ಜೆರುಸಲೇಮ್​:ಇಸ್ರೇಲ್​ ಮೇಲೆ ನಡೆದ ಪ್ಯಾಲೇಸ್ಟಿನಿಯನ್ ರಾಕೆಟ್​ ದಾಳಿ ವೇಳೆ ಕೇರಳ ಮೂಲದ ಮಹಿಳೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಮಂಗಳವಾರ ನಡೆದಿರುವುದಾಗಿ ಮೃತಳ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಸೌಮ್ಯ (31) ಮೃತ ದುರ್ದೈವಿ. ಈಕೆ ಆ್ಯಶ್​ಕೆಲೊನ್​ ನಗರದಲ್ಲಿ ವಾಸವಿದ್ದಳು. ಮಂಗಳವಾರ ಸಂಜೆ ತನ್ನ ಪತಿ ಸಂತೋಷ್​ರೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡುವಾಗ ರಾಕೆಟ್​ ನೇರವಾಗಿ ಸೌಮ್ಯ ಮನೆಯ ಮೇಲೇ ಬಿದ್ದಿದೆ.
ವಿಡಿಯೋ ಕಾಲ್​ ವೇಳೆ ನನ್ನ ಸಹೋದರ ಭಾರಿ ಶಬ್ದವನ್ನು ಕೇಳಿದರು. ಇದ್ದಕ್ಕಿದ್ದಂತೆ ಫೋನ್​ ಸಂಪರ್ಕ ಕಡಿತಗೊಂಡಿತು. ತಕ್ಷಣ ನಾವು ಅಲ್ಲಿಯೇ ಕೆಲಸದ ನಿಮಿತ್ತ ವಾಸವಿದ್ದ ಇತರೆ ಮಲಯಾಳಿಗಳನ್ನು ಸಂಪರ್ಕಿಸಿದೆವು. ಆ ಬಳಿಕ ಈ ದುರ್ಘಟನೆ ನಮಗೆ ತಿಳಿಯಿತು ಎಂದು ಸಂತೋಷ್​ ಸಹೋದರ ಸಾಜಿ ಮಾಹಿತಿ ನೀಡಿದ್ದಾರೆ.
ಸೌಮ್ಯ ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದವರು. ಕಳೆದ 7 ವರ್ಷಗಳಿಂದ ಇಸ್ರೇಲ್​ನಲ್ಲಿ ಮನೆ ಕೆಲಸ ಮಾಡುತ್ತಿದ್ದರು ಎಂದು ಅವಳ ಸಂಬಂಧಿಕರು ಹೇಳಿದ್ದಾರೆ.
ಇನ್ನು ಘಟನೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಆದರೆ, ಹೊಸದಾಗಿ ಶಾಸಕರಾಗಿ ಆಯ್ಕೆಯಾದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ನಾಯಕ ಮಣಿ ಸಿ ಕಪ್ಪನ್​ ಘಟನೆಯನ್ನು ಖಂಡಿಸಿದ್ದಾರೆ.
ಕಪ್ಪನ್​ ಅವರು ಬೆರೆದುಕೊಂಡಿರುವ ಫೇಸ್​ಬುಕ್​ ಪೋಸ್ಟ್​ ಮಾಹಿತಿ ಪ್ರಕಾರ ಸಾವಿರಾರು ಕೇರಳಿಗರು ಇಸ್ರೇಲ್​ನಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಬೇಕೆಂದು ಕಪ್ಪನ್​ ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಗೊಂದಲ ತಪ್ಪಿಸಿ: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ

ಶಿರೂರು ಮಠಕ್ಕೆ ಅನಿರುದ್ಧ ಸರಳತ್ತಾಯ ನೂತನ ಉತ್ತರಾಧಿಕಾರಿ; ಇಂದು ನಡೆಯಿತು ಪಟ್ಟಾಭಿಷೇಕದ ಪೂರ್ವಭಾವಿ ಕಾರ್ಯಕ್ರಮ

ಅಜ್ಜಿಯ ಅಜ್ಜಿಯೂ ಇಲ್ಲಿದ್ದಾರೆ! ಒಂದೇ ಚಿತ್ರದಲ್ಲಿದೆ ಐದು ತಲೆಮಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
