ಕಾಮರೆಡ್ಡಿ:ಭವಿಷ್ಯದಲ್ಲಿ ಸುಖವಾಗಿರುತ್ತೇವೆಂಬ ಆಸೆಯಿಂದ ಧರ್ಮವನ್ನು ಮೀರಿ ಇಷ್ಟಪಟ್ಟವನೊಂದಿಗೆ ಮದುವೆಯಾದ ಯುವತಿಯೊಬ್ಬಳ ಜೀವನ ದುರಂತ ಅಂತ್ಯ ಕಂಡಿದೆ.
ಅತ್ತೆಯ ಕಿರುಕುಳವನ್ನು ತಾಳಲಾರದೇ ಮದುವೆಯಾದ ಕೆಲವೇ ದಿವಸಗಳಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ವಿವರಣೆಗೆ ಬರುವುದಾದರೆ, ಮೃತ ಯುವತಿಯ ಹೆಸರು ಶ್ರಾವಂತಿ (19). ಈಕೆ ವಂಬೆ ಕಾಲನಿಯ ನಿವಾಸಿ. ಕ್ಲರ್ಕ್​ ಉದ್ಯೋಗಿ ಸಲ್ಮಾನ್​ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು. ಇದೇ ವರ್ಷ ಜನವರಿ 7ರಂದು ದರ್ಗಾದಲ್ಲಿ ಇಬ್ಬರು ಮದುವೆ ಆಗಿದ್ದರು.
ಮದುವೆಯಾದ ಬಳಿಕ ತನ್ನ ಹೆಸರನ್ನು ಸಮೀರಾ ಎಂದು ಬದಲಾಯಿಸಿಕೊಂಡಿದ್ದಳು. ಕಳೆದ ಎರಡು ತಿಂಗಳಿಂದ ಅತ್ತೆ ಮನೆಯನ್ನು ತೊರೆದು ಗಂಡನ ಜತೆ ಬೇರೆ ಮನೆಯಲ್ಲಿ ಸಮೀರಾ ವಾಸವಿದ್ದಳು. ಹೀಗಿರುವಾಗ ಭಾನುವಾರ ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಆಕೆಯ ಪಾಲಕರಿಗೆ ತಲುಪಿದೆ.
ಆದರೆ, ಮೃತಳ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಇರುವುದರಿಂದ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅತ್ತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪವೂ ಇದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ದೇವುನಿಪಲ್ಲಿ ಠಾಣಾ ಎಸ್​ಐ ರವಿಕುಮಾರ್​, ಮೃತಳ ಪಾಲಕರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಬೆಳ್ಳಂಬೆಳಗ್ಗೆ ಪೈಪ್​ ಏರಿ ನಟಿಯ ಮನೆಗೆ ನುಗ್ಗಿದ 24ರ ಯುವಕ! ಸ್ವಲ್ಪದರಲ್ಲಿ ತಪ್ಪಿತು ಅನಾಹುತ

ಧಾರಾವಾಹಿಗಳು ಮುಂದುವರಿಯಲಿವೆ; ತಿಂಗಳಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಶುರು

ಹೈದ್ರಾಬಾದ್ ಹುಡುಗಿಗೆ ಕೋಟಿ ಕೋಟಿ ಸಂಬಳ! ಟೆಕ್ ದೈತ್ಯ ಮೈಕ್ರೋಸಾಫ್ಟ್​ಗೆ ಭಾರತದ ಪ್ರತಿಭೆ ಆಯ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
