ಚೆನ್ನೈ:ಹಾವನ್ನು ಕೊಂದು ತಿನ್ನುವ ವಿಡಿಯೋ ರೆಕಾರ್ಡ್​ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ತಮಿಳುನಾಡಿನ ತಿರುನೆಲ್ವೇಲಿಯ ಪೆರುಮಾಲಪಟ್ಟಿ ಗ್ರಾಮದ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ವಡಿವೇಲು ಎಂಬಾತ ಹಾವನ್ನು ತಿನ್ನುತ್ತಿರುವ ದೃಶ್ಯವಿದ್ದು, ಮಹಾಮಾರಿ ಕರೊನಾ ಸೋಂಕಿಗೆ ಇದು ಒಳ್ಳೆಯ ಮರುಮದ್ದು ಎಂದು ವಾದಿಸಿದ್ದಾನೆ.
ವಿಡಿಯೋ ನೋಡಿ ಶಾಕ್​ ಆದ ಪರಿಸರವಾದಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ವಡಿವೇಲುನನ್ನು ಬಂಧಿಸಿದ್ದಾರೆ. ಅಲ್ಲದೆ, 7,500 ರೂಪಾಯಿ ದಂಡವನ್ನು ಸಹ ವಿಧಿಸಲಾಗಿದೆ.
ಮೈದಾನವೊಂದರಲ್ಲಿ ಹಾವನ್ನು ಹಿಡಿದಿದ್ದಾಗಿ ಮತ್ತು ಅದನ್ನು ಕೊಂದು ತಿಂದಿದ್ದಾಗಿ ವಿಚಾರಣೆ ವೇಳೆ ವಡಿವೇಲು ತಪ್ಪೊಪ್ಪಿಕೊಂಡಿದ್ದಾನೆ. ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಹಾವನ್ನು ಹಿಡಿದು ತಿಂದಿದ್ದಾಗಿ ಹೇಳಿಕೊಂಡಿದ್ದಾನೆ.
ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಅಘಾತಕಾರಿ ಎಂದು ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಾಣಿಗಳನ್ನು ಕೊಂದು ತಿನ್ನು ಅತ್ಯಂತ ಅಪಾಯಕಾರಿ. ಆ ಪ್ರಾಣಿಗಳಲ್ಲಿನ ರೋಗಕಾರಕಗಳು ಮತ್ತೊಬ್ಬರ ದೇಹಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.(ಏಜೆನ್ಸೀಸ್​)
ಕರೊನಾಗೆ ತಾಯಿ ಬಲಿ, ಅಮ್ಮನ ಶವದ ಮುಂದೆಯೇ ಮದ್ವೆಯಾದ ಮಗ! ಕಣ್ಣೀರು ತರಿಸುತ್ತೆ ಈ ಸ್ಟೋರಿ

ಕೂಲ್‌ಡ್ರಿಂಗ್ಸ್‌ ಬಾಟಲಿಯ ಮುಚ್ಚಳ ಜೇನ್ನೊಣ ತೆಗೆಯುವುದನ್ನು ಕಂಡಿದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ವಿಡಿಯೋ

ಇದಪ್ಪಾ ಅದೃಷ್ಟ ಅಂದ್ರೆ! ಲಾಕ್​ಡೌನ್​ ಮಧ್ಯೆಯೂ ಒಂದೇ ದಿನದಲ್ಲಿ ಲಕ್ಷಾಧಿಪತಿಯಾದ ರೈತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
