ಹರಿಪಾದ:ಹೆತ್ತ ತಾಯಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಯೋಧನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಹರಿಪಾದ ಎಂಬಲ್ಲಿ ನಡೆದಿದೆ.
ಬಂಧಿತ ಯೋಧನನ್ನು ಅಲಕೊಟ್ಟಿಲ್​ ಸುಬೋಧ್​ (37) ಎಂದು ಗುರುತಿಸಲಾಗಿದೆ. ಈತ ತನ್ನ 69 ವರ್ಷದ ತಾಯಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ತಾಯಿಯನ್ನು ಎಳೆದಾಡಿ, ಆಕೆಯನ್ನು ಕೆಳಕ್ಕೆ ನೂಕಿ, ಕಾಲಿನಿಂದು ಒದ್ದು ಕೆಟ್ಟ ಬೈಗುಳಗಳಿಂದ ನಿಂದಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಸಹಾಯಕ್ಕಾಗಿ ತನ್ನ ಹಿರಿಯ ಮಗನ ಹೆಸರನ್ನು ಕೂಗಿದರೆ, ಅದನ್ನು ವ್ಯಂಗ್ಯವಾಡಿಕೊಂಡು ತಾಯಿಯ ಮೇಲೆ ದೌರ್ಜನ್ಯ ಎಸಗಿದ್ದ.
ಈ ಘಟನೆ ಬುಧವಾರ (ಜ.12) ನಡೆದಿದೆ. ಆರೋಪಿ ಸುಬೋಧ್​ ಮದ್ಯದ ಅಮಲಿನಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನಿನ್ನೆ ಪೊಲೀಸರು ಮನೆಗೆ ಬಂದಾಗಲೂ ತಾಯಿಯು ತನ್ನ ತಾಯ್ತನವನ್ನು ಪ್ರದರ್ಶಿಸಿದ್ದಾಳೆ. ಮಗನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ದೂರು ನೀಡಲು ಹಿಂಜರಿದಿದ್ದಾಳೆ. ಮಗನನ್ನು ಕರೆದುಕೊಂಡು ಹೋದರೆ ನಾನು ಕೂಡ ಜೊತೆಯಾಗುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿ ಎಳೆದೊಯ್ದಾಗಲು ಆತ ಮದ್ಯದ ಅಮಲಿನಲ್ಲೇ ಇದ್ದ. ಬೆಂಗಳೂರಿನಲ್ಲಿ ಟ್ರೇಡ್‌ಮ್ಯಾನ್ ಆಗಿರುವ ಸುಬೋಧ್ ಮೂರು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು. ಒಂದು ವರ್ಷದ ಹಿಂದಷ್ಟೇ ಕಾರ್ತಿಕಪಲ್ಲಿ ಜಂಕ್ಷನ್‌ನಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.(ಏಜೆನ್ಸೀಸ್​)
VIDEO: ‘ಬಾಳೆಹಣ್ಣು ಬೇಕೇ ಬಾಳೆಹಣ್ಣು’ ಎಂದಾಗ ಜನ ನೋಡಲಿಲ್ಲ… ಮಾರಾಟಗಾರನ ಹೊಸ ಪ್ಲ್ಯಾನ್‌ನಿಂದ ಭರ್ಜರಿ ವ್ಯಾಪಾರ!

VIDEO: ಈ ಜನ್ಮದಲ್ಲಿ ಈತ ಯಾರ ಮೇಲೂ ಬೈಕ್‌ನಿಂದ ಕೆಸರು ಹಾರಿಸಲ್ಲ… ಅಷ್ಟಕ್ಕೂ ಆಗಿದ್ದೇನು? ವೈರಲ್‌ ವಿಡಿಯೋ ನೋಡಿ…

ಇನ್ಫೋಸಿಸ್​ ಕಂಪನಿ ಹೆಸರಲ್ಲಿ ಸೈಬರ್​ ಖದೀಮರಿಂದ ಲಕ್ಷಾಂತರ ರೂಪಾಯಿ ವಂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
