ತಿರುವನಂತಪುರಂ:ಕೇರಳದಲ್ಲಿ ನಾನ್​ ವೆಜ್​ ಹೋಟೆಲ್​ಗಳ ಕರ್ಮಕಾಂಡ ದಿನಕ್ಕೊಂದು ಬಯಲಾಗುತ್ತಿದೆ. ಚಿಕನ್​ ಶೋರ್ಮಾ ತಿಂದು 16 ವರ್ಷ ಬಾಲಕಿ ಮೃತಪಟ್ಟ ಬಳಿಕವಂತೂ ಕೇರಳದ ಆಹಾರ ಸುರಕ್ಷತಾ ಇಲಾಖೆ ಹೋಟೆಲ್​ಗಳ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಅನೇಕ ಹೋಟೆಲ್​ಗಳಿಗೆ ಬೀಗ ಜಡಿದಿದೆ. ಇದರ ನಡುವೆಯೇ ಮತ್ತೊಂದು ಹೋಟೆಲ್​ನ ಕರ್ಮಕಾಂಡ ಬಯಲಾಗಿದೆ.
ಫುಡ್​ ಡೆಲಿವರಿ ಪಾರ್ಸೆಲ್​ನಲ್ಲಿ ಹಾವಿನ ಚರ್ಮವನ್ನು ನೋಡಿ ಮಹಿಳೆ ಮತ್ತು ಆಕೆಯ ಮಗಳು ಶಾಕ್​ ಆಗಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ನಡೆದಿದೆ. ಈ ಪ್ರಕರಣವನ್ನು ಅಧಿಕಾರಿಗಳ ಗಮನಕ್ಕೆ ತಂದ ಕೂಡಲೇ ಹೋಟೆಲ್​ ಅನ್ನು ಬಂದ್​ ಮಾಡಲಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ ತಿರುವನಂತಪುರಂ ನಿವಾಸಿ ಪ್ರಿಯಾ ಅವರು ಗುರುವಾರ ನೆಡುಮಂಗಡು ಏರಿಯಾದಲ್ಲಿರುವ ರೆಸ್ಟೊರೆಂಟ್​ನಲ್ಲಿ ಎರಡು ಪರೋಟ ಆರ್ಡರ್​ ಮಾಡಿದ್ದರು. ಆಹಾರ ಡೆಲಿವರಿ ಆದ ಕೂಡಲೇ ಮೊದಲು ತಮ್ಮ ಮಗಳಿಗೆ ಬಡಿಸಿದರು. ಮಗಳು ಊಟ ಮುಗಿಸಿದ ಬಳಿಕ ಪ್ರಿಯಾ ಅವರು ಊಟ ಮಾಡುವಾಗ ಪಾರ್ಸೆಲ್​ ಪೇಪರ್​ನಲ್ಲಿ ಅರ್ಧ ಬೆರಳಿನ ಉದ್ದದಷ್ಟು ಹಾವಿನ ಚರ್ಮ ಪತ್ತೆಯಾಗಿದೆ. ಇದನ್ನು ನೋಡಿ ಅಮ್ಮ-ಮಗಳು ಶಾಕ್​ ಆಗಿದ್ದಾರೆ.
ಇದಾದ ಕೂಡಲೇ ಪ್ರಿಯಾ ಅವರು ಈ ಘಟನೆಯ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದರು. ತಕ್ಷಣ ದೂರಿಗೆ ಸ್ಪಂದಿಸಿದ ಅಧಿಕಾರಿಗಳು ರೆಸ್ಟೊರೆಂಟ್​ ಪರಿಶೀಲಿಸಿದ್ದಾರೆ. ರೆಸ್ಟೊರೆಂಟ್​ ಕಳಪೆ ಪರಿಸ್ಥಿತಿಯಲ್ಲಿದ್ದರಿಂದ ತಕ್ಷಣ ಅದನ್ನು ಬಂದ್​ ಮಾಡಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಹಾರ ಸುರಕ್ಷತಾ ಅಧಿಕಾರಿ ಅರ್ಶಿತಾ ಬಶೀರ್, ಆಹಾರ ಪ್ಯಾಕಿಂಗ್‌ಗೆ ಬಳಸುತ್ತಿದ್ದ ಪತ್ರಿಕೆಯಲ್ಲಿ ಹಾವಿನ ಚರ್ಮ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ರೆಸ್ಟೊರೆಂಟ್​ನ ಅಡುಗೆ ಮನೆಯಲ್ಲಿ ಸಾಕಷ್ಟು ಬೆಳಕು ಇಲ್ಲ ಮತ್ತು ಸ್ವಚ್ಛತೆಯನ್ನು ನಿರ್ವಹಿಸಿಲ್ಲ. ಹೀಗಾಗಿ ರೆಸ್ಟೊರೆಂಟ್​ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಮಾಲೀಕರಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
KGF​ ಚಿತ್ರಾಭಿಮಾನಿಗಳಿಗೆ ಬೇಸರದ ಸಂಗತಿ: ಬೇಸರದ ನಡುವೆಯೂ ಒಂದು ಸಮಾಧಾನಕರ ಸುದ್ದಿ!

ಪತಿಯ ಸ್ನೇಹಿತನ ದುರ್ವತನೆ: ದುಬೈನಲ್ಲಿ ಖ್ಯಾತ ವ್ಲಾಗರ್​ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಲಾಯರ್​ ಹೇಳಿಕೆ

ಸಿನಿಮಾ ಕ್ಷೇತ್ರಕ್ಕೆ ಗುಡ್ ​ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
