ನವದೆಹಲಿ:ಪ್ರವಾದಿ ಮುಹಮ್ಮದ್​ ಬಗ್ಗೆ ಕಾಮೆಂಟ್​ ಮಾಡಿ ದೇಶಾದ್ಯಂತ ಮಾತ್ರವಲ್ಲದೆ, ಗಲ್ಫ್​ ರಾಷ್ಟ್ರಗಳಲ್ಲೂ ಆಕ್ರೋಶದ ಕಿಡಿ ಹೊತ್ತಿಸಿ, ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್​ ಶರ್ಮಾರನ್ನು ಶುಕ್ರವಾರ (ಜುಲೈ 1) ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್​, ಕೂಡಲೇ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ಸೂಚನೆ ನೀಡಿದೆ. ಅಲ್ಲದೆ, ದೇಶದಲ್ಲಿ ಈಗ ಏನು ನಡೆಯುತ್ತಿದೆಯೋ ಅದಕ್ಕೆ ಆಕೆಯೇ ಹೊಣೆ ಎಂದು ಉನ್ನತ ನ್ಯಾಯಾಲಯದ ಹೇಳಿದೆ.
ಅವರನ್ನು (ನೂಪುರ್​ ಶರ್ಮಾ) ಹೇಗೆ ಪ್ರಚೋದಿಸಲಾಯಿತು ಎಂಬ ಮಾಧ್ಯಮ ಚರ್ಚೆಯನ್ನು ನಾವು ಕೂಡ ನೋಡಿದ್ದೇವೆ. ಆದರೆ, ಅದಕ್ಕೆ ಆಕೆ ಪ್ರತಿಕ್ರಿಯಿಸಿದ ರೀತಿ ಮತ್ತು ತಾನೂ ಕೂಡ ವಕೀಲೆ ಎಂದು ಹೇಳಿಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ದೇಶದ ಜನತೆಯ ಮುಂದೆ ಆಕೆ ಕ್ಷಮೆಯಾಚಿಸಲೇಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್​ ಹೇಳಿದ್ದಾರೆ.
ತನ್ನ ವಿರುದ್ಧ ದಾಖಲಾಗಿರುವ ಎಲ್ಲ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಯಿಸಲು ಕೋರಿ ಸುಪ್ರಿಂಕೋರ್ಟ್​ಗೆ ನೂಪುರ್​ ಶರ್ಮಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಪ್ರತಿಕ್ರಿಯಿಸಿ, ತರಾಟೆಗೆ ತೆಗೆದುಕೊಂಡಿತು. ಜೀವ ಬೆದರಿಕೆ ಇರುವುದರಿಂದ ಎಫ್​ಐಆರ್​ಗಳನ್ನು ದೆಹಲಿಗೆ ವರ್ಗಾಹಿಸಲು ನೂಪುರ್​ ಶರ್ಮಾ ಕೇಳಿಕೊಂಡಿದ್ದಾರೆ ಎಂದು ಅವರ ಪರ ವಕೀಲ ಸಿಂಗ್​ ಕೋರ್ಟ್​ ಮುಂದೆ ವಿವರಿಸಿದರು.
ದೇಶಾದ್ಯಂತ ಭಾವನೆಗಳನ್ನು ಪ್ರಚೋದಿಸಿದ ಕಾರಣದಿಂದ ಅವರು (ನೂಪುರ್​ ಶರ್ಮಾ) ಬೆದರಿಕೆಗಳನ್ನು ಎದುರಿಸುತ್ತಿರಬಹುದು ಅಥವಾ ಭದ್ರತಾ ಬೆದರಿಕೆಗೆ ಒಳಗಾಗಿರಬಹುದು. ಇಂದು ದೇಶದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ಅವರೇ ಕಾರಣ ಎಂದು ಹೇಳುವ ಮೂಲಕ ಆಕೆಯ ಮನವಿಯನ್ನು ಕೋರ್ಟ್​ ವಜಾಗೊಳಿಸಿತು. ಈ ಸಂಬಂಧ ಯಾವುದೇ ಪರಿಹಾರವನ್ನು ಪಡೆಯಲು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಹೇಳಿತು.
ನೂಪುರ್ ಶರ್ಮಾ ಅವರು ಯಾವ ಸಂದರ್ಭಗಳಲ್ಲಿ ಕಾಮೆಂಟ್ ಮಾಡಿದ್ದಾರೆ ಎಂದು ವಕೀಲ ಸಿಂಗ್ ಸುಪ್ರೀಂಕೋರ್ಟ್​ ವಿವರಿಸಲು ಪ್ರಯತ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸುಪ್ರಿಂಕೋರ್ಟ್​, ಈ ಪ್ರಜಾಪ್ರಭುತ್ವದಲ್ಲಿ ಹುಲ್ಲು ಕೂಡ ಬೆಳೆಯಬೇಕು ಮತ್ತು ಅದನ್ನು ತಿನ್ನುವ ಹಕ್ಕು ಕತ್ತೆಗೆ ಇದೆ. ಹಾಗಂತ ಬೇಕಾಬಿಟ್ಟಿ ಬಿಡಲಾಗುವುದಿಲ್ಲ, ನಿಯಂತ್ರಣವೂ ಇರಬೇಕು. ಅದೇ ರೀತಿ ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ. ಸ್ವಲ್ಪ ನಿಯಂತ್ರಣ ಇರಬೇಕು ಎಂದು ಸುಪ್ರೀಂಕೋರ್ಟ್​ ಬುದ್ಧಿಮಾತು ಹೇಳಿತು.
ಈಗಾಗಲೇ ನೂಪುರ್ ಶರ್ಮಾ​ ಕ್ಷಮೆಯಾಚಿಸಿ ತನ್ನ ಕಾಮೆಂಟ್‌ಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ವಕೀಲ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್​, ಅವರು ಟಿವಿಗೆ ಹೋಗಿ ರಾಷ್ಟ್ರದ ಕ್ಷಮೆ ಕೇಳಬೇಕಿತ್ತು. ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ತುಂಬಾ ತಡವಾಗಿದೆ. ಇವರು ಯಾವುದೇ ಧಾರ್ಮಿಕ ವ್ಯಕ್ತಿಗಳಲ್ಲ, ಆದರೂ ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾರೆ ಎಂದು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿತು.(ಏಜೆನ್ಸೀಸ್​)
ವಿದ್ಯಾಸಾಗರ್​ ಜತೆ ಮದುವೆ ಆಗಲು ಮೊದ ಮೊದಲು ನಿರಾಕರಿಸಿದ್ದ ಮೀನಾ ಮತ್ತೆ ಅವರನ್ನೇ ಮದುವೆ ಆಗಿದ್ದೇಕೆ?

ಮೇ 30ರಂದು ನಡದೇ ಹೋಯಿತು ಯಾರೂ ಊಹಿಸದ ಘಟನೆ: 1 ತಿಂಗಳ ಬಳಿಕ ಯುವತಿ ದುರಂತ ಸಾವು

ಪಿಯುಸಿ ಮರು ಪರೀಕ್ಷೆಯಲ್ಲೂ ಫೇಲ್​ ಆಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + seven =
Remember me
