ಕೀಯೆವ್​​/ಮಾಸ್ಕೋ/ಚೆನ್ನೈ:ಯೂಕ್ರೇನ್​ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ವಿರುದ್ಧ ಹೋರಾಡಲು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ವಿದ್ಯಾರ್ಥಿಯೊಬ್ಬ ಯೂಕ್ರೇನ್​ಗೆ ಪ್ಯಾರಾ ಮಿಲಿಟರಿ ಪಡೆಗೆ ಸೇರಿದ್ದಾರೆ.
ವಿದ್ಯಾರ್ಥಿಯನ್ನು ಸೈನಿಕೇಶ್​ ರವಿಚಂದ್ರನ್​ ಎಂದು ಗುರುತಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ತಮಿಳುನಾಡಿನ ಅಧಿಕಾರಿಗಳು ಸೈನಿಕೇಶ್​ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸೈನಿಕೇಶ್​ಗೆ ಭಾರತೀಯ ಸೇನೆಗೆ ಸೇರಲು ಆಸೆ ಇತ್ತು. ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕರಿಸಲಾಯಿತು ಎಂದು ತಿಳಿದುಬಂದಿದೆ.
2018ರಲ್ಲಿ ಸೈನಿಕೇಶ್​ ಯೂಕ್ರೇನ್​ಗೆ ತೆರಳಿದ್ದಾರೆ. ಖಾರ್ಕೀವ್​ನಲ್ಲಿರುವ ರಾಷ್ಟ್ರೀಯ ಅಂತರಿಕ್ಷಯಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 2022ರ ಜುಲೈನಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು. ಅಷ್ಟರಲ್ಲಿ ರಷ್ಯಾ ಯೂಕ್ರೇನ್​ ಮೇಲೆ ಯುದ್ಧ ಸಾರಿ, ದಾಳಿ ನಡೆಸುತ್ತಿದೆ. ಯೂಕ್ರೇನ್​-ರಷ್ಯಾ ನಡುವಿನ ಯುದ್ಧ ಇಂದು 13 ದಿನಗಳಿಗೆ ಕಾಲಿಟ್ಟಿದೆ.
ಯುದ್ಧದ ನಡುವೆಯೇ ಸೈನಿಕೇಶ್​ ಮತ್ತು ಪಾಲಕರ ಮಧ್ಯೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ಸೈನಿಕೇಶ್​ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ತಾನು ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್​ ಅರೆ ಸೇನಾ ಪಡೆಯನ್ನು ಸೇರಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಇದುವರೆಗೂ ನೋಡಿರದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ! ತಜ್ಞರು ಹೇಳಿದ ಕಾರಣ ಇಲ್ಲಿದೆ…

ರಷ್ಯಾದ ಮಿಲಿಟರಿ ವಾಹನಗಳ ಮೇಲಿರುವ Z ಸಂಕೇತವು ಏನನ್ನು ಸೂಚಿಸುತ್ತದೆ? ಇಲ್ಲಿದೆ ರೋಚಕ ಉತ್ತರ

ತಮಿಳುನಾಡು ಬಿಟ್ಟು ಬೇರೆ ರಾಜ್ಯಕ್ಕೆ ಶಿಫ್ಟ್​ ಆದ ನಟಿ ವರಲಕ್ಷ್ಮೀ ಶರತ್​ಕುಮಾರ್: ಕಾರಣ ಹೀಗಿದೆ…​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − two =
Remember me
