ಹಿಮಯತ್​ನಗರ:ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಮೂವರ ಪ್ರಾಣ ಉಳಿದಿರುವ ಘಟನೆ ಹೈದರಾಬಾದ್​ನ ನಾರಾಯಾಣಗುಡ ಏರಿಯಾದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಗೊಲ್ಕಂಡ ಸಂತರಾಮ್​ ಓರ್ವ ಉದ್ಯಮಿ. ಪತ್ನಿ ಶೋಭಾ, ಮೂವರು ಮಕ್ಕಳು, ಸೊಸೆಯಂದಿರುವ, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳ ಜತೆ ಆವಂತಿನಗರ ಪಾರ್ಕ್​ ಎದುರು ಡುಪ್ಲೆಕ್ಸ್​ ಮನೆಯಲ್ಲಿ ವಾಸವಿದ್ದಾರೆ. ಸಂತರಾಮ್​ ಮಕ್ಕಳು ಸಹ ವ್ಯಾಪಾರಿಗಳು.
ಒಟ್ಟು 15 ಮಂದಿ ಇರುವ ಕುಟುಂಬಕ್ಕಾಗಿ G + 2 ಮನೆಯನ್ನು ನಿರ್ಮಾಣ ಮಾಡಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂತರಾಮ್​ ಅವರ ಕಿರಿಯ ಮಗ ಶ್ರೀನಾಥ್​, ಪತ್ನಿ ದಿವ್ಯಾ ಮತ್ತು ಅವರ ಮಕ್ಕಳು ಮಾನ್ವಿ ಮತ್ತು ಮಹಾದೇವ್​ ವಿಕಾರ್​ಬಾದ್​ನಲ್ಲಿರುವ ಫಾರ್ಮ್​ ಹೌಸ್​ನಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿರಿ:ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!
ಸಂತರಾಮ್​ ಅವರ ಮಗ ಗೌರಿನಾಥ್​ ತನ್ನ ಪತ್ನಿ ಮೀನಾ ಮತ್ತು ಇಬ್ಬರು ಮಕ್ಕಳಾದ ಲೋಕೇಶ್​ (11) ಮತ್ತು ವಿಘ್ನೇಶ್​ (8) ಜತೆ ಮನೆಯ ಎರಡನೇ ಮಹಡಿಯಲ್ಲಿ ವಾಸವಿದ್ದರೆ, ಇನ್ನೊಬ್ಬ ಮಗ ಬದ್ರಿನಾಥ್​ ಮೊದಲನೇ ಮಹಡಿಯಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಸೋಮವಾರ ಮನೆಯಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ.
ಇದಾದ ಕೆಲವೇ ಕ್ಷಣಗಳಲ್ಲಿ ಹೊಗೆ ಇಡೀ ಮನೆಯನ್ನು ಆವರಿಸಿ ಬೆಂಕಿ ಹೊತ್ತಿಕೊಂಡಿದೆ. ಇದಾದ ತಕ್ಷಣ ಬದ್ರಿನಾಥ್​ ಬಾತ್​ರೂಮ್​ಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿದ್ದ ಗೋಪಿನಾಥ್ ಕುಟುಂಬ ಸಹ ಹೀಗೆ ಮಾಡಿದೆ.
ಜೀವ ಉಳಿಸಿದ ನಾಯಿ ಬೊಗಳುವ ಶಬ್ದಮನೆಯ ಮುಂದೆ ಬೀದಿ ನಾಯಿಗಳು ನಿಂತು ಬೊಗಳುವುದನ್ನು ನೋಡಿದ ಸ್ಥಳೀಯ ಹೊಗೆ ಆವರಿಸಿದ್ದನ್ನು ನೋಡಿ ತಕ್ಷಣ ಪೊಲೀಸ್​ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬದ್ರಿನಾಥ್​ ಅವರನ್ನು ಮೊದಲನೇ ಮಹಡಿಯ ಕಿಟಕಿ ಮುಖಾಂತರ ಹೊರಕ್ಕೆ ಕರೆತಂದರು.
ಇದನ್ನೂ ಓದಿರಿ:ತಿರುಪತಿಯ ಭಿಕ್ಷುಕನ ಮನೆಯಲ್ಲಿ ಕಂತೆ ಕಂತೆ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಿಕಾರಿಗಳು!
ಬೆಂಕಿಯನ್ನು ಆರಿಸಿ ಎರಡನೇ ಮಹಡಿಗೆ ಹೋದಾಗ ಬಾತ್​ರೂಮ್​ನಿಂದ ಬಂದ ಶಬ್ದ ಕೇಳಿ ಒಳಗಡೆ ಇದ್ದ ಗೋಪಿನಾತ್​ ಪತ್ನಿ ಮೀನಾ ಮತ್ತು ಇಬ್ಬರು ಮಕ್ಕಳನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಹೊರಗಡೆ ಇದ್ದ ಗೋಪಿನಾಥ್​ ಅವರನ್ನೂ ರಕ್ಷಣೆ ಮಾಡಿ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದುರಾದೃಷ್ಟವಶಾತ್​ ಗೋಪಿನಾತ್​ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರ ಘೋಷಿಸಿದರು.
ಸದ್ಯ ಗೌರಿನಾಥ್​ ಪತ್ನಿ ಮತ್ತು ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗೌರಿನಾಥ್​ ಮೃತದೇಹವನ್ನು ಒಸ್ಮಾನಿಯಾ ಶವಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮನೆಯಲ್ಲಿದ್ದ ಎಸಿಯಲ್ಲಿ ಶಾರ್ಟ್​ ಸೆರ್ಕ್ಯೂಟ್​ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!

ಕರೊನಾ ಸೋಂಕು ತಗುಲಿದ ಒಂದೇ ಗಂಟೆಯಲ್ಲಿ ಯುವ ವೈದ್ಯ ಸಾವು: ಒಂದೇ ದಿನ 50 ಡಾಕ್ಟರ್ಸ್​ ಡೆತ್​

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೃದ್ರೋಗ ತಜ್ಞ ಡಾ. ಕೆ.ಕೆ. ಅಗರ್ವಾಲ್ ಕೋವಿಡ್​ಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 19 =
Remember me
