ಹೈದರಾಬಾದ್​:ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎಂಬ ಮಾತಿದೆ. ಅದಕ್ಕೆ ಉದಾಹರಣೆಯಾಗಿ “ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬ ಗಾದೆ ಮಾತನ್ನು ನೆನಪಿಸುವಂತಹ ಘಟನೆಯೊಂದು ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯಲ್ಲಿ ನಡೆದಿದೆ. ಜಮೀನಿನಲ್ಲಿ ಅಚ್ಚರಿಯ ರೀತಿಯಲ್ಲಿ ಪತ್ತೆಯಾದ ನಿಧಿ ಯಾರಿಗೂ ಸೇರದೇ ಕೊನೆಗೆ ಪೊಲೀಸ್​ ಠಾಣೆ ವಶವಾದ ಪ್ರಕರಣ ಬೆಳಕಿಗೆ ಬಂದಿದೆ.
ಒಂದು ವಾರದ ಹಿಂದೆ ಜಿಲ್ಲೆಯ ರಾಮಣ್ಣಪೇಟ ವಲಯದಲ್ಲಿರುವ ಕುಂಕುಡಪಮುಲ ಗ್ರಾಮದಲ್ಲಿ ಕೊನ್ನೆಬೊಯ್ನ ಮಲ್ಲಯ್ಯ ಎಂಬುವರ ಜಮೀನಿನಲ್ಲಿ ಕೆಲಸ ಮಾಡುವಾಗ ಒಂದು ಮಡಿಕೆ ಮತ್ತು ಸಣ್ಣ ಕಬ್ಬಿಣದ ಪೆಟ್ಟಿಗೆ ಪತ್ತೆಯಾಗಿತ್ತು. ಅದನ್ನು ತೆರೆದಾಗ ಅಲ್ಲಿದ್ದವರಿಗೆ ಅಚ್ಚರಿಯೇ ಕಾದಿತ್ತು. ಏಕೆಂದರೆ, ಅದರಲ್ಲಿ ಬೆಳ್ಳಿ ಪಟ್ಟಿಗಳು ಮತ್ತು ನಾಣ್ಯಗಳು ಹಾಗೂ ಚಿನ್ನದ ಸ್ಟ್ಯಾಂಪ್ಸ್​ ಸೇರಿದಂತೆ ಚಿನ್ನ ಮತ್ತು ಬೆಳ್ಳಿಯ ತುಣುಕುಗಳು ಪತ್ತೆಯಾಗಿದ್ದವು. ಆದರೆ, ಒಡ್ಡಿನ ಆಚೆ ಲಿಂಗಯ್ಯ ಎಂಬುವರ ಜಮೀನಿನಲ್ಲಿ ನಾಟಿ ಮಾಡಲು ಬಂದಿದ್ದ ಕೂಲಿಕಾರರಿಗೆ ಈ ವಿಚಾರ ತಿಳಿಯಿತು. ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ಇದು ಅಶುಭ, ಅವುಗಳನ್ನು ತೆಗೆದುಕೊಂಡರೆ ಕೇಡಾಗುತ್ತದೆ ಎಂದು ಸಾರುತ್ತಾ ಸ್ಥಳದಿಂದ ಕಾಲ್ಕಿತ್ತಳು. ಇದರಿಂದ ಅಲ್ಲಿದ್ದವರಿಗೆ ಶಾಕ್​ ಕೂಡ ಆಯಿತು.

ಮಲ್ಲಯ್ಯ ಮತ್ತು ಲಿಂಗಯ್ಯ ಸಹೋದರರು. ಮಲ್ಯ ಅವರು ಬೆಳ್ಳಿ ನಾಣ್ಯಗಳು ಮತ್ತು ಚಿನ್ನದ ಅಂಚೆಚೀಟಿಗಳನ್ನು ಸಾಗಿಸಿ ರಹಸ್ಯ ಪ್ರದೇಶದಲ್ಲಿ ಇಡುವ ವಿಚಾರ ಸಹೋದರ ಲಿಂಗಯ್ಯ ಅವರಿಗೆ ತಿಳಿಯಿತು. ಎರಡು ಜಮೀನಿನ ಮಧ್ಯೆ ಇದ್ದ ಒಡ್ಡಿನಲ್ಲಿ ಪತ್ತೆಯಾದ್ದರಿಂದ ತನಗೂ ಒಂದು ಪಾಲು ಕೊಡುವಂತೆ ಲಿಂಗಯ್ಯ, ಮಲ್ಲಯ್ಯರನ್ನು ಕೇಳಿದ. ಆದರೆ, ಮಲ್ಯ ಒಪ್ಪಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಕಿತ್ತಾಟ ನಡೆಯಿತು. ಊರಿನ ಹಿರಿಯ ಬಳಿ ಹೋದರು ತಮಗೆ ಪರಿಹಾರ ಸಿಗಲಿಲ್ಲ.
ಈ ಸಮಸ್ಯೆ ದೊಡ್ಡದಾಗುತ್ತದೆ ಎಂದರಿತ ಮಲ್ಯ ನೇರವಾಗಿ ರಾಮಣ್ಣಪೇಟೆಯ ಪೊಲೀಸ್​ ಠಾಣೆಗೆ ತೆರಳಿ ತಮಗೆ ಸಿಕ್ಕಂತಹ ಎಲ್ಲ ವಸ್ತುವನ್ನು ಪೊಲೀಸರ ವಶಕ್ಕೆ ನೀಡಿದ. ವಾರದ ನಂತರ ಪೊಲೀಸ್​ ಠಾಣೆಯಲ್ಲೂ ಅವ್ಯವಹಾರ ನಡೆದಿದ್ದು ಬೆಳಕಿಗೆ ಬಂದಿದ್ದು, ಹಿರಿಯ ಅಧಿಕಾರಿಗಳು ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಜೀವಾವಧಿ ಶಿಕ್ಷೆ ವಿಧಿಸುತ್ತಿದ್ದಂತೆ ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ

ಚಿನ್ನ 55 ಸಾವಿರ ರೂ.ಗೆ?; ಹೊಸ ವರ್ಷಕ್ಕೆ ಚಿನ್ನ ದುಬಾರಿ?

ಲೋಕಲ್​ನಲ್ಲಿ ಕೈಕಮಾಲ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲುಗೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
