಬಿಚ್ಚಿಟ್ಟು ಭಾವುಕಳಾದ ಓ ಮೈ ಗಾಡ್​ ಗರ್ಲ್​ ನಿತ್ಯಾ..!
ಮೀರನಾಪುರ್​ ಕರ್ತಾ ರೈಲು ನಿಲ್ದಾಣವನ್ನು ಇಂದು ಬೆಳಗ್ಗೆ ದಾಟಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಕ್ರಾಸಿಂಗ್​ನಲ್ಲಿ ಯಾವುದೇ ಗೇಟ್​ ಬಾಗಿಲು ಮುಚ್ಚದೇ ಇದ್ದಿದ್ದರಿಂದ ಅಡ್ಡಲಾಗಿ ಬಂದ ವಾಹನಗಳಿಗೆ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಮೃತಪಟ್ಟ ಐವರು ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಗೇಟ್​ ಯಾಕೆ ಮುಚ್ಚಲಿಲ್ಲ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಪ್ರತಿಕ್ರಿನೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್​ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.(ಏಜೆನ್ಸೀಸ್​)
18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕಾ ನೋಂದಣಿ ಏಪ್ರಿಲ್ 24ರಿಂದ ಆರಂಭ: ಪ್ರಕ್ರಿಯೆ ಹೀಗಿದೆ..

ಜಿಲ್ಲಾ ಕೋರ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಂದ ಅರ್ಜಿ ಆಹ್ವಾನ- 34 ಹುದ್ದೆಗಳು ಖಾಲಿ… ‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + thirteen =
Remember me
