ಪಣಜಿ:ಗೋವಾ ಪ್ರವಾಸದಲ್ಲಿದ್ದ ಬಿಜೆಪಿ ನಾಯಕಿ ಹಾಗೂ ಟಿಕ್​ಟಾಕ್​ ಸ್ಟಾರ್ ಸೊನಾಲಿ ಪೊಗತ್ (41)​ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮಂಗಳವಾರ ಬೆಳಗ್ಗೆ ವರದಿಯಾಗಿದೆ.
ತಮ್ಮ ಸಿಬ್ಬಂದಿ ಜೊತೆ ಗೋವಾ ಪ್ರವಾಸದಲ್ಲಿದ್ದ ಸೊನಾಲಿ ಪೋಗಟ್​ ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳದಿದ್ದಾರೆ. ಸಾಯುವ ಮುನ್ನ ಪೋಗಟ್​ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿದ್ದರು ಮತ್ತು ಪ್ರೊಫೈಲ್ ಚಿತ್ರವನ್ನೂ ಬದಲಾಯಿಸಿದ್ದರು.

A post shared by Sonaliiphogat (@sonali_phogat_official)

ಸೋನಾಲಿ ಅವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹರಿಯಾಣದ ಅದಂಪುರ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಕುಲದೀಪ್ ಬಿಷ್ಣೋಯ್ ಎಂಬುವರ ವಿರುದ್ಧ ಸೋಲುಂಡಿದ್ದರು. ಬಿಷ್ಣೋಯ್​ ಅವರು ಈ ವರ್ಷದ ಆರಂಭದಲ್ಲಿ ತಮ್ಮ ಸ್ಥಾನವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಅದಂಪುರ್​ ಉಪಚುನಾವಣೆಯ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.
ಈ ವಾರದ ಆರಂಭದಲ್ಲಿ, ಬಿಷ್ಣೋಯ್ ಅವರು ಸೋನಾಲಿ ಫೋಗಟ್ ಅವರನ್ನು ಭೇಟಿಯಾಗಿ ಎರಡು ಗಂಟೆಗಳು ಹೆಚ್ಚು ಕಾಲ ಹಲವಾರು ರಾಜಕೀಯ ವಿಷಯಗಳನ್ನು ಚರ್ಚಿಸಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಪೋಗಟ್​, ನನ್ನ ಸ್ಥಾನವನ್ನು ನಾನು ಬಿಟ್ಟುಕೊಡುವುದಿಲ್ಲ. ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು 2024ರ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೇನೆ ಎಂದು ಹೇಳಿದ್ದರು. ಕೂಡಲೇ ಚುನಾವಣೆ ಎದುರಿಸಲು ನಾನು ಸಿದ್ಧ ಎಂದಿದ್ದರು. ತನಗೆ ಪಕ್ಷದ ಮೇಲೆ ವಿಶ್ವಾಸವಿದ್ದು, ತನ್ನ ಶ್ರಮವನ್ನು ಕಡೆಗಣಿಸುವುದಿಲ್ಲ ಎಂದು ಭಾವಿಸಿರುವುದಾಗಿ ಹೇಳಿದ್ದರು.(ಏಜೆನ್ಸೀಸ್​)
ಪ್ರೇಯಸಿ ಹೇಳಿದ ಆ ಒಂದು ಮಾತಿಗೆ 139 ಕೆಜಿ ದೇಹದ ತೂಕವನ್ನು 69ಕ್ಕೆ ಇಳಿಸಿದ ಯುವಕ!

ಬಿಗ್​ಬಾಸ್​ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?

ಕಷ್ಟಗಳನ್ನು ಎದುರಿಸಲು ಆಗ್ತಿಲ್ಲ… ಮಗು ಕೊಂದು ಸಾವಿನ ಹಾದಿ ಹಿಡಿಯಲು ಹೋದ ತಾಯಿಯ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
