ಚೆನ್ನೈ:ಭಾರತದಲ್ಲಿ ಬ್ಯಾನ್​ ಆಗಿರುವ ಆನ್​ಲೈನ್​ ಗೇಮ್​ ಪಬ್​ಜಿ ಲೈವ್​ ಸ್ಟ್ರೀಮಿಂಗ್​ ವೇಳೆ ಮಹಿಳೆಯರ ಬಗ್ಗೆ ಅಶ್ಲೀಲ ಭಾಷೆ ಬಳಕೆ ಮತ್ತು ಕೆಟ್ಟದಾಗಿ ಕಾಮೆಂಟರಿ ಮಾಡಿದ ಆರೋಪದ ಮೇಲೆ ಚೆನ್ನೈ ಮೂಲದ ಯೂಟ್ಯೂಬ್​ರನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿಸುವ ವಿಚಾರ ತಿಳಿದು ಪರಾರಿಯಾಗುತ್ತಿದ್ದ ಆರೋಪಿ ಮದನ್​ ಕುಮಾರ್​ನನ್ನು ಚೆನ್ನೈನಿಂದ ಸುಮಾರು 6 ಗಂಟೆಗಳ ಕಾಲ ಹಿಂಬಾಲಿಸಿ ಧರ್ಮಾಪುರಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮದನ್​ ಕುಮಾರ್​ ಪತ್ನಿ ಹಾಗೂ ಯೂಟ್ಯೂಬ್​ ಚಾನೆಲ್​ನ ನಿರ್ವಾಹಕರು ಆಗಿರುವ ಕೃತಿಕಾರನ್ನು ಮೊದಲೇ ಚೆನ್ನೈನಲ್ಲಿ ಬಂಧಿಸಲಾಗಿದೆ.
ತನಿಖಾಗಾರರು ಹೇಳುವಂತೆ ದಂಪತಿಯ ಯೂಟ್ಯೂಬ್​ ಚಾನೆಲ್​ಗೆ ಸುಮಾರು 8 ಲಕ್ಷ ಚಂದಾದಾರರಿದ್ದಾರೆ. ಅದರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. ಯೂಟ್ಯೂಬ್​ ಚಾನೆಲ್​ ವಿರುದ್ಧ ಚೆನ್ನೈ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.
ಟಾಕ್ಸಿಕ್​ ಮದನ್​ 18+, ಪಬ್​ಜಿ ಮದನ್​ ಗರ್ಲ್​ ಫ್ಯಾನ್​, ರಿಚಿ ಗೇಮಿಂಗ್​​ವೈಟಿ ಹೆಸರಿನ ಯೂಟ್ಯೂಬ್​ ಚಾನೆಲ್​ಗಳನ್ನು ದಂಪತಿ ನಡೆಸುತ್ತಿದ್ದಾರೆ. ಆದರೆ, ಮದನ್​ ಆ್ಯಂಗ್ರಿ ಅಟ್​ ಹಿಸ್​ ಗರ್ಲ್​ಫ್ರೆಂಡ್​| ಸ್ಟ್ರಿಕ್ಟ್​ಲಿ 18+| ತಮಿಳು| ಪಬ್​ಜಿಎಂ| ರಿಚಿ ಗೇಮಿಂಗ್​ ಹೆಸರಿನ ನಿರ್ಧಿಷ್ಟ ಯೂಟ್ಯೂಬ್​ ಚಾನೆಲ್​ನಲ್ಲಿ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವುದು, ಅಶ್ಲೀಲ ಪದಗಳನ್ನು ಬಳಸಿ ವೀಡಿಯೊಗಳನ್ನು ನೋಡುವ ಮಕ್ಕಳಲ್ಲಿ ವಿಕೃತತೆಯನ್ನು ಉಂಟುಮಾಡುವ ಗೌಪ್ಯತೆ ಮತ್ತು ಘನತೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.
ಬಹುತೇಕ ಅಪ್ರಾಪ್ತರೇ ಯೂಟ್ಯೂಬ್​ ಚಾನೆಲ್​ ಅನ್ನು ಹಿಂಬಾಲಿಸುತ್ತಿದ್ದು, ಚಾನೆಲ್​ ಮಾತ್ರವಲ್ಲದೇ ಮದನ್​ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ.
ಅವರ ಯಾವುದೇ ಚಂದಾದಾರರು ದೂರು ನೀಡಲು ಮುಂದೆ ಬರುವುದಾಗಿ ನಮಗೆ ಖಚಿತವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮಾತುಗಳು ಬಳಕಿ ಸರಿಯಲ್ಲ. ಪಬ್​ಜಿ ಅಥವಾ ಅಂತಹುದೇ ಆಟಗಳ ವಿಷಯದಲ್ಲಿ ಉಲ್ಲಂಘನೆಯ ವಿವರಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಮದನ್ ಕುಮಾರ್ ಅವರು ಯೂಟ್ಯೂಬ್‌ನಿಂದ ಬರುವ ಆದಾಯದಿಂದ ಭಾರೀ ಸಂಪತ್ತನ್ನು ಸಂಪಾದಿಸಿದ್ದಾರೆಂದು ಅಧಿಕಾರಿ ಹೇಳಿದರು. ಅವರು ತಿಂಗಳಿಗೆ ಸುಮಾರು 3 ಲಕ್ಷ ಸಂಪಾದಿಸಿದ್ದಾರೆಂದು ತೋರುತ್ತದೆ. ಅವರು 3 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ, ಅವುಗಳಲ್ಲಿ ಎರಡು ಆಡಿಸ್” ಎಂದು ಅಧಿಕಾರಿ ಹೇಳಿದ್ದಾರೆ.(ಏಜೆನ್ಸೀಸ್​)
ಅಮೆರಿಕಕ್ಕೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: ಕೋವಿಡ್‌ ಲಸಿಕೆ ಕಡ್ಡಾಯವಲ್ಲ

ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

ಕ್ಯಾಲೆಂಡರ್‌ಗೋಸ್ಕರ ಪುನಃ ಟಾಪ್‌ಲೆಸ್‌ ಆದ ನಟಿ- ಹಾಟ್‌ ಫೋಟೋಗಳು ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 8 =
Remember me
