ಚೆನ್ನೈ:ಸಂಪೂರ್ಣ ಒಂದು ರೂಪಾಯಿ ನಾಣ್ಯಗಳನ್ನೇ ನೀಡಿ ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್​ ಖರೀದಿ ಮಾಡಿದ್ದಾನೆ. ಅಚ್ಚರಿಯೆಂದರೆ, ಇಡೀ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ಗಂಟೆ ಸಮಯ ಹಿಡಿದಿದೆ.
ಬೈಕ್​ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಕಳೆದ ಮೂರು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಭೂಪತಿ 1 ರೂ. ನಾಣ್ಯವನ್ನು ಸಂಗ್ರಹಿಸಿಕೊಂಡು ಬರುತ್ತಿದ್ದರು. ತನ್ನ ಉಳಿತಾಯ ಹಣವನ್ನೆಲ್ಲ ಒಮ್ಮೆಲೆ ಸಂಗ್ರಹಿಸಿ ಬೈಕ್​ ಶೋರೋಮ್​ಗೆ ತೆರಳಿ ತನ್ನ ಕನಸಿನ ಬೈಕ್​ ನ್ಯೂ ಬಜಾಜ್​ ಡಾಮಿನರ್​ ಖರೀದಿ ಮಾಡಿದ್ದಾರೆ.
ಭೂಪತಿ ತಂದಿದ್ದ ನಾಣ್ಯಗಳನ್ನು ಎಣಿಸಲು ಶೋರೂಮ್​ ಸಿಬ್ಬಂದಿ ಬರೋಬ್ಬರಿ 10 ಗಂಟೆ ಸಮಯ ತೆಗೆದುಕೊಂಡಿದ್ದಾಗಿ ಭಾರತ್​ ಏಜೆನ್ಸಿ ಕಂಪನಿಯ ಮ್ಯಾನೇಜರ್​ ಮಹಾವಿಕ್ರಾಂತ್​ ತಿಳಿಸಿದ್ದಾರೆ.
ಭೂಪತಿ ಬಿಸಿಎ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸುವ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಬೈಕ್ ಖರೀದಿಸುವ ಕನಸನ್ನು ಮೂರು ವರ್ಷಗಳ ಹಿಂದೆಯೇ ಹೊಂದಿದ್ದರು. ಆದರೆ, ಎರಡು ಲಕ್ಷ ಮೌಲ್ಯದ ಬೈಕ್​ ಖರೀದಿ ಮಾಡಲು ಅವರ ಬಳಿ ಅಷ್ಟೊಂದು ಮೊತ್ತ ಇರಲಿಲ್ಲ.
ಇದಾದ ಬಳಿಕ ಬೈಕ್​ ಖರೀದಿಸುವ ಕನಸಿನೊಂದಿಗೆ ಹಣ ಸಂಗ್ರಹಿಸಲು ಮುಂದಾದ ಭೂಪತಿ ಪ್ರತಿದಿನ ಸಿಕ್ಕಷ್ಟು ಒಂದೊಂದು ರೂಪಾಯಿ ನಾಣ್ಯವನ್ನು ಸಂಗ್ರಹಿಸಿದರು. ಅಂತಿಮವಾಗಿ ಬೈಕ್​ಗೆ ಬೇಕಾದಷ್ಟು ಹಣ ಸಂಗ್ರಹ ಮಾಡಿರುವ ಭೂಪತಿ ತನ್ನ ಇಚ್ಛೆಯ ಬೈಕ್​ ಖರೀದಿ ಮಾಡಿ ಕನಸನ್ನು ನನಸು ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)

ಬೇಕಿದ್ರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ: ಹಿಜಾಬ್​ ವಿವಾದದ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಭುವನ ಸುಂದರಿ!

ಬೇಕು ಅನಿಸಿದ್ರೆ ಮಂಚಕ್ಕೆ ಕರಿತೀನಿ.. ಸಹನಟನ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ನವ್ಯಾ ನಾಯರ್​!

‘ಯಾರೋ ಏನೋ ಅಂದ್ಬಿಟ್ರು ಅಂತಾ ಅನುಕಂಪ ಗಿಟ್ಟಿಸಿಕೊಳ್ಳಲು ಹೋದ್ರೆ ಯಾವಾಗಲೂ ನಡೆಯಲ್ಲ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
