ನವದೆಹಲಿ:ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಫೇಮಸ್​ ಆಗಲೆಂದೇ ಸಾಕಷ್ಟು ಮಂದಿ ನಾನಾ ಸರ್ಕಸ್​ ಮಾಡುತ್ತಿರುತ್ತಾರೆ. ಕೆಲವರು ಏನೇನೋ ಮಾಡಲು ಹೋಗಿ ಕಾನೂನಿನ ನಿಯಮಗಳನ್ನು ಮುರಿದು ಜೈಲು ಅತಿಥಿಯಾದ ಉದಾಹರಣೆಗಳಿವೆ. ಆ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ.
ದ್ವಿಚಕ್ರ ವಾಹನ ಬಳಸಿಕೊಂಡು ಅಪಾಯಕಾರಿ ಸಾಹಸ ಚಿತ್ರೀಕರಣ ನಡೆಸುತ್ತಿದ್ದ ಮೂವರು ಯುವಕರನ್ನು ನೋಯ್ಡಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾಲ್ಪನಿಕ ಸೂಪರ್ ಹೀರೋ ಶಕ್ತಿಮಾನ್​ ಸಾಹಸವನ್ನು ಮರುಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದರು.
ಮೂವರು ಆರೋಪಿಗಳ ಬಂಧನದ ಜತೆಗೆ ಚಿತ್ರೀಕರಣಕ್ಕೆ ಬಳಸಿದ್ದ ಬೈಕ್​ ಅನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಬಂಧಿತರನ್ನು ವಿಕಾಸ್​, ಅನಿಲ್​ ಮತ್ತು ಮೆಹಕ್​ ಎಂದು ಗುರುತಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಜನರಿಗೆ ಕಿರಿಕಿರಿ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೌತಮ್ ಬುದ್ಧನಗರದ ಪೊಲೀಸ್ ಕಮಿಷನರೇಟ್, “ವಿಕಾಸ್ ಎಂಬ ಯುವಕನೊಬ್ಬ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಮಾಡಿದ್ದಾನೆ ಮತ್ತು ಅದನ್ನು ವಿಡಿಯೋ ಮಾಡಿದ ಅವನ ಇಬ್ಬರು ಸಹಚರರನ್ನು (ಗೌರವ್, ಸೂರಜ್) ನೋಯ್ಡಾದ ಪೊಲೀಸ್ ಠಾಣೆ ಸೆಕ್ಟರ್-63ರ ಸಿಬ್ಬಂದಿ ಬಂಧಿಸಿದ್ದಾರೆ. ಸ್ಟಂಟ್‌ಗೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಬಂಧಿತ ಮೂವರು ಯುವಕರು ಗಾಜಿಯಾಬಾದ್ ನಿವಾಸಿಗಳು. ಕಳೆದ ಗುರುವಾರ ನೋಯ್ಡಾ ರಸ್ತೆಗಳಲ್ಲಿ ಸಾಹಸ ಪ್ರದರ್ಶನ ಮಾಡಿದ್ದಾರೆ.(ಏಜೆನ್ಸೀಸ್​)
बाइक पर खतरनाक स्टंट करने वाले युवक विकास तथा वीडियो बनाने वाले उसके 02 साथियों (गौरव, सूरज) को थाना सेक्टर-63 नोएडा पुलिस द्वारा गिरफ्तार कर स्टंट में प्रयुक्त बाइक को सीज किया गया।#UPPolicepic.twitter.com/d94nvcfK01
— POLICE COMMISSIONERATE GAUTAM BUDDH NAGAR (@noidapolice)May 28, 2022

VIDEO| ಅಜಯ್​ ದೇವಗನ್​ ಅನುಸರಿಸಲು ಹೋಗಿ ಜೈಲು ಪಾಲಾದ ಯುವಕ: ವಾಹನಗಳೂ ಸೀಜ್​!

ಒಂದೇ ಕುಟುಂಬಕ್ಕೆ ಮದ್ವೆಯಾಗಿದ್ದ ಮೂವರು ಸಹೋದರಿಯರು ಮಕ್ಕಳೊಂದಿಗೆ ಆತ್ಮಹತ್ಯೆ: ಮೃತರಲ್ಲಿ ಇಬ್ಬರು ಗರ್ಭಿಣಿ

ಕರೊನಾ ಕಾಲದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಭಾರಿ ಏರಿಕೆ: 2008ಕ್ಕೆ ಹೋಲಿಸಿದರೆ 13 ಪಟ್ಟು ಹೆಚ್ಚಳ; ಎನ್​ಸಿಆರ್​ಬಿ ಅಂಕಿ-ಅಂಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
