ಚೆನ್ನೈ:ಬೇರೊಬ್ಬನ ಜೊತೆ ತನ್ನ ಪ್ರೇಯಸಿ ಮದುವೆ ಆಗುವುದನ್ನು ತಡೆಯಲು ಮಂಟಪಕ್ಕೆ ನುಗ್ಗಿದ 24 ವರ್ಷದ ಯುವಕ, ವರನ ಕೈಯಲ್ಲಿದ್ದ ತಾಳಿಯನ್ನು ಕಿತ್ತುಕೊಂಡು ತನ್ನ ಪ್ರೇಯಸಿಗೆ ಕೊರಳಿಗೆ ಕಟ್ಟಲು ಯತ್ನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮದುವೆ ಆಗುತ್ತಿದ್ದ ಯುವತಿ ಮತ್ತು ಯುವಕ ಇಬ್ಬರು ಚೆನ್ನೈನ ಐಷಾರಾಮಿ ಹೋಟೆಲ್​ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ನಿಲ್ಲಿಸಿ, ಕರೆದುಕೊಂಡು ಹೋಗುವಂತೆ ಯುವತಿ ಮೆಸೇಜ್​ ಮಾಡಿದ್ದಳು ಎಂಬ ಸಂಗತಿ ಪೊಲೀಸ್​ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪ್ರೇಯಸಿಯ ಮೆಸೇಜ್​ ನೋಡಿದ ಕೂಡಲೇ ಮದುವೆ ಮಂಟಪಕ್ಕೆ ತಲುಪಿದ ಯುವಕ, ವೇದಿಕೆಯತ್ತ ಧಾವಿಸಿ, ತನ್ನ ಪ್ರೇಯಸಿಗೆ ತಾಳಿ ಕಟ್ಟಲು ಮುಂದಾಗಿದ್ದ ವರ ಕೈಯಿಂದ ತಾಳಿಯನ್ನು ಕಿತ್ತುಕೊಂಡು, ಪ್ರೇಯಸಿಯ ಕೊರಳಿಗೆ ಕಟ್ಟಲು ಪ್ರಯತ್ನಿಸಿದ್ದಾನೆ. ಆದರೆ, ಅಲ್ಲಿಯೇ ಇದ್ದ ಜನರು, ಯುವಕನ್ನು ಎಳೆದುಕೊಂಡು ಬಂದು ಥಳಿಸಿದ್ದಾರೆಂದು ತಿಳಿದುಬಂದಿದೆ.
ಈ ಘಟನೆ ಶುಕ್ರವಾರ ಬೆಳಗ್ಗೆ ಚೆನ್ನೈನಲ್ಲಿರುವ ಮದುವೆ ಮಂಟಪವೊಂದರಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಯುವಕ ಮತ್ತು ಯುವತಿ ನಡುವೆ ಪ್ರೇಮ ಸಂಬಂಧ ಇರುವುದು ಮತ್ತು ಯುವತಿಯೇ ಮಸೇಜ್​ ಕಳುಹಿಸಿದ್ದರಿಂದ ಯುವಕ ಅಲ್ಲಿಗೆ ಹೋಗಿದ್ದಾಗಿ ಪೊಲೀಸರಿಗೆ ಗೊತ್ತಾಗಿದೆ.
ವರನ ಕುಟುಂಬದವರು ಮತ್ತು ಹುಡುಗಿ ಜಗಳವಾಡಿದ್ದರಿಂದ ಮದುವೆಯನ್ನು ರದ್ದುಗೊಳಿಸಲಾಯಿತು. ಒಳನುಗ್ಗಿದ ಯುವಕನ ಕುಟುಂಬ ಮತ್ತು ಹುಡುಗಿಯ ಕುಟುಂಬದ ನಡುವೆ ಮದುವೆ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಪ್ಲೀಸ್​ ಈ ಒಂದು ಪಾತ್ರ ಕೊಡಿ: ಮಾಧ್ಯಮಗಳ ಮುಂದೆಯೇ ಮನವಿ ಮಾಡಿಕೊಂಡ ನಟಿ ವರಲಕ್ಷ್ಮೀ

ಕೆರೆಗೆ ಹಾರಿ ಸಾವಿನ ಹಾದಿ ಹಿಡಿದ ನಿರ್ದೇಶಕ ಪುರಿ ಜಗನ್ನಾಥ್​ ಸಹಾಯಕ ನಿರ್ದೇಶಕ ಸಾಯಿ ಕುಮಾರ್​

ಗಣೇಶ ವಿಸರ್ಜನೆ ವೇಳೆ ಗಲಾಟೆ ಕೊಲೆಯಲ್ಲಿ ಅಂತ್ಯ! ಕಾಲೇಜು ವಿದ್ಯಾರ್ಥಿಗಳಿಂದ ಭಯಾನಕ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − one =
Remember me
