ಚೆನ್ನೈ:ಅಂತರ್ಜಾತಿ ವಿವಾಹ ಮಾಡಿಕೊಂಡು ಸುಂದರವಾದ ವೈವಾಹಿಕ ಜೀವನ ನಡೆಸುತ್ತಿದ್ದ ದಂಪತಿಗೆ ಯುವತಿ ಮನೆಯವರು ಮತ್ತೊಮ್ಮೆ ವಿಲನ್​ಗಳಾಗಿದ್ದಾರೆ. ಮಗಳನ್ನು ನೋಡಿದ ಕುಟುಂಬ ಆಕೆಗೆ ಥಳಿಸಿ ತಮ್ಮ ಮನೆಗೆ ಎಳೆದೊಯ್ದಿದ್ದು, ಪತ್ನಿಗೆ ಯುವಕ ಪರಿತಪಿಸುತ್ತಿದ್ದಾನೆ.
ಪಿ. ಸೆಲ್ವನ್​(25) ಮತ್ತು ಜೆ. ಎಲಮತಿ(23) ಈರೋಡ್​ ಜಿಲ್ಲೆಯ ಭವಾನಿ ಬಳಿಯ ಗ್ರಾಮದವರು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ನಂತರ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಸೇಲಂ ಜಿಲ್ಲೆಯ ಕೊಳತೂರು ಬ್ಲಾಕ್​ನ ಕವಲಂದಿಯೂರ್​ ಎಂಬಲ್ಲಿ ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಸಪ್ತಪದಿ ತುಳಿದಿದ್ದರು.
ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರಿಂದ ಎಲಮತಿ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಎಲಮತಿ ವಣ್ಣಿಯಾರ್​ ಜಾತಿಗೆ ಸೇರಿದರೆ, ಸೆಲ್ವನ್​ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ. ವಿರೋಧವಿದ್ದರೂ ಡ್ರಾವಿಡರ್​ ವಿದುಥಲೈ ಕಜಗಂ(ಡಿವಿಕೆ) ಸಂಘಟನೆಯ ಸದಸ್ಯ ಕವೈ ಈಶ್ವರನ್ ಮುಂದೆ ನಿಂತು ವಿವಾಹ ಕಾರ್ಯ ಮಾಡಿಸಿದ್ದರು. ಇದರ ಬೆನ್ನಲ್ಲೇ ಎಲಮತಿಯ ತಂದೆ 50 ಮಂದಿ ಜತೆ ಶಸ್ತ್ರಾಸ್ತ್ರಗಳೊಂದಿಗೆ ಬಲವಂತವಾಗಿ ಕವೈ ಈಶ್ವರನ್​ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಅಲ್ಲದೆ, ಮಗಳನ್ನು ಅಪಹರಿಸಿದ್ದರು. ಆದರೆ, ಪೊಲೀಸರ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿತ್ತು.
ಕಳೆದ ಒಂದು ವರ್ಷದಿಂದ ದಂಪತಿ ಸುಖಕರ ಜೀವನ ನಡೆಸುತ್ತಿದ್ದರು. ಹೀಗಿರುವಾಗ ಎಲಮತಿ ಕುಟುಂಬ ಆಕೆಯನ್ನು ನೋಡಿದೆ. ಬಳಿಕ ಆಕೆಯನ್ನು ಥಳಿಸಿ, ತಮ್ಮೊಂದಿಗೆ ಎಳೆದೊಯ್ದಿದೆ. ಇದರಿಂದ ದಿಕ್ಕೇ ತೋಚದಂತಾದ ಸೆಲ್ವನ್​, ಪತ್ನಿಯನ್ನು ಅಪಹರಿಸಿದ್ದಾರೆಂದು ದೂರು ನೀಡಲು ಪೊಲೀಸ್​ ಠಾಣೆಗೆ ತೆರಳಿದರೆ, ಅಲ್ಲಿಯೂ ಸಹ ದೂರು ದಾಖಲಿಸಿಕೊಳ್ಳದೇ ವಾಪಸ್ಸು ಕಳುಹಿಸಿದ್ದಾರೆ. ಎಲಮತಿ ಕುಟುಂಬ ಅಣ್ಣಾಡಿಎಂಕೆ ಪಕ್ಷದ ಮಾಜಿ ಸಚಿವರ ಆಪ್ತರಾಗಿರುವುದರಿಂದ ದೂರು ದಾಖಲಿಸಿಕೊಂಡಿಲ್ಲ.
ಇತ್ತೀಚೆಗಷ್ಟೇ ಸೆಲ್ವನ್​ಗೆ ವಾಟ್ಸ್​ಆ್ಯಪ್​ ಮಾಡಿರುವ ಎಲಮತಿ, ನನ್ನನ್ನು ಕೊಂದು ಬಿಡುತ್ತಾರೆ, ಹೇಗಾದರೂ ಕಾಪಾಡು ಎಂದು ಕೇಳಿಕೊಂಡಿದ್ದಾಳೆ. ಕೊನೆಗೆ ಯಾವುದೇ ದಾರಿ ಕಾಣದೆ ಸೆಲ್ವನ್​ ಮಾಧ್ಯಮಗಳು ಎದುರು ಬಂದು ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಾಧ್ಯಮಗಳು ಬಿಸಿ ಮುಟ್ಟಿಸಿದ ಬೆನ್ನಲ್ಲೇ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಅಂತರ್ಜಾತಿ ದಂಪತಿ ಅಪಹರಿಸಿ ಹಲ್ಲೆ: ತಪ್ಪಿಸಿಕೊಂಡ ವಿವಾಹಿತನಿಂದ ಪತ್ನಿ ನಾಪತ್ತೆ ದೂರು

VIDEO: ಒಂದು ವರ್ಷದ ಈ ಕಂದನ ತಿಂಗಳ ಸಂಪಾದನೆ 75 ಸಾವಿರ ರೂ! ಇಷ್ಟು ದುಡಿಯೋದು ಹೇಗೆ ಅಂತೀರಾ?

ಗಂಡ ಸತ್ತ ಬೆನ್ನಲ್ಲೇ ಯುವಕನ ಜತೆ ಸರಸವಾಡುವಾಗ ಸಿಕ್ಕಿಬಿದ್ದ ಮಹಿಳೆ: ಬಯಲಾಯ್ತು ಭಯಾನಕ ರಹಸ್ಯ..!

ಪ್ರಿಯಾಂಕಾ ಗಾಂಧಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಕಾನ್ಸ್‌ಟೆಬಲ್‌ಗಳಿಗೆ ಗ್ರಹಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 5 =
Remember me
