ಮುಂಬೈ:ಮರಾಠಿ ನಟಿ ಮತ್ತು ಯುವ ಡ್ಯಾನ್ಸಿಂಗ್​ ಕ್ವೀನ್​ ಶೋ ಜಡ್ಜ್​ ಸೊನಾಲೀ ಕುಲಕರ್ಣಿ ಮನೆಗೆ ಅತಿಕ್ರಮ ಪ್ರವೇಶಿಸಿದ 24 ವರ್ಷದ ಯುವಕನೊಬ್ಬ ನಟಿಯ ತಂದೆ ಮನೋಹರ್​ ಕುಲಕರ್ಣಿ ಮೇಲೆ ಚಾಕುವಿನಿಂದ ದಾಳಿ ಮಾಡಿ ಸುಲಿಗೆಗೆ ಯತ್ನಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಘಟನೆ ಬಗ್ಗೆ ಮಾತನಾಡಿರುವ ಸೊನಾಲೀ ಕುಲಕರ್ಣಿ, ಅತಿಕ್ರಮಣಕಾರನ ಹಿಂದಿರುವ ಉದ್ದೇಶ ನಮಗೆ ತಿಳಿದಿಲ್ಲ. ಆತ ಅಭಿಮಾನಿಯೋ? ಇಲ್ಲವೋ? ಎಂಬುದು ಸಹ ಗೊತ್ತಿಲ್ಲ. ನಾನು ಆತಂಕಕ್ಕೆ ಒಳಗಾಗಿದ್ದು, ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿ ನಾನಿಲ್ಲ. ಎಲ್ಲರು ಅರ್ಥ ಮಾಡಿಕೊಳ್ಳುತ್ತಾರೆಂದು ನಾನು ಭಾವಿಸಿದ್ದೇನೆಂದು ಹೇಳಿದ್ದಾರೆ.
ಸೊನಾಲೀ ಅವರು ಪ್ರಸ್ತುತ ತನ್ನ ಪತಿ ಕುನಾಲ್​ ಬೆನೊಡೆಕರ್​ ಜತೆ ದುಬೈನಲ್ಲಿದ್ದಾರೆ. ತುಂಬಾ ಚಿಂತಿತರಾಗಿರುವ ಸೊನಾಲೀ ವಿಶೇಷವಾಗಿ ಕಿಡಿಗೇಡಿಯಿಂದ ಗಾಯಗೊಂಡಿರುವ ತನ್ನ ತಂದೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಆತಂಕಕಾರಿ ಘಟನೆ ಪುಣೆಯ ನಿಗ್ದಿ ನಿವಾಸದಲ್ಲಿ ನಟಿ ಪಾಲಕರು ಮನೆಯಲ್ಲಿರುವ ಸಂದರ್ಭದಲ್ಲಿ ನಡೆದಿದೆ. ಪೈಪ್​ ಏರಿ ಟೆರೆಸ್​ ಮೇಲೆ ಬಂದು, ಮನೆಯೊಳಗೆ ಎಂಟ್ರಿ ನೀಡಿದ್ದಾನೆಂದು ತಿಳಿದುಬಂದಿದೆ. ಚಾಕುವಿನ ದಾಳಿಯಿಂದ ನಟಿಯ ತಂದೆ ಕೂಗಿಕೊಂಡಾಗ ಹೆದರಿದ ಕಿಡಗೇಡಿ ಮನೆಯಿಂದ ಓಡಿ ಹೋಗುವಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸ್​ ಬಂಧನದಲ್ಲಿರುವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.(ಏಜೆನ್ಸೀಸ್​)
ಧಾರಾವಾಹಿಗಳು ಮುಂದುವರಿಯಲಿವೆ; ತಿಂಗಳಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಶುರು

ಹೈದ್ರಾಬಾದ್ ಹುಡುಗಿಗೆ ಕೋಟಿ ಕೋಟಿ ಸಂಬಳ! ಟೆಕ್ ದೈತ್ಯ ಮೈಕ್ರೋಸಾಫ್ಟ್​ಗೆ ಭಾರತದ ಪ್ರತಿಭೆ ಆಯ್ಕೆ

ಗಡುವು ಅಂತ್ಯ, ಮುಂದೇನು?: ಅನುಸರಿಸದಿದ್ದರೆ ತಾಣಗಳೇ ಬ್ಲಾಕ್ ಸಾಧ್ಯತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − four =
Remember me
