ಕೊಚ್ಚಿ:ರೈಲು ಹಳಿ ದಾಟುವಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು 21 ವರ್ಷದ ಯುವತಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಅಂಗಮಾಲಿ ರೈಲು ನಿಲ್ದಾಣದಲ್ಲಿ ಶುಕ್ರವಾರ (ಆ.12) ನಡೆದಿದೆ.
ಮೃತ ಯುವತಿಯನ್ನು ಅನು ಸಾಜನ್​ ಎಂದು ಗುರುತಿಸಲಾಗಿದೆ. ಈಕೆ ಅಂಗಮಾಲಿ ಪೀಚನಿಕಾದ್​ ಥೇಲಪಿಲ್ಲಿಯ ನಿವಾಸಿ. ಅಲುವಾದಿಂದ ಬರುತ್ತಿದ್ದ ರೈಲನ್ನು ನೋಡಿ ಮತ್ತೊಂದು ಹಳಿಗೆ ಹೋಗುವಾಗ ಚಲಕುಡಿಯಿಂದ ಅಲುವಾ ಕಡೆ ಹೋಗುತ್ತಿದ್ದ ರೈಲ್ವೆ ರಿಪೇರಿ ವ್ಯಾನ್​ ಡಿಕ್ಕಿ ಹೊಡೆಯಿತು. ಪರಿಣಾಮ ಕೆಳಗೆ ಬಿದ್ದ ಯುವತಿಯ ತಲೆಗೆ ಕಬ್ಬಿಣದ ರಾಡ್​ ಹೊಡೆದು ದುರಂತ ಸಾವಿಗೀಡಾಗಿದ್ದಾಳೆ.
ಅನು ಅಂಗಮಾಲಿ ಮಾರ್ನಿಂಗ್​ ಸ್ಟಾರ್​ ಕಾಲೇಜಿನ ವಿದ್ಯಾರ್ಥಿನಿ. ಪುರಸಭೆ ಬಸ್ ನಿಲ್ದಾಣದಲ್ಲಿ ಇಳಿಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹಳಿ ದಾಟಿದ ನಂತರ ಸಮೀಪದ ಕಾಲೇಜುಗಳಿಗೆ ಹೋಗುತ್ತಾರೆ. ಹೀಗೆ ದಾಟುವಾಗ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಕಳೆದ ಜುಲೈ 23ರಂದು ಇದೇ ರೀತಿಯ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿತ್ತು. ರೈಲ್ವೆ ಕ್ರಾಸ್​ ದಾಟುವಾಗ ರೈಲು ಡಿಕ್ಕಿ ಹೊಡೆದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದಳು. ಮೃತ ವಿದ್ಯಾರ್ಥಿನಿ ಹೆಸರು ನಂದಿತಾ. ಕಣ್ಣೂರಿನ ಕಾಕ್ಕಡ್​ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಂದಿತಾ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಕಣ್ಣೂರು ಕಡೆಗೆ ಹೊರಟ್ಟಿದ್ದ ಪರುಶುರಾಮ್​ ಎಕ್ಸ್​ಪ್ರೆಸ್​ ನಂದಿತಾಳಿಗೆ ಡಿಕ್ಕಿ ಹೊಡೆದಿತ್ತು.
ನಂದಿತಾ ರೈಲ್ವೆ ಕ್ರಾಸಿಂಗ್​ ದಾಟಿದ್ದಳು. ಆದರೆ, ಆಕೆಯ ಬ್ಯಾಗ್​ ರೈಲಿಗೆ ಸಿಲುಕಿದ್ದರಿಂದ ಆಕೆ ರೈಲಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಳು. ದುರಂತದ ಸಂಗತಿಯೆಂದರೆ, ನಂದಿತಾ ರೈಲಿಗೆ ಸಿಲುಕಿದಾಗ ಆಕೆಯ ತಾಯಿ ಮತ್ತೊಂದು ರೈಲು ದ್ವಾರದ ಬಳಿ ನಿಂತಿದ್ದರು. ಕಣ್ಣ ಎದುರಲ್ಲೇ ಮಗಳ ದುರ್ಮರಣವು ತಾಯಿಯ ಮನಸ್ಸನ್ನು ನುಚ್ಚು ನೂರು ಮಾಡಿದೆ.(ಏಜೆನ್ಸೀಸ್​)
ರೈಲ್ವೆ ಕ್ರಾಸಿಂಗ್ ವೇಳೆ ಎಕ್ಸ್​ಪ್ರೆಸ್​ ರೈಲು ಡಿಕ್ಕಿ: ತಾಯಿಯ ಕಣ್ಣೆದುರಲ್ಲೇ ಮಗಳ ಸಾವು, ಭಯಾನಕ ವಿಡಿಯೋ ಸೆರೆ

ಅಶ್ಲೀಲ ಮೆಸೇಜ್​ ಮೂಲಕ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ಗೆ ಕಿರುಕುಳ: ಕಿಡಿಗೇಡಿ ವಿರುದ್ಧ ದೂರು

ನಾಗರಹಾವಿನ ಹೆಡೆಯಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ! ಮಂಡ್ಯದಲ್ಲಿ ಎದೆ ಝಲ್​ ಅನ್ನಿಸೋ ಘಟನೆ, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
