ಲಖನೌ:ಸರೆಗಮ ಮ್ಯೂಸಿಕ್​ ಕಂಪನಿಯು ಇತ್ತೀಚೆಗಷ್ಟೇ ಬಾಲಿವುಡ್​ ಹಾಟ್​ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಸೊಂಟ ಬಳುಕಿಸಿರುವ ವಿಡಿಯೋ ಆಲ್ಬಂ ಬಿಡುಗಡೆ ಮಾಡಿತ್ತು. ಆ ವಿಡಿಯೋ ಸಾಂಗ್​ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಂಶವಿದೆ ಮತ್ತು ವಿಡಿಯೋವನ್ನು ಈ ಕ್ಷಣದಲ್ಲೇ ಬ್ಯಾನ್​ ಮಾಡುವಂತೆ ಸಾಕಷ್ಟು ಆಗ್ರಹಗಳು ಕೇಳಿಬಂದಿತ್ತು. ಅಲ್ಲದೆ, ಸನ್ನಿ ಲಿಯೋನ್​ಗೆ ಎಚ್ಚರಿಕೆ ಸಂದೇಶಗಳು ಹರಿದುಬಂದಿತ್ತ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರೆಗಮ ಕಂಪನಿ ಮುಂದಿನ ಮೂರು ದಿನಗಳಲ್ಲಿ ಹಾಡನ್ನು ಬದಲಾವಣೆ ಮಾಡುವುದಾಗಿ ಭರವಸೆ ನೀಡಿದೆ.
ಏನಿದು ವಿವಾದ?ಮಧುಬನ ಮೇ ರಾಧಿಕಾ ನಾಚೇ ಎಂಬ ಹಾಡನ್ನು ಮೂಲತಃ ಮೊಹಮ್ಮದ್ ರಫಿ ಅವರು 1960ರ ಕೊಹಿನೂರ್ ಚಲನಚಿತ್ರಕ್ಕಾಗಿ ಹಾಡಿದ್ದರು. ಅದೇ ಹಾಡನ್ನು ಇದೀಗ ವಿಡಿಯೋ ಆಲ್ಬಂ ಮಾಡಲಾಗಿದೆ. ಸರೆಗಮ ಮ್ಯೂಸಿಕ್ ಬುಧವಾರವಷ್ಟೇ “ಮಧುಬನ್” ಎಂಬ ಶೀರ್ಷಿಕೆ ಅಡಿಯಲ್ಲಿ ವಿಡಿಯೋ ಸಾಂಗ್​ ಅನ್ನು ಬಿಡುಗಡೆ ಮಾಡಿದೆ. ಕನಿಕಾ ಕಪೂರ್ ಮತ್ತು ಅರಿಂದಮ್ ಚಕ್ರವರ್ತಿ ಹಾಡಿರುವ ಆಲ್ಬಂ ಸಾಂಗ್​ನಲ್ಲಿ ಸನ್ನಿ ಲಿಯೋನ್ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ. ಈ ಹಾಡು ಕೃಷ್ಣ ಮತ್ತು ರಾಧಾ ನಡುವಿನ ಪ್ರೇಮದ ವಿಷಯದ ಮೇಲೆ ರಚನೆಯಾಗಿರುವುದರಿಂದ ಎಲ್ಲೆಡೆ ಆಕ್ರೋಶ ಕೇಳಿಬಂದಿತ್ತು.
ಅರ್ಚಕರ ಪ್ರತಿಭಟನೆಸನ್ನಿ ಲಿಯೋನ್​ ಅಶ್ಲೀಲ ಡಾನ್ಸ್​ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಈ ಕೂಡಲೇ ವಿಡಿಯೋ ಸಾಂಗ್​ ಅನ್ನು ಬ್ಯಾನ್​ ಮಾಡಬೇಕು ಎಂದು ಉತ್ತರ ಪ್ರದೇಶದ ಮಥುರಾ ಅರ್ಚಕರು ಒತ್ತಾಯಿಸಿದ್ದರು. ಬ್ಯಾನ್​ ಮಾಡಿ, ನಟಿಯ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ, ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಬೃಂದಾವನದ ಸಂತ ನಾವಲ್​ ಗಿರಿ ಮಹಾರಾಜ್​ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಸನ್ನಿ ಲಿಯೋನ್​, ದೃಶ್ಯವನ್ನು ಹಿಂಪಡೆದು ಸಾರ್ವಜನಿಕರ ಕ್ಷಮೆಯಾಚಿಸದಿದ್ದರೆ, ಆಕೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದರು.
ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಕೂಡ ಸನ್ನಿ ಲಿಯೋನ್ ಡಾನ್ಸ್ ವಿಡಿಯೋ ವಿರುದ್ಧ ಕಿಡಿಕಾರಿದ್ದರು. ಅವಹೇಳನಕಾರಿ ರೀತಿಯಲ್ಲಿ ಹಾಡನ್ನು ಪ್ರಸ್ತುತಪಡಿಸುವ ಮೂಲಕ ಬ್ರಿಜ್​ಭೂಮಿಯ ಪ್ರತಿಷ್ಠೆಯನ್ನು ಕೆಡಿಸಿದ್ದಾರೆ ಎಂದಿದ್ದರು.
ಸಚಿವರ ಎಚ್ಚರಿಕೆಮಧ್ಯಪ್ರದೇಶದ ಗೃಹಸಚಿವ ನಾರೋತ್ತಮ್​ ಮಿಶ್ರಾ ಕೂಡ ಎಚ್ಚರಿಕೆ ನೀಡಿದ್ದಾರೆ. ವಿಡಿಯೋವನ್ನು ತೆಗೆದು ಹಾಕಲು ಸನ್ನಿ ಲಿಯೋನ್​ಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ವಿಡಿಯೋದಿಂದ ಹಿಂದು ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ. ಕೆಲವರು ನಿರಂತರವಾಗಿ ಹಿಂದು ಭಾವನೆಗಳಿಗೆ ನೋವುಂಟು ಮಾಡುತ್ತಾರೆ. ರಾಧೆಗೆ ದೇವಾಲಯಗಳಿವೆ. ನಾವು ಆಕೆಯನ್ನು ಪ್ರಾರ್ಥಿಸುತ್ತೇವೆ. ಮೂರು ದಿನಗಳಲ್ಲಿ ವಿಡಿಯೋ ತೆಗೆಯದಿದ್ದರೆ ನಾನು ಕಾನೂನು ಸಲಹೆ ಮತ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ ತೆಗೆಯುವುದಾಗಿ ಕಂಪನಿ ಸ್ಪಷ್ಟನೆಮಧುಬನ ವಿಡಿಯೋ ಕುರಿತು ಇತ್ತೀಚೆಗೆ ಬಂದ ಸಾಕಷ್ಟು ಫೀಡ್​ಬ್ಯಾಕ್​ಗಳನ್ನು ಗಮನಿಸಿದ್ದೇವೆ. ನಮ್ಮ ದೇಶದ ಜನತೆಯ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಮಧುಬನ್​ ಹಾಡಿನ ಸಾಹಿತ್ಯ ಮತ್ತು ಹೆಸರನ್ನು ಬದಲಾಯಿಸುತ್ತೇವೆ. ಮುಂದಿನ ಮೂರು ದಿನಗಳಲ್ಲಿ ಬದಲಾದ ಹೊಸ ವಿಡಿಯೋ ಸಾಂಗ್​ ಆನ್​ಲೈನ್​ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸರೆಗಮ ಮ್ಯೂಸಿಕ್​ ಕಂಪನಿ ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿದೆ.(ಏಜೆನ್ಸೀಸ್​)
Announcement: 🙏pic.twitter.com/lOJotcd04p
— Saregama (@saregamaglobal)December 26, 2021


2022ರ ಕರಾಳ ಭವಿಷ್ಯವಿದು! ಈ ನಿಗೂಢ ಮಹಿಳೆಯ ಇದುವರೆಗಿನ ಬಹುತೇಕ ಭವಿಷ್ಯ ನಿಜವಾಗಿದೆ

ಡಿ.ಕೆ. ಶಿವಕುಮಾರ್​ಗೆ ಬ್ರೇಕ್ ಹಾಕಲು ದೆಹಲಿಯಲ್ಲಿ ಯತ್ನ: ಹೈಕಮಾಂಡ್​ಗೆ ದೂರಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರು

ಗ್ರಾಮವನ್ನೇ ನುಂಗಿದ ಭೂಗಳ್ಳ!; ಕೂಡಲಿ ಅಕ್ಷೋಭ್ಯ ಮಠದ ಆಸ್ತಿಯನ್ನು ದಾನಪತ್ರ ಮಾಡಿಸಿಕೊಂಡು ಅಕ್ರಮ

Sign in to your account
Please enter an answer in digits:11 + 8 =
Remember me
