ಕೊಚ್ಚಿ:ಕಾಂಗ್ರೆಸ್​​​ ಮುಖಂಡ ಶಶಿ ತರೂರ್​ ಅವರು ಹಿಡುಗಾಯಿ ಹೊಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿದ್ದು, ಮೀಮ್ಸ್​​ ಫೋಟೋಗಳನ್ನು ಸ್ವತಃ ಶಶಿ ತರೂರ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾಣು ತೆಂಗಿನಕಾಯಿಯನ್ನು ಶಾಸ್ತ್ರೀಯವಾಗಿ ಒಡೆಯುವ ಚಿತ್ರವನ್ನು ಬಳಸಿ ಈ ಮೀಮ್ಸ್​ಗಳನ್ನು ಹರಿಬಿಡಲಾಗಿದೆ. ಈ ಫೋಟೋಗಳನ್ನು ಯಾರು ಹರಿಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನೋಡಲು ತುಂಬಾ ತಮಾಷೆಯಾಗಿವೆ. ವೈರಲ್​ ಆಗಿರುವ ಫೋಟೋಗಳಲ್ಲಿ ಇವು ನನ್ನ ಕೆಲವು ಮೆಚ್ಚಿನವುಗಳು ಎಂದು ಶಶಿ ತರೂರ್​ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ತರೂರ್​ ಅವರು ಹಿಡುಗಾಯಿ ಒಡೆಯುತ್ತಿರುವ ಫೋಟೋವನ್ನು ಟೀ ತಯಾರಕ, ಡ್ಯಾನ್ಸರ್​, ಬೌಲರ್​, ಕುಸ್ತಿಪಟು ಹಾಗೂ ಜಾವೆಲಿನ್​ ಥ್ರೂ ನಿರಜ್​ ಚೋಪ್ರಾ ರೀತಿ ಮೀಮ್ಸ್​ ಮಾಡಿ ಹರಿಬಿಟ್ಟಿದ್ದಾರೆ.
ಅನೇಕ ವರ್ಷಗಳ ಬಳಿಕ ಶಶಿ ತರೂರ್​ ಈ ವರ್ಷ ತಮ್ಮ ತವರು ಮನೆ ಪಲಕ್ಕಾಡ್​ನ ಎಲವಂಚೇರಿಯಲ್ಲಿ ಓಣಂ ಹಬ್ಬ ಆಚರಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ತಮ್ಮೂರಿನ ಭಗವತಿ ದೇವಸ್ಥಾನಕ್ಕೆ ತೆರಳಿ ಹಿಡುಗಾಯಿ ಹೊಡೆದಿರುವು ಫೋಟೋವನ್ನು ಶಶಿ ತರೂರ್​ ಟ್ವೀಟ್ ಮಾಡಿಕೊಂಡಿದ್ದರು. ಅದೇ ಫೋಟೋವನ್ನು ಬಳಸಿಕೊಂಡು ಟ್ರೋಲಿಗರು ಮೀಮ್ಸ್​ಗಳನ್ನು ಮಾಡಿ ಹರಿಬಿಟ್ಟಿದ್ದಾರೆ. ​
ಮೀಮ್ಸ್​ ಫೋಟೋಗಳನ್ನು ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದೇ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಶಶಿ ತರೂರ್​ ಅವರ ಕ್ರೀಡಾ ಮನೋಭಾವ ಹಾಗೂ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಮೀಮ್ಸ್​ಗಳನ್ನು ಮಾಡಿರುವ ಟ್ರೋಲಿಗರು ಸೃಜನಾತ್ಮಕತೆಗೂ ಬಹುಪರಾಕ್​ ಹೇಳಿದ್ದಾರೆ.(ಏಜೆನ್ಸೀಸ್​)

ನನ್ನ ಗಂಡನನ್ನು ಬಂಧಿಸಬೇಡಿ! ಶೀಲ ಶಂಕಿಸಿ ಗುಪ್ತಾಂಗವನ್ನೇ ಹೊಲಿದ್ರೂ ಪಾಪಿ ಪತಿಯನ್ನು ಬಿಟ್ಟುಕೊಡದ ಪತ್ನಿ

https://www.vijayavani.net/r-gangrape-on-mba-student-near-chamundi-hills-all-accused-arrested-by-mysuru-police/
ಸಿಎಂ ಯೋಗಿ ಆದಿತ್ಯಾನಾಥ್​ಗೆ ಸವಾಲು ಹಾಕಿದ್ದ ಮಾಜಿ ಐಪಿಎಸ್​ ಅಧಿಕಾರಿಯನ್ನು ಹೊತ್ತೊಯ್ದ ಯುಪಿ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
