ಬಯಾನಾ:ಸಾಕಷ್ಟು ಬೇಡಿಕೆ ಹಾಕಿದರೂ ವರದಕ್ಷಿಣೆ ನೀಡದಿದ್ದಕ್ಕೆ ಆಕ್ರೋಶಗೊಂಡ ಸಹೋದರರಿಬ್ಬರು ಮದುವೆ ಮಾಡಿಕೊಳ್ಳದೇ ಯುವತಿಯರಿಬ್ಬರನ್ನು ಮದುವೆ ಮಂಟಪದಲ್ಲೇ ಬಿಟ್ಟು ಹೊರ ನಡೆದ ಅಮಾನವೀಯ ಘಟನೆ ರಾಜಸ್ಥಾನದ ಭರತ್​ಪುರ ಜಿಲ್ಲೆಯ ಬಯಾನದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.
ಸಿಕಂದ್ರ ಮೂಲದ ಸಹೋದರಿಯರಿಬ್ಬರಿಗೆ ರಾಂಪುರ ಮೂಲದ ಸಹೋದರರಿಬ್ಬರ ಜತೆ ಮದುವೆ ನಿಗದಿಯಾಗಿತ್ತು. ಅಂದುಕೊಂಡಂತೆ ಎಲ್ಲವೂ ಸಿದ್ಧವಾಗಿ ಮದುವೆ ಹಿಂದಿನ ರಾತ್ರಿ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಿತ್ತು. ಮಾರನೇ ದಿನ ಮದುವೆಯ ಅಂತಿಮ ಹಂತದ ಕಾರ್ಯಕ್ರಮಗಳು ನಡೆಯಬೇಕಿತ್ತು. ಆದರೆ, ಸಹೋದರರಿಬ್ಬರ ಹಣ ದಾಹಕ್ಕೆ ಮದುವೆ ಮುರಿದು ಬಿದ್ದಿದೆ.
ಇಬ್ಬರು ವರರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. 5 ಲಕ್ಷ ನಗದು, ಬೈಕ್​ ಮತ್ತು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ವಧುವಿನ ತಂದೆ ಅಷ್ಟೊಂದು ವರದಕ್ಷಿಣೆ ನಮ್ಮಿಂದ ಕೊಡಲು ಆಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದರು. ಆದರೂ ಸಹೋದರರ ಮನಸ್ಸು ಕರಗಲೇ ಇಲ್ಲ. ವಧುವಿನ ಕಡೆಯವರು ಸಾಕಷ್ಟು ಮನವೊಲಿಸಿದರು ಸಾಧ್ಯವಾಗಲಿಲ್ಲ. ಕೊನೆಗೆ ಮದುವೆ ಮುರಿದುಕೊಂಡು ಮಂಟಪದಿಂದ ಸಹೋದರರಿಬ್ಬರು ಹೊರನಡೆದರು.
ಇತ್ತ ಅದ್ಧೂರಿಯಾಗಿ ಡ್ರೆಸ್​ ಮಾಡಿಕೊಂಡು ಮದುವೆಗೆ ತಯಾರಾಗಿದ್ದ ಸಹೋದರಿಯರಿಬ್ಬರಿಗೆ ಮದುವೆ ಮುರಿದು ಹೋದ ಸುದ್ದಿ ತಿಳಿದು ಆಘಾತಕ್ಕೆ ಒಳಗಾದರು. ಆದರೂ ಆಗಿದ್ದೆಲ್ಲ ಒಳ್ಳೆಯದ್ದಕ್ಕೆ ಅಂದುಕೊಂಡು ಹಣ ದಾಹ ಹೊಂದಿರುವ ಇಬ್ಬರು ವರರು ಹಾಗೂ ಅವರ ಕುಟುಂಬದ ವಿರುದ್ಧ ಪೊಲೀಸ್​ ಠಾಣೆಗೆ ತೆರಳಿ ಸಹೋದರಿಯರು ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
ನಾವು ಮಾಡಬೇಕಾದ್ದನ್ನು ರಮ್ಯಾ ಮಾಡಿ ತೋರಿಸಿದ್ದಾಳೆ: ಮಾಜಿ ಸಂಸದೆಗೆ ಬಹುಪರಾಕ್​

ಒಳಉಡುಪು ಕಾಣಿಸುವಂತಹ ಪಾರದರ್ಶಕ ಬಟ್ಟೆ ಧರಿಸಿ ಬಂದು ಮುಜುಗರಕ್ಕೀಡಾದ ಶ್ರುತಿ! ವಿಡಿಯೋ ವೈರಲ್​

ರಾಹುಲ್​ಗೆ ಕೈ ಅಧ್ಯಕ್ಷ ಸ್ಥಾನ?; ಇಂದು ಉದಯಪುರ್ ಚಿಂತನಾ ಶಿಬಿರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + twenty =
Remember me
