ಸೂರತ್​:ಹದಿಹರೆಯದ ಹುಡುಗನೊಬ್ಬ ಲಿಫ್ಟ್​ ಒಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೂರತ್​ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಸಂತ್ರಸ್ತ ಬಾಲಕಿಯ ವಯಸ್ಸು 12. ಲೈಂಗಿಕ ದೌರ್ಜನ್ಯ ಎಸಗಿದ ಹುಡುಗನ ವಯಸ್ಸು ಕೇವಲ 16. ಸಂತ್ರಸ್ತೆಯು ಸೂರತ್​ನ ದಿಂಡೋಲಿ ಪೆವಲಿಯನ್​ ಪ್ಲಾಜಾದ ನೆಲಮಾಳಿಯಲ್ಲಿ ಟೀ ಮಾರಾಟ ಮಾಡುವವನ ಪುತ್ರಿ. 8ನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆ 10.30ಕ್ಕೆ ಸಂತ್ರಸ್ತೆ, ಪೆವಲಿಯನ್​ ಪ್ಲಾಜಾದ ಮೂರನೇ ಮಹಡಿಯಲ್ಲಿರುವ ಕಾಳಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಲು ಲಿಫ್ಟ್​ ಪ್ರವೇಶಿಸಿದ್ದಳು.
11.30ಕ್ಕೆ ಲಿಫ್ಟ್​ನಿಂದ ಹೊರ ಹೋಗುವಾಗ ಆಕೆಯನ್ನು ಹುಡುಗನೊಬ್ಬ ಕೈಹಿಡಿದು ದಿಢೀರನೇ ಲಿಫ್ಟ್​ ಒಳಗೆ ಎಳೆದುಕೊಂಡಿದ್ದಾರೆ. ಬಾಲಕಿ ಲಿಫ್ಟ್​ ಬಾಗಿಲು ತೆರೆಯಲು ಯತ್ನಿಸಿದರು ಆತ ಬಿಡಲಿಲ್ಲ. ಆಕೆಯನ್ನು ಲಿಫ್ಟ್​ ಒಳಗೆ ತಬ್ಬಿಕೊಂಡು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಬಾಲಕಿ ಯತ್ನಿಸಿದ್ದಾಳೆ. ಆದರೆ, ಆಕೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಲಿಫ್ಟ್​ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ನಡೆದ ಘಟನೆಯಿಂದ ಮನನೊಂದು ಬಾಲಕಿ ಅಳುತ್ತಾ ಮನೆಗೆ ಹೋಗಿದ್ದಾಳೆ. ಏನಾಯಿತು ಎಂದು ಪಾಲಕರು ಕೇಳಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಪಾಲಕರು ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ದಾಖಲಾಗಿದ್ದಾರೆ. ದಿಂಡೋಲಿ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕೆ ಲಿಫ್ಟ್​ ಒಳಗಡೆ ಅಳವಡಸಿದ್ದ ಸಿಸಿಟಿವಿ ಕ್ಯಾಮೆರಾ ನೆರವಾಯಿತು.(ಏಜೆನ್ಸೀಸ್​)
(ವಿಡಿಯೋ ಕೃಪೆ: ನ್ಯೂಸ್​ 18 ಗುಜರಾತಿ)
સુરતમાં 13 વર્ષની બાળકી સાથે છેડતી
ડિંડોલીમાં એપારમેન્ટની લિફ્ટમાં બનાવ બન્યો
એકલતાનો લાભ લઈ બાળકી સાથે છેડતી થઈ#Suratpic.twitter.com/97NBdR68TI
— News18Gujarati (@News18Guj)June 3, 2022

ಮತ್ತೆ ಬಂದ ಸುನೀಲ್; 12 ವರ್ಷಗಳ ನಂತರ ‘ತುರ್ತು ನಿರ್ಗಮನ’ದಲ್ಲಿ ನಟನೆ

ಮ್ಯಾನೇಜರ್​ ಜತೆ ಚೆನ್ನಾಗಿದ್ರೆ ಜಾಸ್ತಿ ಹಣ ಕೊಡ್ತೀವಿ… ಸೋಶಿಯಲ್​ ಮೀಡಿಯಾ ಸೆಲೆಬ್ರಿಟಿಯ ಕಹಿ ಅನುಭವ

ಮದ್ವೆಯಾಗಿದ್ರೂ ಪರವಾಗಿಲ್ಲ ತೆಲುಗು ಸ್ಟಾರ್​ ನಟ ಒಪ್ಪಿದ್ರೆ ಈಗಲೂ ಡೇಟಿಂಗ್​ಗೆ ರೆಡಿ ಅಂದ್ರು ವಿಶ್ವ ಸುಂದರಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 9 =
Remember me
