ಹಿಂದೂಪುರ:ಅಣ್ಣಾ ಕ್ಯಾಂಟೀನ್​​ ವಿಚಾರವಾಗಿ ಆಂಧ್ರ ಪ್ರದೇಶದಲ್ಲಿ ರಾಜಕೀಯ ಕಿತ್ತಾಟ ನಡೆಯುತ್ತಿದೆ. ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಾರ್ಟಿ, ತೆಲುಗು ದೇಶ ಪಾರ್ಟಿ (ಟಿಡಿಪಿ) ನಡೆಸುತ್ತಿರುವ ಅಣ್ಣಾ ಕ್ಯಾಂಟೀನ್​ ಧ್ವಂಸ ಮಾಡಿದ ಬಳಿಕ ಎರಡು ಪಕ್ಷಗಳಲ್ಲಿನ ಸಂಘರ್ಷ ಇನ್ನೂ ಹೆಚ್ಚಾಗಿದ್ದು, ಒಬ್ಬರಿಗೊಬ್ಬರು ವಾಗ್ದಾಳಿ ನಡೆಸುತ್ತಿದ್ದಾರೆ.
ಶಾಸಕ ನಂದಮೂರಿ ಬಾಲಕೃಷ್ಣ ಅವರು ಮೇ ತಿಂಗಳಲ್ಲಿ ಎನ್‌ಟಿಆರ್‌ ಜಯಂತಿಯಂದು ತಮ್ಮ ಕ್ಷೇತ್ರದಲ್ಲಿ ಅನ್ನ ಕ್ಯಾಂಟೀನ್‌ ಉದ್ಘಾಟಿಸಿದರು. ಕ್ಯಾಂಟೀನ್ ಪ್ರತಿದಿನ 100 ಬಡವರಿಗೆ ಊಟ ನೀಡುತ್ತಿದ್ದು, ಇದೀಗ 100 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಟಿಡಿಪಿ ಸಂಭ್ರಮಾಚರಣೆ ಮಾಡಿದ್ದು, ಆರಚರಣೆಯ ಭಾಗವಾಗಿ ಭಾನುವಾರ ಕಡಿಮೆ ಬೆಲೆಗೆ ಜನರಿಗೆ ರುಚಿಕರವಾದ ಮಾಂಸಾಹಾರ ಊಟವನ್ನು ಉಣಬಡಿಸಿದೆ.
ಆಂಧ್ರದ ಹಿಂದೂಪುರದಲ್ಲಿರುವ ಅಣ್ಣಾ ಕ್ಯಾಂಟೀನ್​ನಲ್ಲಿ ಶಾಸಕ ನಂದಮೂರಿ ಬಾಲಕೃಷ್ಣ ಮತ್ತು ಅವರ ಅಭಿಮಾನಿಗಳು ಕೇವಲ 2 ರೂಪಾಯಿಗೆ ನಾನ್​ ವೆಜ್​ ಊಟ ನೀಡುವ ಮೂಲಕ ಕ್ಯಾಂಟೀನ್​ 100 ದಿನ ಪೂರೈಸಿದ ಸಂಭ್ರಮಾಚರಣೆ ಮಾಡಿದರು. ಕೇವಲ 2 ರೂಪಾಯಿಗೆ ಚಿಕನ್​ ಸಾಂಬರ್​, ದಾಲ್​, ಮೊಟ್ಟೆ, ಸಾಂಬಾರ್​, ಅನ್ನ, ಮೊಸರು ಹಾಗೂ ಒಂದು ಸ್ವೀಟ್​ ನೀಡಿದರು.
ಕೇವಲ 2 ರೂಪಾಯಿಗೆ ಭರ್ಜರಿ ಊಟ ಅಂದಮೇಲೆ ಕೇಳಬೇಕಾ, ಸಾಕಷ್ಟು ಜನರು ಊಟಕ್ಕಾಗಿ ಮುಗಿಬಿದ್ದದರು. ಸ್ಥಳದಲ್ಲಿ ಸಾಕಷ್ಟು ನೂಕು ನುಗ್ಗಲು ಉಂಟಾಗಿತ್ತು. ಆದರೂ, ಟಿಡಿಪಿ ಕಾರ್ಯಕರ್ತರು ಸರಿಯಾಗಿ ನಿರ್ವಹಣೆ ಮಾಡಿದರು. ರಾಜಕೀಯ ನಾಯಕರೇ ಜನರಿಗೆ ಉಣಬಡಿಸಿದರು.
ಕ್ಯಾಂಟೀನ್ ಜೊತೆಗೆ ಟಿಡಿಪಿ ಬಡವರಿಗಾಗಿ ಎನ್‌ಟಿಆರ್ ಉಚಿತ ಆರೋಗ್ಯ ಪಾಠಕಂ (ಎನ್‌ಟಿಆರ್ ಉಚಿತ ಆರೋಗ್ಯ ಯೋಜನೆ) ನಡೆಸುತ್ತಿದೆ ಎಂದು ಸ್ಥಳೀಯ ಮುಖಂಡರು ಹೇಳಿದರು. ರಾಜ್ಯದೆಲ್ಲೆಡೆ ಅಣ್ಣಾ ಕ್ಯಾಂಟೀನ್‌ಗಳ ನಿರ್ವಹಣೆಗೆ ವೈಎಸ್‌ಆರ್‌ ಕಾಂಗ್ರೆಸ್‌ ಸರಕಾರ ಅಡ್ಡಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಟೀಕಿಸಿದರು.(ಏಜೆನ್ಸೀಸ್​)
ಬಾಲಿವುಡ್​​ ಟಾರ್ಗೆಟ್​ ಆಗಿರುವುದೇಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್​!

ಹಳಿ ಮೇಲೆ ನಿಂತು Instagram ರೀಲ್ಸ್​ ಮಾಡುವಾಗ ರೈಲು ಡಿಕ್ಕಿ: ಹಾರಿ ಹೋಗಿ ಬಿದ್ದ ವಿದ್ಯಾರ್ಥಿಯ ಸ್ಥಿತಿ ಗಂಭೀರ

ರಸ್ತೆ ಅಪಘಾತ, ಪ್ರತಿ 60 ನಿಮಿಷಕ್ಕೆ 18 ಮಂದಿ ಬಲಿ: ಎನ್​ಸಿಆರ್​ಬಿ ವರದಿಯಲ್ಲಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
