ಹೈದರಾಬಾದ್​:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗಳನ್ನು ಆತಂಕದಿಂದಲೇ ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಆಘಾತವೇ ಕಾದಿತ್ತು. ಮಗಳನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಏನಾಗಿದೆ ಎಂದು ಹೇಳಿದಾಗ ತಾಯಿಯ ಹೃದಯವೇ ಬಿರಿಯಿತು. ಏಕೆಂದರೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಆಕೆಯ ಮಗಳ ಬಾಳಲ್ಲೇ ನಡೆದುಹೋಗಿದೆ.
ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್​ ಮೂಲಗಳ ಪ್ರಕಾರ ಜಿಲ್ಲೆಯ ಮೊಮಿನ್​ಪೇಟ್​ ಮಂಡಲದ ವ್ಯಕ್ತಿ ಮೂವರು ಮಕ್ಕಳನ್ನು ಹೊಂದಿದ್ದಾನೆ. ಮೊಮ್ಮಿನ್​​ಪೇಟ್​ನಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದ ವ್ಯಕ್ತಿ, ತನ್ನ ಪತ್ನಿಯೊಂದಿಗೆ ಪಟಂಚೆರುವಿನ ಫಾರ್ಮ್​ ಹೌಸ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್​ಡೌನ್​ ಸಮಯದಲ್ಲಿ ತನ್ನ ಮಕ್ಕಳನ್ನು ತಾವಿದ್ದಲ್ಲಿಗೆ ಕರೆಸಿಕೊಂಡಿದ್ದ. ಆದರೆ, ಆತನ ಕಾಮದೃಷ್ಟಿ 8ನೇ ತರಗತಿ ಓದುತ್ತಿದ್ದ ಹಿರಿಯ ಮಗಳ ಮೇಲೆ ಬಿದ್ದಿತ್ತು.
ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಮಗಳನ್ನು ಬೆದರಿಸಿ ಕಿರುಕುಳ ನೀಡಲು ಆರಂಭಿಸಿದ್ದ. ಅನೇಕ ಬಾರಿ ಮಗಳನ್ನೇ ತನ್ನ ಕಾಮತೃಷೆಗೆ ಪಾಪಿ ತಂದೆ ಬಳಸಿಕೊಂಡಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ, ಮಗಳ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದರಿಂದ ಆಕೆಯನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಳು. ಮಗಳನ್ನು ಪರೀಕ್ಷಿಸಿದ ವೈದ್ಯರು ನಿಮ್ಮ ಮಗಳೀಗ ಮೂರು ತಿಂಗಳ ಗರ್ಭಿಣಿ ಎಂದು ಹೇಳಿದಾಗ ತಾಯಿಯ ಹೃದಯ ಒಮ್ಮೆಲೆ ಸ್ಫೋಟಿಸಿದಂತಾಯಿತು.
ಬಳಿಕ ಮಗಳ ಬಳಿ ಏನಾಯಿತು ಎಂದು ಕೇಳಿದಾಗ ಸಂತ್ರಸ್ತೆ ತಂದೆಯ ಕರಾಳ ಮುಖವನ್ನು ಹೊರಗಾಕಿದಳು. ತಂದೆಯೇ ಮಗಳನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ಕೇಳಿದ ತಾಯಿ ಗಂಡನನ್ನು ಪ್ರಶ್ನಿಸಿದಾಗ, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಗರ್ಭಪಾತ ಮಾಡಿಸುವಂತೆ ಪತ್ನಿಯ ಕೈಯಲ್ಲಿ 20 ಸಾವಿರ ರೂ. ಹಣವನ್ನು ನೀಡಿದ್ದ. ಅದರಂತೆ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ತಾಯಿ ಗರ್ಭಪಾತ ಮಾಡುವಂತೆ ವೈದ್ಯರ ಬಳಿ ಕೇಳಿಕೊಂಡಿದ್ದಳು. ಅಲ್ಲದೆ, ಮಗಳ ಈ ಸ್ಥಿತಿಗೆ ಕಾರಣವಾದ ಗಂಡನ ಮೇಲೆಯೂ ಆಕೆ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪಟಂಚೆರುವಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಗರ್ಭಿಣಿ ಪತ್ನಿಯ ಹತ್ಯೆಗೆ ಯತ್ನಿಸಿ ಎದುರು ಮನೆ ದಂಪತಿಯನ್ನೂ ಕೊಂದ! ಇವನ ಮಾತು ಕೇಳಿದ್ರೆ ಅಹಸ್ಯ ಅನ್ನಿಸುತ್ತೆ

ಕಾಂಪ್ರೊಮೈಸ್ ಅನ್ನೋದು​ ಇಲ್ಲವೇ ಇಲ್ಲ ಎಂದ ಅರ್ಜುನ್ ಸರ್ಜಾ: ಮೀಟೂ ಪ್ರಕರಣ ಕುರಿತು ಏನೂ ಹೇಳದೆ ‘ಸತ್ಯ’ ತೆರೆದಿಟ್ರು..

ಡ್ರೈವಿಂಗ್​ ಲೈಸೆನ್ಸ್​ ಪಡೆದ ದೇಶದ ಮೊದಲ ಕುಬ್ಜ! ಅವಮಾನವೇ ಹೊಸ ಇತಿಹಾಸ ಬರೆಯಲು ಕಾರಣ

ಪ್ರೇಯಸಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಪ್ರಿಯಕರ ಆತ್ಮಹತ್ಯೆ! ತಡರಾತ್ರಿ ರುದ್ರಭೂಮಿಯಲ್ಲಿ ನಡೀತು ಹೃದಯವಿದ್ರಾವಕ ಘಟನೆ

ಯಾರಾಗಲಿದ್ದಾರೆ ಆರ್​ಸಿಬಿ ಕ್ಯಾಪ್ಟನ್​? ಇಲ್ಲಿದೆ ನೋಡಿ ಅಭಿಮಾನಿಗಳು ಹಾಗೂ ವಿಶ್ಲೇಷಕರ ಲೆಕ್ಕಾಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
