ಹೈದರಾಬಾದ್​:ಆಸ್ಪತ್ರೆಯಲ್ಲಿ ಸಂಪೂರ್ಣ ಬಾಡಿ ಸ್ಕ್ಯಾನ್​ ಮಾಡುವಾಗ ರಹಸ್ಯವಾಗಿ ಫೋಟೋ ತೆಗೆದಿರುವ ನಿಗೂಢ ವ್ಯಕ್ತಿಯ ವಿರುದ್ಧ ನಟಿ ಹಾಗೂ ಸಂಸದೆ ನವ್​ನೀತ್ ಕೌರ್​ ರಾಣಾ ಅವರು ದೂರು ದಾಖಲಿಸಿದ್ದಾರೆ.
ಅಮರಾವತಿ ಕ್ಷೇತ್ರ ಸಂಸದೆಯಾಗಿರುವ ನವನೀತ್​ ಕೌರ್​ ರಾಣಾ ತೆಲುಗು ಹಾಗೂ ತಮಿಳು ಚಿತ್ರರಂಗದ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರರಂಗದಿಂದ ಅಂತರ ಕಾಯ್ದುಕೊಂಡು ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ನವನೀತ್​ ಅವರು ಅಮರಾವತಿ ನಗರದ ಬದ್ನೇರಾ ಕ್ಷೇತ್ರದ ಪಕ್ಷೇತರ ಶಾಸಕ ರವಿ ರಾಣಾ ಅವರನ್ನು 2011ರಲ್ಲಿ ವರಿಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ್ದಕ್ಕೆ ದಂಪತಿಯನ್ನು ಮುಂಬೈನ ಅವರ ಮನೆಯಿಂದ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ನವನೀತ್​ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸಂಪೂರ್ಣ ಬಾಡಿ ಸ್ಕ್ಯಾನ್​ ಮಾಡಿಸಲಾಗಿದೆ. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ಸ್ಕ್ಯಾನ್​ ರೂಮ್​ನಲ್ಲಿ ನವನೀತ್​ ಅವರ ಬಾಡಿ ಸ್ಕ್ಯಾನ್​ ಫೋಟೋವನ್ನು ಸೆರೆಹಿಡಿದಿದ್ದಾನೆ. ಈ ವಿಚಾರ ಅವರ ಗಮನಕ್ಕೆ ಬಂದಿದೆ. ಆದರೆ, ಫೋಟೋ ತೆಗೆದ ವ್ಯಕ್ತಿ ಯಾರೆಂಬುದು ಗೊತ್ತಿಲ್ಲ. ಆದರೂ ನಿಗೂಢ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ನವನೀತ್​ ಕೌರ್​ ಅವರ ಸಂಗತಿಯು ಬಾಲಿವುಡ್ ಚಿತ್ರರಂಗ ಮತ್ತು ವೈದ್ಯಕೀಯ ವಲಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ.(ಏಜೆನ್ಸೀಸ್​)
ರಾಮ ಸ್ಮರಣೆ ಮಾಡಿದ್ರೆ ಜೈಲಿಗೆ ಹಾಕ್ತೀರಾ? ಚುನಾವಣೆಗೆ ನಿಲ್ಲಿ- ಹೆಣ್ಣಿನ ಶಕ್ತಿ ಏನು ಎಂದು ತೋರಿಸುವೆ!

ಬಾಡಿಗೆ ಮನೆಯಲ್ಲಿ ಕಾಸರಗೋಡಿನ ನಟಿ-ಮಾಡೆಲ್​ ನಿಗೂಢ ಸಾವು: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತಾಯಿ

ಒಳಉಡುಪು ಕಾಣಿಸುವಂತಹ ಪಾರದರ್ಶಕ ಬಟ್ಟೆ ಧರಿಸಿ ಬಂದು ಮುಜುಗರಕ್ಕೀಡಾದ ಶ್ರುತಿ! ವಿಡಿಯೋ ವೈರಲ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 + 18 =
Remember me
