ವಿಜಯವಾಡ:ವಿವಿಧ ರೀತಿಯ ಕೋಳಿ ಮೊಟ್ಟೆಗಳನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಬಿಳಿ ಮೊಟ್ಟೆ ಮತ್ತು ಕಂದು ಮೊಟ್ಟೆ ಪ್ರಮುಖವಾದವು. ಕೆಲವು ಮೊಟ್ಟೆಗಳಲ್ಲಿ ಎರಡೆರಡು ಹಳದಿಯ ಲೋಳೆ ಇರುವುದನ್ನು ಗಮನಿಸಿದ್ದೇವೆ. ಗಾತ್ರದಲ್ಲೂ ಕೂಡ ವ್ಯತ್ಯಾಸ ಇರುವ ಮೊಟ್ಟೆಗಳನ್ನು ನೋಡಿದ್ದೇವೆ. ಕೆಲವು ಮೊಟ್ಟೆಗಳು ಊಹಿಸಿದಕ್ಕಿಂತ ದೊಡ್ಡದಾಗಿರುತ್ತವೆ. ಹಾಗೇ ಕೆಲವೊಂದು ಸಣ್ಣದಾಗಿಯು ಇರುತ್ತವೆ. ಏನೇ ಆದರೂ ಎಲ್ಲಾ ಮೊಟ್ಟೆಗಳು ದುಂಡಾಗಿರುತ್ತವೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ.
ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಮೊಟ್ಟೆ ಚಿತ್ರವನ್ನು ನೋಡಿದರೆ, ಒಮ್ಮೆ ನಿಮ್ಮ ಕಣ್ಣಗಳನ್ನು ನೀವೇ ನಂಬುವುದಿಲ್ಲ. ಹೌದು, ಕೋಳಿಯೊಂದು ವಿಚಿತ್ರ ಆಕಾರದ ಮೊಟ್ಟೆ ಇಟ್ಟಿರುವ ಪ್ರಸಂಗ ಆಂಧ್ರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪೂರ್ವ ಗೋದಾವರಿ ಜಿಲ್ಲೆಯ ವಿಆರ್​ ಪುರಂ ವಲಯದ ರಾಜುಪೇಟ ಕಾಲನಿಯಲ್ಲಿ ಮಂಜಪು ಸತ್ಯನಾರಾಯಣ ಎಂಬುವರು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ಅವರಿಗೆ ಎಲ್ಲ ದಿನಗಳಂತೆ ಕಳೆದ ಭಾನುವಾರ (ಮಾ.6) ಇರಲಿಲ್ಲ. ಏಕೆಂದರೆ ಆ ದಿನ ಅಚ್ಚರಿಯೊಂದು ಎದುರಾಗಿದೆ.
ಕೋಳಿಗಳು ಇಟ್ಟ ಮೊಟ್ಟೆಯನ್ನು ಭಾನುವಾರ ತೆಗೆದುಕೊಳ್ಳುವಾಗ ಒಂದು ವಿಚಿತ್ರ ಆಕಾರದ ಮೊಟ್ಟೆಯನ್ನು ಸತ್ಯನಾರಾಯಣ ಅವರು ನೋಡಿದ್ದಾರೆ. ಅದನ್ನು ನೋಡಿ ಒಂದು ಕ್ಷಣ ಅವರು ದಂಗಾಗಿದ್ದಾರೆ. ಇದೇನೋ ಮೊಟ್ಟೆಯೋ? ಅಥವಾ ಬೇರೆ ಏನಾದರೂ ಇರಬಹುದಾ ಎಂಬ ಗೊಂದಲಕ್ಕೆ ಸತ್ಯನಾರಾಯಣ ಒಳಗಾಗಿದ್ದರು. ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಮೊಟ್ಟೆ ಎಂಬುದು ಸ್ಪಷ್ಟವಾಗಿದೆ. ಮೊಟ್ಟೆ ವಿಚಿತ್ರ ಆಕಾರದಲ್ಲಿ ಸದ್ಯ ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಕೋಳಿಯು ಈ ರೀತಿ ವಿಚಿತ್ರ ಆಕಾರದಲ್ಲಿ ಮೊಟ್ಟೆ ಇಡಲು ಅನುವಂಶಿಕ ದೋಷಗಳು ಎಂದು ಪರಿಣಿತರು ಹೇಳಿದ್ದಾರೆ. ಆದರೂ ಇದೇ ಮೊದಲ ಬಾರಿಗೆ ಈ ರೀತಿಯ ಮೊಟ್ಟೆಯನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ.(ಏಜೆನ್ಸೀಸ್​)
ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಆಡಿಯೋ ಕ್ಲಿಪ್..!

ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​

ರಷ್ಯಾದ ಮಿಲಿಟರಿ ವಾಹನಗಳ ಮೇಲಿರುವ Z ಸಂಕೇತವು ಏನನ್ನು ಸೂಚಿಸುತ್ತದೆ? ಇಲ್ಲಿದೆ ರೋಚಕ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 14 =
Remember me
