ಹೈದರಾಬಾದ್​:ತಾಯ್ನಾಡಿಗೆ ಮರಳುವ ಆಸೆಯಿಂದ ಮನೆಯವರಿಗೆ ಉಡುಗೊರೆ ತರಲು ಶಾಪಿಂಗ್​ಗೆ ಹೋಗಿದ್ದ ತೆಲಂಗಾಣ ಮೂಲದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಅಮೆರಿಕದ ಬಕಿ ರಾಜ್ಯದ ಓಹಿಯೋದಲ್ಲಿ ನಡೆದಿದೆ.
ಮೃತ ಯುವಕನನ್ನು ಚಿರು (22) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಸೂರ್ಯಪೇಟೆಯ ನಿವಾಸಿ. ಓಹಿಯೋ ನಗರದಲ್ಲಿ ವಾಸವಿದ್ದ. ಡಿಸೆಂಬರ್​ 15ರಂದು ತಾಯ್ನಾಡಿಗೆ ಮರಳಲು ಸಿದ್ಧವಾಗಿದ್ದ. ಈ ಹಿನ್ನೆಲೆಯಲ್ಲಿ ಮನೆಯವರಿಗೆ ಉಡುಗೊರೆ ತರಲೆಂದು ಯುವತಿಯೊಬ್ಬಳ ಜತೆ ಶಾಪಿಂಗ್​ಗೆ ಹೋಗಿದ್ದ.
ಮನೆಯಿಂದ ಹೊರಟ ಚಿರುವಿನ ಕಾರು ಸ್ಕಿಡ್​ ಆಗಿ ಎದುರಿಗೆ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಾಯಿ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್​ ಡಿಗ್ರಿ ಓದುತ್ತಿದ್ದ. ಚಿರು ಸೂರ್ಯಪೇಟೆಯ ನಲ್ಲಲಬಾವಿ ನಿವಾಸಿಗಳಾದ ನರೇಂದ್ರುನಿ ಲಿಂಗಮೂರ್ತಿ ಮತ್ತು ಸುಧಾ ದಂಪತಿಯ ಪುತ್ರ. ಗಂಭೀರ ಗಾಯಗೊಂಡಿರುವ ಯುವತಿ ತೆಲಂಗಾಣದ ನಲ್ಗೊಂಡ ಮೂಲದವಳು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಮಾಡೆಲ್​ಗಳಿಬ್ಬರ ದುರಂತ ಸಾವು​: ಆರೋಪಿ ಮೊಬೈಲ್​ನಲ್ಲಿ ಪತ್ತೆಯಾಯ್ತು ಭಯಾನಕ ವಿಡಿಯೋಗಳು!

VIDEO| ಪಾರ್ಕಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವರ್ತನೆಗೆ ಸ್ಥಳೀಯರ ಆಕ್ರೋಶ

13 ದೇಶಕ್ಕೆ ಹಬ್ಬಿದ ಒಮಿಕ್ರಾನ್: ಅತಿ ಹೆಚ್ಚಿನ ಅಪಾಯ, ಡಬ್ಲ್ಯುಎಚ್​ಒ ಗಂಭೀರ ಎಚ್ಚರಿಕೆ..

Sign in to your account
Please enter an answer in digits:1 × one =
Remember me
