ಮುಂಬೈ:ರಾಜ್​ ಕುಂದ್ರಾ ಅವರ ಪ್ರಕರಣ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಬಾಲಿವುಡ್​ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಆಗಿರುವುದರಿಂದ ರಾಜ್​ ಕುಂದ್ರಾ ಮೇಲಿನ ಗಮನ ಹೆಚ್ಚಾಗಿದೆ. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ವಿದೇಶಿ ಆ್ಯಪ್​ಗಳಲ್ಲಿ ಅಪ್​​ಲೋಡ್​ ಮಾಡಿದ ಆರೋಪದ ಮೇಲೆ ರಾಜ್​ ಕುಂದ್ರಾರನ್ನು ಬಂಧಿಸಲಾಗಿದೆ.
ಇತ್ತ ಪತಿಯ ಬಂಧನವಾಗಿದ್ದರೆ, ಅತ್ತ ನಟಿ ಶಿಲ್ಪಾ ಶೆಟ್ಟಿ ಅವರ ಹಂಗಾಮ-2 ಚಿತ್ರ ಸಹ ಬಿಡುಗಡೆಯಾಗಿದೆ. ಈಗಾಗಲೇ ಶಿಲ್ಪಾ ಶೆಟ್ಟಿ ಅವರು ಪೊಲೀಸರ ವಿಚಾರಣೆಯನ್ನು ಎದುರಿಸಿದ್ದು, ಆ ಕುರಿತ ಒಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ.
ಬಂಧನವಾಗಿರುವ ರಾಜ್​ ಕುಂದ್ರಾರನ್ನು ಜುಲೈ 23ರವರೆಗೆ ಮುಂಬೈ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜುಲೈ 27ರವರೆಗೆ ಬಂಧನವನ್ನು ಕೋರ್ಟ್​ ವಿಸ್ತರಿಸಿದೆ.
ಇತ್ತೀಚೆಗೆ ಮುಂಬೈ ಅಪರಾಧ ವಿಭಾಗದ ಪೊಲೀಸರು ಹೆಚ್ಚಿನ ತನಿಖೆಗಾಗಿ ಮುಂಬೈನ ಜುಹು ಏರಿಯಾದಲ್ಲಿರುವ ಶಿಲ್ಪಾ ಮತ್ತು ರಾಜ್​ ಕುಂದ್ರಾರ ಕಿನಾರಾ ಬಂಗಲೆ ಮೇಲೆ ರೇಡ್​ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಶಿಲ್ಪಾ ಹೇಳಿಕೆಯನ್ನು ದಾಖಲಿಸಿದ್ದಾರೆ. ಶಿಲ್ಪಾ ಪೊಲೀಸರ ಮುಂದೆ ಕಣ್ಣೀರಾಕಿದ್ದಾರೆಂಬ ಮಾಹಿತಿ ಪೊಲೀಸ್​ ಮೂಲಗಳಿಂದ ಹೊರಬಿದ್ದಿದೆ.
ಫ್ರೀ ಪ್ರೆಸ್ ಜರ್ನಲ್‌ ವರದಿಗಳ ಪ್ರಕಾರ, ರಾಜ್ ಕುಂದ್ರಾ ಅವರನ್ನು ಪೊಲೀಸರು ಅವರ ಮನೆಗೆ ಕರೆತಂದಾಗ ಶಿಲ್ಪಾ ಅಸಮಾಧಾನಗೊಂಡಿದ್ದರಂತೆ. ಅಲ್ಲದೆ, ಇಬ್ಬರು ನಡುವೆ ವಾಗ್ವಾದವೂ ನಡೆದಿದೆ ಎಂದು ಹೇಳಲಾಗಿದೆ. ಪರಸ್ಪರ ಎದುರು ನಿಲ್ಲಿಸಿ ವಿಚಾರಣೆ ನಡೆಸಿದಾಗ ಶಿಲ್ಪಾ ಅವರು ಕಣ್ಣೀರಾಕುತ್ತಿದ್ದರಂತೆ. ಸುಮಾರು 2 ಗಂಟೆಗಳ ವಿಚಾರಣೆ ಎದುರಿಸಿರುವ ಶಿಲ್ಪಾ ಶೆಟ್ಟಿ, ಕುಂದ್ರಾ ಕಂಪನಿಯಲ್ಲಿ ನನ್ನ ಪಾತ್ರ ಇಲ್ಲ ಎಂದು ನಿರಾಕರಿಸಿದ್ದಾರೆ. ಪೋರ್ನ್​ಗಿಂತ ಎರೋಟಿಕ್​ ವಿಭಿನ್ನವಾಗಿದೆ ಎಂದು ಶಿಲ್ಪಾ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.(ಏಜೆನ್ಸೀಸ್​)
ಬ್ಲೂ ಫಿಲ್ಮ್​ ದಂಧೆಯಲ್ಲಿ ಪತಿ ರಾಜ್​ ಕುಂದ್ರಾ ಬಂಧನ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ಕೇಸ್​: ಪೋರ್ನ್​ ವಿಡಿಯೋ ತಯಾರಿ-ವೀಕ್ಷಣೆ ಬಗ್ಗೆ ಭಾರತ-ಯುಕೆ ಕಾನೂನು ಏನು ಹೇಳುತ್ತೆ?

ಬ್ಲೂ ಫಿಲ್ಮ್​ ದಂಧೆಯಲ್ಲಿ ರಾಜ್​ ಕುಂದ್ರಾ ಸಿಕ್ಕಿಬಿದ್ದಿದ್ಹೇಗೆ? ಮುಂಬೈನ ಕರಾಳ ಲೋಕ ಬಿಚ್ಚಿಟ್ಟ ಪೊಲೀಸ್​ ಆಯುಕ್ತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
