ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಖ್ಯಾಬೆ ಲಾಮೆ ಇದೇ ಮೊದಲ ಬಾರಿಗೆ ಭಾರತದ ಬ್ರ್ಯಾಂಡ್​ ಒಂದರ ಜತೆ ಕೈ ಜೋಡಿಸಿದ್ದಾರೆ.
ಒಂದೇ ಒಂದು ಮಾತನಾಡದೇ ಕೇವಲ ತನ್ನ ಕೈ ಸನ್ನೆಯಿಂದಲೇ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ತೋರಿಸುವುದರಲ್ಲಿ ಖ್ಯಾಬೆ ಲಾಮೆ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 47 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಖ್ಯಾಬೆ ಲಾಮೆ, ಟ್ವಿಟರ್​ನಲ್ಲಿಯು 1 ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ.
ಟಿಕ್​ಟಾಕ್​ನಲ್ಲಂತೂ ಧೂಳೆಬ್ಬಿಸಿರುವ ಖ್ಯಾಬೆ ಲಾಮೆ ಬರೋಬ್ಬರಿ 100 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ವಿಶೇಷವೆಂದರೆ, ಅವರು ಯಾವೊಂದು ವಿಡಿಯೋದಲ್ಲೂ ಮ್ಯೂಸಿಕ್​ ಬಿಟ್ಟರೆ, ಅವರ ಧ್ವನಿ ಇರುವುದಿಲ್ಲ. ಕೈ ಸನ್ನೆ ಮೂಲಕವೇ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಖ್ಯಾಬೆ ಲಾಮೆ ಅವರ ಆದಾಯ 2 ಮಿಲಿಯನ್​ ಡಾಲರ್​ ಎಂದು ತಿಳಿದುಬಂದಿದೆ.
ಪ್ರಸ್ತುತ ಖ್ಯಾಬೆ ಲಾಮೆ ಅವರು ಭಾರತದ ಫ್ಯಾಂಟಸಿ ಸ್ಪೋರ್ಟ್ಸ್​ ಪ್ಲಾಟ್​ಫಾರ್ಮ್​ ಡ್ರೀಮ್​ 11 ಆ್ಯಪ್​ ಜತೆ ಕೈ ಜೋಡಿಸಿದ್ದಾರೆ. ಭಾರತೀಯ ಬ್ರ್ಯಾಂಡ್​ನೊಂದಿಗೆ ಖ್ಯಾಬೆ ಲಾಮೆ ಅವರ ಮೊದಲ ಸಹಭಾಗಿತ್ವ ಇದಾಗಿದೆ. ಅಂದಾಜಿನ ಪ್ರಕಾರ, 21 ವರ್ಷದ ಟಿಕ್‌ಟಾಕ್ ಸ್ಟಾರ್​ ಒಂದು ಪ್ರಚಾರದ ವೀಡಿಯೊಗೆ 50,000 ಡಾಲರ್​ ವಿಧಿಸುತ್ತಾರೆಂದು ತಿಳಿದುಬಂದಿದೆ. ಅಲ್ಲದೆ, ಪ್ರತಿ ತಿಂಗಳು ಅಂದಾಜು 200,000 ಡಾಲರ್​ ಗಳಿಸುತ್ತಾರೆಂದು ತಿಳಿದುಬಂದಿದೆ.
Life is simple. You just need to use your 🧠 in the right place!Ain’t it true,@KhabyLame? 😜#Dream11PeDimaagLagaNa#Dream11#D11#LearnFromKhaby@viraj_ghelanipic.twitter.com/O63aGORVhj
— Dream11 (@Dream11)September 27, 2021

ಸೆನೆಗಲ್​ ಮೂಲದ ಖ್ಯಾಬೆ ಲಾಮೆ ಪ್ರಸ್ತುತ ಇಟಲಿಯಲ್ಲಿ ವಾಸವಿದ್ದು, ಇತ್ತೀಚೆಗಷ್ಟೇ ಟಿಕ್​ಟಾಕ್​ನಲ್ಲಿ ಲಾಮೆ 100 ಮಿಲಿಯನ್​ ಫಾಲೋವರ್ಸ್​ ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ.(ಏಜೆನ್ಸೀಸ್)
ಮತ್ತೆ ಏರಿತು ಇಂಧನ ಬೆಲೆ; ಪೆಟ್ರೋಲ್​-ಡೀಸೆಲ್ ಇನ್ನೂ ದುಬಾರಿ

ಪ್ರವಾಸಿ ಸ್ವರ್ಗ ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ: ಇನ್​ಸ್ಟಾಗ್ರಾಂನಲ್ಲಿ ಸುಳಿವು ಬಿಟ್ಟುಕೊಟ್ಟ ನಟಿ!

ಬ್ಯೂಟಿ ಕಿಂಗ್‌, ಮದ್ಯಪ್ರಿಯ, ಪ್ರಶಸ್ತಿಗಳ ಸರದಾರ 21 ಕೋಟಿ ರೂ. ಬೆಲೆಯ ಸುಲ್ತಾನ್‌ ಹೃದಯಾಘಾತದಿಂದ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
