ಚೆನ್ನೈ:ರಸ್ತೆಯಲ್ಲಿ ಉಗುಳಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಪೊಲೀಸ್​ ಕಾನ್ಸ್​ಟೇಬಲ್​ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಜಯಚಂದ್ರನ್​ ಎಂದು ಗುರುತಿಸಲಾಗಿದೆ. ತುಟಿ ಕಿತ್ತು ಹೋಗಿದ್ದು, ಗಲ್ಲದಲ್ಲಿ ಗಾಯಗಳಾಗಿವೆ. ಸಂತ್ರಸ್ತ ಜಯಚಂದ್ರನ್​ ಸರ್ಕಾರಿ ಬಸ್​ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನ್ಸ್​ಟೇಬಲ್​ ಲೂಯಿಸ್​ ಹಲ್ಲೆ ಮಾಡಿದರೆಂದು ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗಿದೆ. ವೈರಲ್ ವಿಡಿಯೋದಲ್ಲಿ, ಪೊಲೀಸರು ಜಯಚಂದ್ರನನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸುತ್ತಿರುವುದು ಮತ್ತು ಘಟನೆಯ ಸ್ಥಳದಿಂದ ಅವರನ್ನು ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ರಸ್ತೆಯಲ್ಲಿ ಉಗುಳಿದ್ದಕ್ಕೆ ಸುಮಾರು ಒಂದು ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಜಯಚಂದ್ರನ್​ ಆರೋಪ ಮಾಡಿದ್ದಾರೆ.
ಆದರೆ, ಜಯಚಂದ್ರನ್​ ಮಾಡಿದ ಆರೋಪವನ್ನು ಕಾನ್ಸ್​ಟೇಬಲ್​ ನಿಕಾರಿಸಿದ್ದಾರೆ. ಅಲ್ಲದೆ, ಆತ ಉಗುಳಿದ್ದು ರಸ್ತೆಯ ಮೇಲಲ್ಲ, ನನ್ನ ಮೇಲೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಕಾನ್ಸ್​ಟೇಬಲ್​ ಲೂಯಿಸ್, ಸಂತ್ರಸ್ತನಿಗೆ ಬೆದರಿಕೆ ಹಾಕುತ್ತಿರುವುದು ಸೆರೆಯಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯ ನಿವಾಸಿಗಳು ಪೊಲೀಸರನ್ನು ಪ್ರಶ್ನಿಸಿದರು. ಇದಾದ ಬಳಿಕ ಪೊಲೀಸರು ಗುಂಪನ್ನು ಚದುರಿಸಿದರು. ಈ ಸಂಬಂಧ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.(ಏಜೆನ್ಸೀಸ್​)
ಹಿಂದು ಯುವಕ-ಮುಸ್ಲಿಂ ಯುವತಿಯ ಲವ್ ಸ್ಟೋರಿ: ಮದುವೆಯಾದ ಬಳಿಕ ನಡೀತು ಭಾರೀ ಹೈಡ್ರಾಮಾ!

ರೈಲು ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಬಿದ್ದ ಯುವತಿ: ಬಾಯ್​ಫ್ರೆಂಡ್​ ಜತೆಗಿನ ವೀಕೆಂಡ್​ ಮೋಜು ದುರಂತ ಅಂತ್ಯ

ಇನ್ನೊಂದಿಷ್ಟು ಇಲ್ಲಿವೆ…ಮತ್ತಷ್ಟು ಹಾಟ್​ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಸವಾಲೆಸೆದ ಇರಾ ಖಾನ್​!

ಮೇ 18 ರಿಂದ ರಾಜ್ಯದಲ್ಲಿ ಭಾರೀ ಮಳೆ: ಕರಾವಳಿ, ಮಲೆನಾಡಲ್ಲಿ ಆರೆಂಜ್ ಅಲರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
