ಕುನ್ನಿಕ್ಕೋಡ್​:ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಎ + ಮಾರ್ಕ್ಸ್​ ತೆಗೆದುಕೊಂಡು ಡಿಸ್ಟಿಂಕ್ಷನ್​ನಲ್ಲಿ ಪಾಸ್​ ಆಗಿದ್ದ ಹುಡುಗಿಯೊಬ್ಬಳು ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕೇರಳದ ಕುನ್ನಿಕ್ಕೋಡ್​ನಲ್ಲಿ ನಡೆದಿದೆ.
ಸಾನಿಗಾ (17) ಮೃತ ಹುಡುಗಿ. ಈಕೆ ಥಲವೂರ್​ ಮೂಲದ ಸನಲ್​ ಕುಮಾರ್​ ಮತ್ತು ಅನಿತಾ ದಂಪತಿಯ ಪುತ್ರಿ. ಅನಿತಾ ಮನ್ನಾರ್​ನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಥಲವೂರ್​ಗೆ ಬರುತ್ತಾರೆ. ಸನಲ್​ ಕಾರ್ಪೆಂಟರ್​ ಆಗಿದ್ದು, ಮನೆಗೆ ಬರುವುದು ರಾತ್ರಿ 8 ಗಂಟೆಯಾಗುತ್ತದೆ.
ಎಂದಿನಂತೆಯೇ ಬುಧವಾರ ರಾತ್ರಿಯು ಅನಿತಾ, ತಮ್ಮ ಮಗಳಿಗೆ ಕರೆ ಮಾಡಿದ್ದಾರೆ. ಆದರೆ, ಎಷ್ಟು ಬಾರಿ ಮಾಡಿದರೂ ಆಕೆ ಸ್ವೀಕರಿಸದಿದ್ದಾಗ, ನೆರೆಮನೆಯವರಿಗೆ ಫೋನಾಯಿಸಿದ್ದಾರೆ. ನೆರೆ ಮನೆಯವರು ಅನಿತಾ ಅವರ ಮನೆಯ ಬಳಿ ಬಂದಾಗ ಬಾಗಿಲು ಹಾಕಿತ್ತು. ಪರಿಶೀಲಿಸಿದಾಗ ಒಳಗಿನಿಂದ ಬಾಗಿಲು ಲಾಕ್​ ಆಗಿರುವುದು ನೆರೆಮನೆಯವರಿಗೆ ತಿಳಿಯುತ್ತದೆ. ಬಳಿಕ ಬಾಗಿಲನ್ನು ಮುರಿದು ಒಳಗೆ ನೋಡಿದಾಗ ಸಾನಿಗಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಡ್​ರೂಮ್​ನಲ್ಲಿ ಪತ್ತೆಯಾಗುತ್ತದೆ.
ಮನೆಯಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾನಿಗಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಕೇರಳದಲ್ಲಿ ಇಂದು ಪ್ರಥಮ ಪಿಯುಸಿಯ ಮಾದರಿ ಪರೀಕ್ಷೆ ಆರಂಭವಾಗಿದ್ದು, ಜೂನ್​ 13ರಂದು ವಾರ್ಷಿಕ ಪರೀಕ್ಷೆ ಶುರುವಾಗಲಿದೆ. ಆದರೆ, ಪರೀಕ್ಷೆ ಎದುರಿಸುವ ಬದಲು ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತದ ಸಂಗತಿಯಾಗಿದೆ.(ಏಜೆನ್ಸೀಸ್​)
VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

VIDEO| ಲಿವಿಂಗ್​ಸ್ಟೋನ್​ ಸಿಡಿಸಿದ ಬಿಗ್​ ಸಿಕ್ಸರ್​ ಚೆಂಡನ್ನು ತೆಗೆದುಕೊಡಲು ಕಾರ್ಮಿಕರೇ ಬರಬೇಕಾಯ್ತು!

ತಮಿಳುನಾಡಿನಿಂದ ಉತ್ತರ ಭಾರತೀಯರಿಗೆ ಗೇಟ್​ ಪಾಸ್​! ಡಿಜಿಪಿ ಶೈಲೆಂದ್ರ ಬಾಬು ಕೊಟ್ಟ ಸ್ಪಷ್ಟನೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 10 =
Remember me
