ಕೋಲ್ಕತ:ಪಶ್ಚಿಮ ಬಂಗಾಳದ ದುರ್ಗಾಪುರ ಯುವಕರು ವಿಚಿತ್ರ ಚಟವೊಂದಕ್ಕೆ ದಾಸರಾಗಿದ್ದಾರೆ. ದುರ್ಗಾಪುರದ ನಗರ ಕೇಂದ್ರ, ಬಿಧಾನ್​ನಗರ್​, ಬೆನಾಚಿಟಿ, ಮಚಿಪರಾ, ಸಿ ಝೋನ್​, ಎ ಝೋನ್​ ಸೇರಿದಂತೆ ಬಹುತೇಕ ಕಡೆಗಳಲ್ಲಿ ಇದ್ದಕ್ಕಿದ್ದಂತೆ ಕಾಂಡೋಮ್​ ಮಾರಾಟ ಅಧಿಕವಾಗಿರುವುದು ಎಲ್ಲರನ್ನು ಚಕಿತಗೊಳಿಸಿದ್ದು, ಎಲ್ಲರ ತಲೆಯಲ್ಲಿ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ.
ಈ ಕುತೂಹಲಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಅಂಗಡಿ ಮಾಲೀಕನೊಬ್ಬ ತಮ್ಮ ಪ್ರತಿನಿತ್ಯದ ಗ್ರಾಹಕರೊಬ್ಬರನ್ನು ಈ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಗ್ರಾಹಕ ಅಮಲೇರಿಸಿಕೊಳ್ಳಲು ಕಾಂಡೋಮ್​ ಖರಿದೀಸುತ್ತಿರುವುದಾಗಿ ಹೇಳಿದ್ದಾರೆ. ಈ ಹೊಸ ರೀತಿಯ ಚಟವನ್ನು ಕೇಳಿದ ಬಳಿಕ ದುರ್ಗಾಪುರದ ಮಂದಿ ತಬ್ಬಿಬ್ಬಾಗಿದ್ದಾರೆ.
ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಈ ಬಗ್ಗೆ ಮಾತನಾಡಿದ್ದಾರೆ. ಕಾಂಡೋಮ್​ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಇದು ತಂಬಾ ವ್ಯಸನಕಾರಿಯಾಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ದುರ್ಗಾಪುರದ ಆರ್​ಇ ಕಾಲೇಜು ಮಾಡೆಲ್​ ಸ್ಕೂಲ್​ ಕೆಮಿಸ್ಟ್ರಿ ಶಿಕ್ಷಕ ನೂರುಲ್ ಹಕ್ ಮತ್ತಷ್ಟು ಮಾಹಿತಿ ನೀಡಿದ್ದಾರೆ. ಬಿಸಿ ನೀರಿಯಲ್ಲಿ ಹೆಚ್ಚು ಸಮಯದವರೆಗೆ ಕಾಂಡೋಮ್​ ಅನ್ನು ನೆನೆಸಿದಾಗ, ತುಂಬಾ ಪ್ರಮಾಣದ ಸಾವಯವ ಅಣುಗಳನ್ನು ಆಲ್ಕೊಹಾಲ್​ಯುಕ್ತ ಸಂಯುಕ್ತಗಳಾಗಿ ವಿಭಜಿಸುವ ಕಾರಣದಿಂದಾಗಿ ಮಾದಕತೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಈ ಮುಂಚೆ 3 ರಿಂದ 4 ಪಾಕೆಟ್​ ಮಾರಾಟವಾಗುತ್ತಿತ್ತು. ಆದರೆ, ಈಗ ಯಾವುದೇ ಸ್ಟೋರ್​ ಹುಡುಕಿದರೂ ಕಾಂಡೋಮ್​ ಸಿಗುವುದು ಕಷ್ಟವಾಗಿದೆಯಂತೆ. 21 ನೇ ಶತಮಾನದ ಮಧ್ಯಭಾಗದಲ್ಲಿ ನೈಜೀರಿಯಾದಲ್ಲಿ ಕೇವಲ ಚಟದಿಂದಾಗಿ ಟೂತ್‌ಪೇಸ್ಟ್ ಮತ್ತು ಶೂ ಇಂಕ್ ಮಾರಾಟವು ಸಾಮಾನ್ಯಕ್ಕಿಂತ 6 ಪಟ್ಟು ಹೆಚ್ಚಾಗಿತ್ತು. ಇದೀಗ ಕಾಂಡೋಮ್​ ಆ ಪಟ್ಟಿಗೆ ಸೇರಿದೆ. ಆದರೆ, ಇದು ಗಂಭೀರ ಆರೋಗ್ಯ ಪರಿಣಾಮವನ್ನು ಬೀರಬಹುದು ಎಂಬ ಚಿಂತೆ ದುರ್ಗಾಪುರ ಆರೋಗ್ಯ ಇಲಾಖೆಗೆ ಕಾಡುತ್ತಿದೆ.(ಏಜೆನ್ಸೀಸ್​)
ಒಂಟಿ ಮಹಿಳೆಯರನ್ನು ಗುರಿಯಾಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ವಿಕೃತಿ ಮೆರಿತಿದ್ದ ಗ್ಯಾಂಗ್ ಬಂಧನ​

ಅಯ್ಯೋ ದೇವರೆ ಇದು ನೀವಾ? ಅಲ್ಲು ಅರ್ಜುನ್​ ನೋಡಿ ಒಂದು ಕ್ಷಣ ಕನ್ಫ್ಯೂಸ್​ ಆದ ಕಿರಿಕ್​ ಬ್ಯೂಟಿ!

ಜಾರ್ಖಂಡ್​ನ ಮೂವರು ಕಾಂಗ್ರೆಸ್​ ಶಾಸಕರಿದ್ದ ಕಾರಿನಲ್ಲಿ ರಾಶಿ ರಾಶಿ ಹಣ ವಶಕ್ಕೆ ಪಡೆದ ಬಂಗಾಳದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
