ಬೆರ್ಹಾಂಪುರ್:ಟಾಲಿವುಡ್​ ಬ್ಲಾಕ್​ಬಸ್ಟರ್​ “ಪುಷ್ಪ” ಸಿನಿಮಾ ಹಾಡಿಗೆ ಹೈಸ್ಕೂಲ್​ ವಿದ್ಯಾರ್ಥಿಗಳು ತರಗತಿಯಲ್ಲೇ ಡಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಮುಖ್ಯಶಿಕ್ಷಕಿಯನ್ನು ಸಸ್ಪೆಂಡ್​ ಮಾಡಿರುವ ಘಟನೆ ಒಡಿಶಾದ ಗಂಜಮ್​ ಜಿಲ್ಲೆಯಲ್ಲಿ ನಡೆದಿದೆ.
ಶೆರಾಗಡ ಬ್ಲಾಕ್​ನಲ್ಲಿರುವ ಬರಾಮುಂಡಲಿ ಹೈಸ್ಕೂಲ್​ನ ಸ್ಮಾರ್ಟ್​ ರೂಮ್​ನಲ್ಲಿ ಹತ್ತನೇ ತರಗತಿಯ ಹಲವಾರು ವಿದ್ಯಾರ್ಥಿಗಳು ಸೇರಿದ್ದರು. ಪರೀಕ್ಷೆಗೆ ಸಂಬಂಧ ಕೆಲವು ಸಲಹೆಗಳನ್ನು ನೀಡಿದ ಶಿಕ್ಷಕರು ಕೊಠಡಿಯನ್ನು ಮುಚ್ಚದೇ ಆಗೇ ತೆರಳಿದ್ದರು. ಬಳಿಕ ಅಲ್ಲಿಯೇ ಇದ್ದ ಕೆಲ ವಿದ್ಯಾರ್ಥಿಗಳು ಸ್ಮಾರ್ಟ್​ ಟಿವಿಗೆ ಮೊಬೈಲ್​ ಕನೆಕ್ಟ್​ ಮಾಡಿ ಪುಷ್ಪ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
14 ಮತ್ತು 24 ಸೆಕೆಂಡಿನ ಎರಡು ಡಾನ್ಸಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಿರುವ ಶ್ರೀವಳ್ಳಿ ಹಾಡಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿರುವುದು ವಿಡಿಯೋದಲ್ಲಿದೆ. ಶಾಲಾ ಪರಿವರ್ತನೆ ಯೋಜನೆಯಡಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ತರಗತಿಯಲ್ಲಿ ಅಳವಡಿಸಿದ್ದ ಎಲ್​ಇಡಿ ದೂರದರ್ಶನದಲ್ಲಿಯೇ ಪುಷ್ಪ ಚಿತ್ರದ ಹಾಡು ಮೊಳಗುತ್ತಿತ್ತು.
ಈ ಘಟನೆಯ ಬಳಿಕ ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಪಾಡಿ ಅವರಿಗೆ ಶೋಕಾಸ್​ ನೋಟಿಸ್ ಜಾರಿ ಮಾಡಿದರೂ ಸಹ ತೃಪ್ತಿಕರವಾಗಿ ಉತ್ತರಿಸದ ಕಾರಣ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಬಿನಿತಾ ಸೇನಾಪತಿ ತಿಳಿಸಿದ್ದಾರೆ.
ಈ ಘಟನೆಯ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಕರ್ತವ್ಯ ಲೋಪವೆಸಗಿರುವ ಇನ್ನೂ ಕೆಲವು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ:Ommcom News)

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − 12 =
Remember me
