ಮುಂಬೈ:ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮುಂಬೈನ ಕಫ್ ಪರೇಡ್ ಏರಿಯಾದಲ್ಲಿರುವ​ ಜಿಮ್​ ಟ್ರೈನರ್ ವಿರುದ್ಧ ದಕ್ಷಿಣ ಭಾರತದ ನಟಿಯೊಬ್ಬಳು ದೂರು ದಾಖಲಿಸಿರುವ ಘಟನೆ ಮಂಗಳವಾರ (ಸೆ.13) ವರದಿಯಾಗಿದೆ.
ಮದುವೆ ಆಗುವುದಾಗಿ ನಂಬಿಸಿ ಫಿಟ್​ನೆಸ್​ ಟ್ರೈನರ್​ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಆರೋಪಿಸಿದ್ದು, ದೂರು ದಾಖಲಾದ ಬೆನ್ನಲ್ಲೇ ಆರೋಪಿ ಜಿಮ್​ ಟ್ರೈನರ್​ ಆದಿತ್ಯ ಅಜಯ್​ ಕಪೂರ್​ ಎಂಬಾತನನ್ನು ಬಂಧಿಸಲಾಗಿದೆ.
ಮುಂಬೈನ ಕಫ್ ಪರೇಡ್ ಪೊಲೀಸ್​ ಠಾಣೆಯಲ್ಲಿ 24 ವರ್ಷದ ನಟಿಯು ಅಜಯ್ ಕಪೂರ್ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧನ ಮಾಡಲಾಗಿದೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 376, 323, 504, 506 (2), 67 ಮತ್ತು 67 (ಎ) ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 2021 ಮತ್ತು 2022ರ ನಡುವಿನ ಅವಧಿಯಲ್ಲಿ ಅನೇಕ ಬಾರಿ ಅಜಯ್​ ಕಪೂರ್​, ನಟಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್​ ಮೂಲಗಳ ಪ್ರಕಾರ, ಅಜಯ್​ ಕಪೂರ್​ ತನ್ನ ಸಾಮಾನ್ಯ ಸ್ನೇಹಿತನ ಮೂಲಕ ಮುಂಬೈ ಉಪನಗರದ ಬಾಂದ್ರಾದ ನಿವಾಸದಲ್ಲಿ ಸಂತ್ರಸ್ತ ನಟಿಯನ್ನು ಭೇಟಿ ಮಾಡಿದ್ದ. ನಟಿಯು ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಇಬ್ಬರ ಭೇಟಿ 2021ರ ಆಗಸ್ಟ್​ನಲ್ಲಿ ನಡೆದಿತ್ತು. ಬಳಿಕ ಇಬ್ಬರು ತಮ್ಮ ತಮ್ಮ ಫೋನ್​ ನಂಬರ್​ಗಳನ್ನು ವಿನಿಮಯ ಮಾಡಿಕೊಂಡರು. ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ತುಂಬಾ ಹತ್ತಿರವಾದರು.
ಲಾಕ್​ಡೌನ್​ ಸಮಯದಲ್ಲಿ ಕಫ್​ ಪರೇಡ್​ನ ಜೆ ಡಿ ಸೊಮಾನಿ ಮಾರ್ಗ್​ನಲ್ಲಿರುವ ಅಜಯ್​ ಕಪೂರ್​ ಮನೆಯಲ್ಲಿ ನಟಿ ಭೇಟಿಯಾಗುತ್ತಿದ್ದಳು. ಇಬ್ಬರ ನಡುವೆ ಆಪ್ತತೆ ಬೆಳೆದಾಗ, ಆರೋಪಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ಅದಕ್ಕೆ ನಟಿಯು ಒಪ್ಪಿಗೆ ನೀಡಿದ್ದು, ಕೆಲವು ದಿನಗಳ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಒಮ್ಮೆ ಇಬ್ಬರು ಗೋವಾದಲ್ಲಿ ಭೇಟಿಯಾಗಿದ್ದ ಸಮಯದಲ್ಲಿ ಲಾಡ್ಜ್‌ನಲ್ಲಿಯೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ನಟಿ ಮದುವೆಯಾಗುವಂತೆ ಕೇಳಿದಾಗ ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸುವಂತೆ ಅಜಯ್​ ಕಪೂರ್​ ಒತ್ತಾಯಿಸಿದ. ಆಕೆ ನಿರಾಕರಿಸಿದಾಗ ನಿಂದಿಸಿ ಹಲ್ಲೆಗೆ ಮುಂದಾದ. ಅಲ್ಲದೆ, ಅನೇಕ ಬಾರಿ ನಟಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದು, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವೈರಲ್​ ಮಾಡುವುದಾಗಿಯೂ ಮತ್ತು ಕೊಲೆ ಮಾಡುವುದಾಗಿಯು ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆಯ ಪಾಲಕರ ಫೋನ್ ನಂಬರ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ. ಕಿರುಕುಳದಿಂದ ಬೇಸತ್ತು ಮಹಿಳೆ ಕೊನೆಗ ಪೊಲೀಸರನ್ನು ಸಂಪರ್ಕಿಸಿದಳು.
ಕಳೆದ ಜನವರಿಯಲ್ಲಿ ಆತನ ಅಪಾರ್ಟ್​ಮೆಂಟ್​ಗೆ ಹೋಗಿ ನೆಲೆಸಿದ್ದ ಸಂತ್ರಸ್ತ ನಟಿ, ಆತನ ನಿಂದನಾತ್ಮಕ ವರ್ತನೆಯನ್ನು ಸಹಿಸಲಾರದೇ ಮಾರ್ಚ್​ ತಿಂಗಳಲ್ಲಿ ಮನೆ ಬಿಟ್ಟು ಬಂದು ಪಾಲಕರ ಮನೆ ಸೇರಿಕೊಂಡಿದ್ದಳು. ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ. ಅದನ್ನು ಸಹಿಸಲಾರದೇ ಸಂತ್ರಸ್ತೆ ದೂರು ನೀಡಿದ್ದು, ಇದೀಗ ಆರೋಪಿಯ ಬಂಧನವಾಗಿದೆ.(ಏಜೆನ್ಸೀಸ್​)
ಎನ್​ಸಿಇಆರ್​ಟಿ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿಯ ದೀಕ್ಷಾಗೆ ಪ್ರಥಮ ಸ್ಥಾನ

ಪತ್ನಿಯ ಒಪ್ಪಿಗೆ ಪಡೆದು ತೃತೀಯಲಿಂಗಿಯ ಜತೆ ಮದುವೆ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!

ಸೆ.25ರಿಂದ ಬಿಗ್ ಬಾಸ್ 9ನೇ ಸೀಸನ್ ಪ್ರಸಾರ: ಹಳಬರು-ಹೊಸಬರ ಸಮ್ಮಿಲನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 4 =
Remember me
