ಪಲಕ್ಕಾಡ್​:ಪ್ರೀತಿ ಮುರಿದುಕೊಂಡ ಪ್ರೇಯಸಿಯನ್ನು ಮಾಜಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಸೂರ್ಯಪ್ರಿಯಾ (24) ಕೊಲೆಯಾದ ದುರ್ದೈವಿ. ಈಕೆ ಕೊನ್ನಲ್ಲೂರಿನ ಶಿವದಾಸನ್​ ಮತ್ತು ಗೀತಾ ದಂಪತಿಯ ಪುತ್ರಿ. ತನ್ನ ನಿವಾಸದಲ್ಲಿ ಯಾರು ಇಲ್ಲದಿದ್ದಾಗ ಸೂರ್ಯಪ್ರಿಯಾ ಹತ್ಯೆಯಾಗಿದ್ದಾರೆ. ಅಂಜುಮೂರ್ತಿಮಂಗಲದ ಅನಕಪ್ಪರ ನಿವಾಸಿ ಸುಜೀಶ್​ (27) ಕೊಲೆ ಮಾಡಿದ ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಸೂರ್ಯಪ್ರಿಯಾ, ಡೆಮೋಕ್ರೆಟಿಕ್​ ಯೂತ್​ ಫೆಡರೇಶನ್​ ಆಫ್​ ಇಂಡಿಯಾದ ಬ್ಲಾಕ್​ ಕಮಿಟಿ ಸದಸ್ಯೆ ಮತ್ತು ಮೆಲಾರಕೋಡು ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆಯಾಗಿದ್ದರು. ಕಳೆದ ಆರು ವರ್ಷದಿಂದ ಸುಜೀಶ್​ ಮತ್ತು ಸೂರ್ಯಪ್ರಿಯಾ ಪರಸ್ಪರ ಪ್ರೀತಿ ಮಾಡುತ್ತಿದ್ದರು.
ಬುಧವಾರ ಬೆಳಗ್ಗೆ 10 ಗಂಟೆಗೆ ಸೂರ್ಯಪ್ರಿಯಾ ಕೊಲೆಯಾಗಿದೆ. ಮನೆಯಲ್ಲಿ ಸೂರ್ಯಪ್ರಿಯಾ ತಾಯಿ ಗೀತಾ, ಆಕೆಯ ಸಹೋದರ ರಾಧಕೃಷ್ಣನ್​ ವಾಸವಿದ್ದಾರೆ. ಘಟನೆ ಸಮಯದಲ್ಲಿ ಕೆಲಸಕ್ಕೆಂದು ಗೀತಾ ಹೊರಗಡೆ ಹೋದರೆ, ರಾಧಾಕೃಷ್ಣನ್​ ಬ್ಯಾಂಕ್​ಗೆಂದು ಅಲಥೂರ್​ಗ ಹೋಗಿದ್ದರು. ಮನೆಯಲ್ಲಿ ತಾತ ಒಬ್ಬರೆ ಇದ್ದರು. ಅವರು ಕೂಡ ಟೀ ಕುಡಿಯಲೆಂದು ಹೊರಗಡೆ ಹೋಗಿದ್ದಂತಹ ಸಂದರ್ಭದಲ್ಲಿ ಮನೆಗೆ ನುಗ್ಗಿದ ಸುಜೀಶ್​, ಸೂರ್ಯಪ್ರಿಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಪೊಲೀಸರ ಪ್ರಕಾರ, ಪ್ರೀತಿ ಮುರಿದುಕೊಂಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಕಾಲೇಜು ದಿನಗಳಿಂದಲೂ ಇಬ್ಬರು ಸಂಬಂಧದಲ್ಲಿದ್ದರು. ಕೆಲವು ತಿಂಗಳ ಹಿಂದೆ ಸೂರ್ಯಪ್ರಿಯಾ ಪ್ರೀತಿಯನ್ನು ಕಡಿದುಕೊಂಡಿದ್ದಳು. ಆದರೆ, ಆಕೆ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರಕ್ಕೆ ಕೆಲವು ದಿನಗಳ ಹಿಂದೆ ಫೋನ್​ ಮೂಲಕ ಇಬ್ಬರ ನಡುವೆ ವಾಗ್ವಾದವು ನಡೆದಿತ್ತು. ಸೂರ್ಯಪ್ರಿಯಾಳನ್ನು ನೇರವಾಗಿ ಭೇಟಿಯಾಗಿ ಪ್ರಶ್ನೆ ಮಾಡೋಣ ಅಂದುಕೊಂಡು ನಿನ್ನೆ ಬೆಳಗ್ಗೆ ಆಕೆಯ ಮನೆಗೆ ಬಂದ ಸುಜೀಶ್​, ಆಕೆಯ ಮೊಬೈಲ್​ ಚಾಟ್ಸ್​ಗಳನ್ನು ನೋಡಿದ್ದಾನೆ. ನಂತರ ಮೆಸೇಜ್​ ವಿಚಾರಕ್ಕೆ ಸೂರ್ಯಪ್ರಿಯಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ಜಗಳ ತಾರಕಕ್ಕೇರಿದಾಗ ಸುಜೀಶ್​ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಅದಕ್ಕೂ ಮುನ್ನ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆದರೆ, ಟವೆಲ್​ ಮೂಲಕ ಉಸಿರುಗಟ್ಟಿಸಿ ಸುಜೀಶ್​ ಹತ್ಯೆ ಮಾಡಿದ್ದಾನೆ.
ಸೂರ್ಯಪ್ರಿಯಾಳ ಸಾವು ದೃಢವಾದ ಬಳಿಕ ಸುಜೀಶ್​,ಸೂರ್ಯಪ್ರಿಯಾಳ ಮೊಬೈಲ್ ಫೋನ್ ತೆಗೆದುಕೊಂಡು ಆಲತ್ತೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸುಜೀಶ್ ಸೇಲಂನ ಕರೂರ್‌ನಲ್ಲಿರುವ ಖರ್ಜೂರದ ಕಂಪನಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಪೊಲೀಸರು ಆಗಮಿಸಿದ ನಂತರವೇ ಸ್ಥಳೀಯರು ಮತ್ತು ಸಂತ್ರಸ್ತೆಯ ಅಜ್ಜನಿಗೆ ಕೊಲೆಯ ವಿಷಯ ತಿಳಿಯಿತು. ಮೃತದೇಹವನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.(ಏಜೆನ್ಸೀಸ್​)
VIDEO| ಎಮ್ಮೆ ಮುಂದೆ ವಿಚಿತ್ರವಾಗಿ ಡಾನ್ಸ್​ ಮಾಡಿದ ಹುಡುಗಿ: ಮುಂದೇನಾಯ್ತು ನೀವೇ ನೋಡಿ…

VIDEO| ಪ್ರಾಣಿಗಳು ಸಹ ಇದನ್ನು ತಿನ್ನುವುದಿಲ್ಲ: ಊಟದ ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಾಕಿದ ಕಾನ್ಸ್​ಟೇಬಲ್​

ಐಟಿ ಅಧಿಕಾರಿಗಳ ಮಹಾ ಬೇಟೆ: 56 ಕೋಟಿ ನಗದು, 32 ಕೆಜಿ ಚಿನ್ನಾಭರಣ ಸೇರಿ 390 ಕೋಟಿ ರೂ, ಬೇನಾಮಿ ಆಸ್ತಿ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 14 =
Remember me
