ಅಥಿರಪ್ಪಿಲ್ಲಿ:ಇದು ಕೇರಳ ದಂಪತಿಯ ಜೀವನ ಪಯಣದ ಅಪರೂಪದ ಕತೆ. ಒಟ್ಟಿಗೆ ಓದುವ ಮೂಲಕ ಬದುಕಿನ ಜಂಟಿ ಪಯಣ ಆರಂಭಿಸಿದ ಈ ಜೋಡಿ, ಪ್ರೀತಿಸಿ, ಮದುವೆಯಾಗಿ, ಇದೀಗ ಒಟ್ಟಿಗೆ ಸರ್ಕಾರಿ ಕೆಲಸ ತೆಗೆದುಕೊಂಡು, ಕೆಲಸದಲ್ಲೂ ಒಂದೇ ಕಡೆ ಇರುವ ಮೂಲಕ ಬದುಕಿನುದ್ದಕ್ಕೂ ಜತೆಯಾಗಿಯೇ ಪಯಣ ಮುಂದುವರಿಸಿದ್ದಾರೆ.
ಜಾಕ್ಸನ್​ ಮತ್ತು ರಿಯಾ ಎಂಬುವರೇ ಆ ಅಪರೂಪದ ಜೋಡಿ. ಇಬ್ಬರು ಕೇರಳದ ಕೊಣ್ಣಕ್ಕುಜಿ ಅರಣ್ಯ ವಲಯದ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಸರ್ಕಾರಿ ಕೆಲಸಕ್ಕಾಗಿ ತೆರಬೇತಿ ಪಡೆಯುವ ಸಮಯದಲ್ಲಿ ಪರಿಚಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೇಮಾಂಕುವಾರ ಮದುವೆ ಆಗಿದ್ದಾರೆ. ಮದುವೆಯಾದ ಎರಡೇ ತಿಂಗಳಲ್ಲಿ ಇಬ್ಬರಿಗೂ ಕೊಣ್ಣಕ್ಕುಜಿ ಅರಣ್ಯ ವಲಯದಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಸಿಕ್ಕಿದೆ. ಇದೀಗ ಕೆಲಸ ಸಿಕ್ಕಿ ಒಂದೂವರೆ ವರ್ಷಗಳಾಗಿದ್ದು, ಇಬ್ಬರು ಒಟ್ಟಿಗೆ ಸರ್ಕಾರಿ ಸೇವೆ ಮುಂದುವರಿಸಿದ್ದಾರೆ.
ಇನ್ನು ಕೆಲಸದ ವೇಳೆ ದಂಪತಿ ಅನೇಕ ಥ್ರಿಲ್ಲಿಂಗ್​ ಮತ್ತು ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಅನೇಕ ಬಾರಿ ಕಾಡುಪ್ರಾಣಿಗಳ ಸಂಭವನೀಯ ದಾಳಿಯಿಂದ ಬಚಾವ್​ ಆಗಿದ್ದಾರೆ. ಒಮ್ಮೆ ಆನೆಗಳ ಹಿಂಡನ್ನು ಹಿಮ್ಮೆಟ್ಟಿಸಿ ಹೋಗುವಾಗ ಒಂದು ಆನೆ ಅವರ ವಿರುದ್ಧವೇ ತಿರುಗಿ ದಾಳಿ ಮಾಡಲು ಮುಂದಾಗಿತ್ತು. ಈ ಕ್ಷಣವನ್ನು ನೆನೆದರೆ ಈಗಲೂ ಭಯವಾಗುತ್ತದೆ ಎಂದು ದಂಪತಿ ಘಟನೆಯನ್ನು ಮೆಲಕು ಹಾಕಿದರು.
ಅಂದಹಾಗೆ ಜಾಕ್ಸನ್​ ಮತ್ತು ರಿಯ ಕೇರಳದ ಛಲಕ್ಕುಡಿ ಪಿಎಸ್​ಸಿ ಕೋಚಿಂಗ್​ ಸೆಂಟರ್​ನಲ್ಲಿ ಒಟ್ಟಿಗೆ ಅಧ್ಯಯನ ನಡೆಸಿದರು. ಅರಣ್ಯ ಇಲಾಖೆಯ ಬೀಟ್​ ಅರಣ್ಯಾಧಿಕಾರಿ ಪರೀಕ್ಷೆಗೆ ಇಬ್ಬರು ಪರೀಕ್ಷೆ ಬರೆದಿದ್ದರು. ಮದುವೆಯಾದ ಬಳಿಕ ಇಬ್ಬರಿಗೂ ಏಕಕಾಲದಲ್ಲಿ ಅಪಾಯನ್ಮೆಂಟ್​ ಲೆಟರ್​ ಬಂದಿತ್ತು. ಇದೀಗ ಇಬ್ಬರು ಅರಣ್ಯ ರಕ್ಷಕರಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ತಾಲಿಬಾನ್​ನಿಂದ ಶಿಕ್ಷೆಯ ವಿಧಾನ ಬಹಿರಂಗ: ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ರೆ ಹೀಗಿರಲಿದೆಯಂತೆ ದಂಡನೆ!

ಇರಲಾರದೆ ಇರುವೆ ಬಿಟ್ಟುಕೊಂಡ ಕತೆಯಿದು! ತಳಕು ಬಳಕು​ ವಿಡಿಯೋಗಳಿಗೆ ಮರುಳಾದ್ರೆ ಆಗೋದು ಹೀಗೆ

ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್​ಗೆ ಬಂದಿದ್ದ ಯುವತಿಗಾಗಿ ಕಾದು ಕುಳಿತಿದ್ದ ಜವರಾಯ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − thirteen =
Remember me
